For the best experience, open
https://m.newskannada.com
on your mobile browser.
Advertisement

ಮೈಸೂರು: ʼಅಪ್ಪ ಪ್ರಶಸ್ತಿ'ಗೆ ನಾಲ್ವರು ಲೇಖಕರು ಆಯ್ಕೆ

ಬಹುಮುಖಿ ಗೆಳೆಯರ ಬಳಗ, ಸುದ್ಧಿ ಸಂಗಾತಿ ಯೂಟ್ಯೂಬ್ ಚಾನಲ್ ಹಾಗೂ ಅಪೂರ್ವ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ಕೊಡಮಾಡುವ 'ಅಪ್ಪ ಪ್ರಶಸ್ತಿ'ಗೆ  ನಾಡಿನ ವಿವಿಧ ಲೇಖಕರ ನಾಲ್ಕು ಕೃತಿಗಳನ್ನು ಆಯ್ಕೆ ಮಾಡಲಾಗಿದೆ
12:05 PM Jul 10, 2024 IST | Ashitha S
ಮೈಸೂರು  ʼಅಪ್ಪ ಪ್ರಶಸ್ತಿ ಗೆ ನಾಲ್ವರು ಲೇಖಕರು ಆಯ್ಕೆ

ಮೈಸೂರು: ಬಹುಮುಖಿ ಗೆಳೆಯರ ಬಳಗ, ಸುದ್ಧಿ ಸಂಗಾತಿ ಯೂಟ್ಯೂಬ್ ಚಾನಲ್ ಹಾಗೂ ಅಪೂರ್ವ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ಕೊಡಮಾಡುವ 'ಅಪ್ಪ ಪ್ರಶಸ್ತಿ'ಗೆ  ನಾಡಿನ ವಿವಿಧ ಲೇಖಕರ ನಾಲ್ಕು ಕೃತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಬಳಗದ ಸಂಚಾಲಕ ಟಿ. ಸತೀಶ್ ಜವರೇಗೌಡ ತಿಳಿಸಿದ್ದಾರೆ.

Advertisement

2021 ರಿಂದ 2023ರ ನಡುವಿನ ಅವಧಿಯಲ್ಲಿ  ಪ್ರಕಟವಾಗಿರುವ ನಾಡಿನ ವಿವಿಧ ಭಾಗದ ಪ್ರತಿಭಾವಂತ ಲೇಖಕರಾದ ಕೊಡಗಿನ ಸ್ಮಿತಾ ಅಮೃತ್ ರಾಜ್ ಅವರ 'ನೆಲದಾಯ ಪರಿಮಳ' (ಲಲಿತ ಪ್ರಬಂಧಗಳ ಸಂಕಲನ), ಬೆಂಗಳೂರಿನ ಡಾ. ಟಿ. ವೆಂಕಟೇಶಮೂರ್ತಿ ಅವರ 'ಕನ್ನಡ ನಾಟಕಗಳು : ರಾತ್ರಿ ರೂಪಕಗಳು' (ವಿಮರ್ಶಾತ್ಮಕ ಕೃತಿ) ಮತ್ತು ಬಾಗಲಕೋಟೆಯ ಮಲ್ಲಿಕಾರ್ಜುನ ಶಲ್ಲಿಕೇರಿ ಅವರ 'ದೀಡೆಕರೆ ಜಮೀನು (ಕಥಾ ಸಂಕಲನ), ತುಮಕೂರಿನ ಗುರುಪ್ರಸಾದ್ ಕಂಟಲಗೆರೆ ಅವರ 'ಟ್ರಂಕು ತಟ್ಟೆ' (ಅನುಭವ ಕಥನ) - ಪ್ರಶಸ್ತಿಗೆ ಆಯ್ಕೆಯಾಗಿರುವ ಮೌಲಿಕ ಕೃತಿಗಳಾಗಿವೆ.

2021 ರಿಂದ 2023ರ ಅವಧಿಯಲ್ಲಿ ಪ್ರಕಟವಾಗಿರುವಂತಹ 'ಕಾವ್ಯ' ಪ್ರಕಾರ ಹೊರತುಪಡಿಸಿ, ಸಾಹಿತ್ಯದ ಇತರ ಪ್ರಕಾರದ ಕೃತಿಗಳನ್ನು ಪ್ರಶಸ್ತಿಗೆ ಆಹ್ವಾನಿಸಲಾಗಿದ್ದು, ವಿವಿಧ ಭಾಗಗಳ ಖ್ಯಾತ ಲೇಖಕರ ಕೃತಿಗಳೂ ಸೇರಿದಂತೆ ಒಟ್ಟು ೧೬೬ ಕೃತಿಗಳು ಪ್ರಶಸ್ತಿಗೆ ಬಂದಿದ್ದು, ಅಂತಿಮವಾಗಿ ಈ ನಾಲ್ಕು ಕೃತಿಗಳು ಆಯ್ಕೆಯಾಗಿವೆ ಎಂದು ಅಪ್ಪ ಪ್ರಶಸ್ತಿ ಸಮಿತಿಯ ಸಂಚಾಲಕರಾದ ಹಡವನಹಳ್ಳಿ ವೀರಣ್ಣಗೌಡ ಹಾಗೂ ಸಹ ಸಂಚಾಲಕ ದಂಡಿನಶಿವರ ಮಂಜುನಾಥ್ ತಿಳಿಸಿದ್ದಾರೆ.

Advertisement

'ಅಪ್ಪ ಪ್ರಶಸ್ತಿ'ಯು ಐದು ಸಾವಿರ ರೂ. ನಗದು, ಪ್ರಶಸ್ತಿ ಪತ್ರ ಮತ್ತು ಫಲಕವನ್ನು ಒಳಗೊಂಡಿದ್ದು, ಈ ಬಾರಿ ಪ್ರಶಸ್ತಿ ಪ್ರದಾನ ಸಮಾರಂಭವು ಆ. 4 ರಂದು ತುಮಕೂರಿನಲ್ಲಿ ನಡೆಯಲ್ಲಿದ್ದು, ಖ್ಯಾತ ಸಾಹಿತಿ ಮತ್ತು ಚಲನಚಿತ್ರ ನಿರ್ದೇಶಕರಾದ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಪ್ರಶಸ್ತಿ ಪ್ರದಾನ ಮಾಡುವರು ಎಂದು ಟಿ. ಸತೀಶ್ ಜವರೇಗೌಡ ಅವರು ತಿಳಿಸಿದ್ದಾರೆ.

Advertisement
Tags :
Advertisement