For the best experience, open
https://m.newskannada.com
on your mobile browser.
Advertisement

ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ ಕಿಡ್ನಿ ತಜ್ಞರ ಜತೆ (ನೆಫ್ರಾಲಜಿಸ್ಟ್) ಉಚಿತ ಸಮಾಲೋಚನೆ

ವಿಶ್ವ ಕಿಡ್ನಿ ದಿನದ ಪ್ರಯುಕ್ತ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಕಿಡ್ನಿ ತಜ್ಞರ ಜತೆ (ನೆಫ್ರಾಲಜಿಸ್ಟ್) ಉಚಿತ ಸಮಾಲೋಚನೆಯನ್ನು ಮಾರ್ಚ್ 14 ರಿಂದ ಮಾರ್ಚ್ 19 ರವರೆಗೆ, ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಹಮ್ಮಿಕೊಳ್ಳಲಾಗಿದೆ. ವಿವಿಧ ಕಿಡ್ನಿ-ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರು ಕಿಡ್ನಿ ರೋಗದ ಕುರಿತು ತಜ್ಞರ ಜತೆ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆದುಕೊಳ್ಳಬಹುದು.
06:55 AM Mar 14, 2024 IST | Ashitha S
ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ ಕಿಡ್ನಿ ತಜ್ಞರ ಜತೆ  ನೆಫ್ರಾಲಜಿಸ್ಟ್  ಉಚಿತ ಸಮಾಲೋಚನೆ

ಮಂಗಳೂರು: ವಿಶ್ವ ಕಿಡ್ನಿ ದಿನದ ಪ್ರಯುಕ್ತ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಕಿಡ್ನಿ ತಜ್ಞರ ಜತೆ (ನೆಫ್ರಾಲಜಿಸ್ಟ್) ಉಚಿತ ಸಮಾಲೋಚನೆಯನ್ನು ಮಾರ್ಚ್ 14 ರಿಂದ ಮಾರ್ಚ್ 19 ರವರೆಗೆ, ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಹಮ್ಮಿಕೊಳ್ಳಲಾಗಿದೆ. ವಿವಿಧ ಕಿಡ್ನಿ-ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರು ಕಿಡ್ನಿ ರೋಗದ ಕುರಿತು ತಜ್ಞರ ಜತೆ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆದುಕೊಳ್ಳಬಹುದು.

Advertisement

ತೀವ್ರ ಮತ್ತು ದೀರ್ಘಕಾಲದ ಮೂತ್ರಪಿಂqದÀ ಕಾಯಿಲೆ, ಕಿಡ್ನಿ ಸ್ಟೋನ್, ಅಧಿಕ ರಕ್ತದೊತ್ತಡದಿಂದ ಮೂತ್ರಪಿಂಡದ ಹಾನಿ, ಮಧುಮೇಹ, ಸೋಂಕುಗಳು, ಮೂತ್ರದಲ್ಲಿ ರಕ್ತ, ಪ್ರೋಟೀನ್ ಹೋಗುವುದು, ಅನುವಂಶಿಕ ಮೂತ್ರಪಿಂಡದ ಅಸ್ವಸ್ಥತೆಗಳು, ರೆನೋವಾಸ್ಕುಲರ್ ಡಿಸೀಸ್, ಪರ್ಮಾಕ್ಯಾತ್ ಅಳವಡಿಕೆ, ಹಿಮೋಡಯಾಲಿಸಿಸ್ ಮತ್ತು ಪೆರಿಟೋನಿಯಲ್ ಡಯಾಲಿಸಿಸ್ ಸೇರಿದಂತೆ ವ್ಯಾಪಕ ಶ್ರೇಣಿಯ ಮೂತ್ರಪಿಂಡದ ಕಾಯಿಲೆಗಳನ್ನು ಪರಿಹರಿಸಲು ನೆಫ್ರಾಲಜಿ ವಿಭಾಗವು ಸಮಾಲೋಚನೆಗಾಗಿ ಲಭ್ಯವಿರುತ್ತದೆ.

ವೈದ್ಯಕೀಯ ಅಧೀಕ್ಷಕರಾದ, ಡಾ ಜಾನ್ ರಾಮಪುರಂ ಅವರು ಮೂತ್ರಪಿಂಡದ ಆರೋಗ್ಯದ ಬಗ್ಗೆ ಕಾಳಜಿವಹಿಸುವ ರೋಗಿಗಳು ನಮ್ಮ ಅನುಭವಿ ನೆಫ್ರಾಲಜಿಸ್ಟ್‍ನೊಂದಿಗೆ ಯಾವುದೇ ವೆಚ್ಚವಿಲ್ಲದೆ ಸಮಾಲೋಚಿಸಲು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು. ಆರಂಭಿಕ ರೋಗ ಪತ್ತೆ ಮತ್ತು ಮಧ್ಯಸ್ಥಿಕೆಯು ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಉತ್ತಮ ಚಿಕಿತ್ಸೆ ಮತ್ತು ಫಲಿತಾಂಶಗಳಿಗೆ ಗಣನೀಯವಾಗಿ ಕೊಡುಗೆ ನೀಡುತ್ತದೆ.

Advertisement

ಈ ಉಚಿತ ಸಮಾಲೋಚನೆಯನ್ನು ಪಡೆಯಲಿಚ್ಚಿಸುವವರು ಮುಂಗಡ ನೋಂದಾವಣೆಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ: 88615 86249

Advertisement
Tags :
Advertisement