For the best experience, open
https://m.newskannada.com
on your mobile browser.
Advertisement

ಫಾದರ್‌ ಮುಲ್ಲರ್‌ ವೈದ್ಯಕೀಯ ಕಾಲೇಜಿನಲ್ಲಿ ಮೂಳೆ ಚಿಕಿತ್ಸೆಯಲ್ಲಿನ ಆಧುನಿಕ ತಂತ್ರಜ್ಞಾನ ಪ್ರದರ್ಶನ

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಮೂಳೆ ಚಿಕಿತ್ಸಾ ವಿಭಾಗವು ಒಂದು ದಿನದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಆಯೋಜಿಸಿ ಆರ್ತ್ರೋಸ್ಕೊಪಿ ಬಗೆಗಿನ ಶಸ್ತ್ರಚಿಕಿತ್ಸಾ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತು.
06:37 PM Apr 29, 2024 IST | Maithri S
ಫಾದರ್‌ ಮುಲ್ಲರ್‌ ವೈದ್ಯಕೀಯ ಕಾಲೇಜಿನಲ್ಲಿ ಮೂಳೆ ಚಿಕಿತ್ಸೆಯಲ್ಲಿನ ಆಧುನಿಕ ತಂತ್ರಜ್ಞಾನ ಪ್ರದರ್ಶನ

ಕಂಕನಾಡಿ: ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಮೂಳೆ ಚಿಕಿತ್ಸಾ ವಿಭಾಗವು ಒಂದು ದಿನದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಆಯೋಜಿಸಿ ಆರ್ತ್ರೋಸ್ಕೊಪಿ ಬಗೆಗಿನ ಶಸ್ತ್ರಚಿಕಿತ್ಸಾ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತು.

Advertisement

ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಆಗಮಿಸಿದ ಡಾ.ಎಮ್.ಶಾಂತರಾಮ್‌ ಶೆಟ್ಟಿ ಮಂಗಳೂರುನ್ನು ವೈದ್ಯಕೀಯ ಕ್ಷೇತ್ರದ ಕೇಂದ್ರ ಎಂದು ಕರೆದು, ಸಂಸ್ಥೆಯ ಸೇವೆಯನ್ನು ಶ್ಲಾಘಿಸಿದರು. ದೂರದೂರುಗಳಿಂದ ರೋಗಿಗಳನ್ನು ಸೆಳೆಯುವ ಉತ್ತಮ ಗುಣಮಟ್ಟದ ಚಿಕಿತ್ಸೆ ಹಾಗು ಆರೋಗ್ಯ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

ವೈದ್ಯರ ಪರೋಪಕಾರಿ ಗುಣವನ್ನು ಬಣ್ಣಿಸಿದ ಸಂಸ್ಥೆಯ ನಿರ್ದೇಶಕ ವಂ.ಫಾ.ರಿಚರ್ಡ್‌ ಅಲೋಶಿಯಸ್‌, ಅವರುಗಳನ್ನು ರೋಗಿಗಳನ್ನು ಗುಣಪಡಿಸುವ ಮಹತ್ತರ ಕಾರ್ಯ ಮಾಡುವ ದೇವರ ದೂತರು ಎಂದು ಕರೆದರು.

Advertisement

ಕಾರ್ಯಕ್ರಮದಲ್ಲಿ ಮೂಳೆ ಶಸ್ತ್ರಚಿಕಿತ್ಸೆಯಲ್ಲಿ ಇತ್ತೀಚಿನ ಪ್ರಗತಿಗಳನ್ನು ಬಿಂಬಿಸುವ ಮೂರು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಯಿತು. ಇದರೊಂದಿಗೆ ಮೂಳೆಚಿಕಿತ್ಸೆಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.

Advertisement
Tags :
Advertisement