For the best experience, open
https://m.newskannada.com
on your mobile browser.
Advertisement

ಮದುವೆಗೆ ಹೊರಟಿದ್ದ ಬಸ್‌ ಪಲ್ಟಿ: ನಾಲ್ವರು ದುರಂತ ಅಂತ್ಯ

ಚಿತ್ರದುರ್ಗದಲ್ಲಿ ಶನಿವಾರ ಭೀಕರ ಅಪಘಾತವೊಂದು ನಡೆದಿದೆ. ಮದುವೆಗೆ ಹೊರಟಿದ್ದ ಬಸ್ ಭೀಕರ ಅಪಘಾತಕ್ಕೀಡಾಗಿ ನಾಲ್ವರು ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಹೊಸದುರ್ಗ-ಹೊಳಲ್ಕೆರೆ ಮಾರ್ಗದ ಉಗಣೆ ಕಟ್ಟೆ ಬಳಿ ನಡೆದಿದೆ. ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ದುರಂತ ಸಂಭವಿಸಿದೆ.
08:56 PM Dec 09, 2023 IST | Gayathri SG
ಮದುವೆಗೆ ಹೊರಟಿದ್ದ ಬಸ್‌ ಪಲ್ಟಿ  ನಾಲ್ವರು ದುರಂತ ಅಂತ್ಯ

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಶನಿವಾರ ಭೀಕರ ಅಪಘಾತವೊಂದು ನಡೆದಿದೆ. ಮದುವೆಗೆ ಹೊರಟಿದ್ದ ಬಸ್ ಭೀಕರ ಅಪಘಾತಕ್ಕೀಡಾಗಿ ನಾಲ್ವರು ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಹೊಸದುರ್ಗ-ಹೊಳಲ್ಕೆರೆ ಮಾರ್ಗದ ಉಗಣೆ ಕಟ್ಟೆ ಬಳಿ ನಡೆದಿದೆ. ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ದುರಂತ ಸಂಭವಿಸಿದೆ.

Advertisement

ಹೊಸದುರ್ಗ -ಹೊಳಲ್ಕೆರೆ ಮಾರ್ಗಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಬಸ್‌ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಇದರಿಂದ ನಾಲ್ವರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಹೊಳಲ್ಕೆರೆ, ಹೊಸದುರ್ಗ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸೀಗೆಹಟ್ಟಿಯಿಂದ ದಾವಣಗೆರೆಗೆ ಮದುವೆಯ ಬಸ್ ಹೋಗುತ್ತಿದ್ದಾಗ ಅಪಘಾತ ನಡೆದಿದೆ.

Advertisement

ಬಸ್‌ನಲ್ಲಿ 35 ಮಂದಿ ಮದುವೆಗೆ ಹೊರಟಿದ್ದರು. ಅದರೆ, ಅಪಘಾತದಲ್ಲಿ ಸುಮಾರು 15 ಮಂದಿಗೆ ಕೈ, ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಧಾವಿಸಿದ ಪೊಲೀಸರು, ನಾಲ್ಕೈದು ಆಂಬ್ಯುಲೆನ್ಸ್‌ಗಳ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು.

Advertisement
Tags :
Advertisement