For the best experience, open
https://m.newskannada.com
on your mobile browser.
Advertisement

ಹುಮನಾಬಾದ್: ಗಡವಂತಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

ತಾಲ್ಲೂಕಿನ ಗಡವಂತಿ ಗ್ರಾಮದ ಐತಿಹಾಸಿಕ ಹಿನ್ನಲೆಯುಳ್ಳ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಅಗ್ನಿ ತುಳಿಯುವ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನದಂತೆ ನಡೆಯಿತು.
09:22 AM Jan 19, 2024 IST | Gayathri SG
ಹುಮನಾಬಾದ್  ಗಡವಂತಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

ಹುಮನಾಬಾದ್: ತಾಲ್ಲೂಕಿನ ಗಡವಂತಿ ಗ್ರಾಮದ ಐತಿಹಾಸಿಕ ಹಿನ್ನಲೆಯುಳ್ಳ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಅಗ್ನಿ ತುಳಿಯುವ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನದಂತೆ ನಡೆಯಿತು.

Advertisement

ನಸುಕಿನ ಜಾವ ದೇವಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಸಲ್ಲಿಸಿ ವೀರಭದ್ರೇಶ್ವರ ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ನಂತರ ಗ್ರಾಮದ ಪ್ರಮುಖ ರಸ್ತೆಗಳ ಮಾರ್ಗಗಳಲ್ಲಿ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಅಗ್ನಿಕುಂಡಕ್ಕೆ ವಿಶೇಷ ಪೂಜೆ ಸಲ್ಲಿಸಿ ಅಗ್ನಿ ತುಳಿಯುವ ಕಾರ್ಯಕ್ರಮ ನಡೆಯಿತು.

Advertisement

ವೀರಭದ್ರೇಶ್ವರ ಪಲ್ಲಕ್ಕಿಯೊಂದಿಗೆ ಸ್ವಾಮೀಜಿಗಳು ಹಾಗೂ ಗಣ್ಯರು ಅಗ್ಗಿ ತುಳಿಯುವುದು ಮುಗಿಯುತ್ತಿದ್ದಂತೆ ಗ್ರಾಮದ ನೂರಾರು ಭಕ್ತರು ಅಗ್ನಿ ತುಳಿದು ಹರಕೆ ತಿರಿಸಿದರು. ಪಲ್ಲಕ್ಕಿ ಮೆರಣಿಗೆಯಲ್ಲಿ ವೀರಭದ್ರೇಶ್ವರ ದೇವರಿಗೆ ಜಯವಾಗಲಿ, ಓಂ ಭಲೋ ಶಂಕರ ಭಲೋ ಎಂದು ಜಯ ಘೋಷಣೆ ಕೇಳಿಬಂದವು.

ವೀರಭದ್ರೇಶ್ವರ ಅಗ್ನಿ ತುಳಿಯುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಭಾಗವಹಿಸಿ ದೇವರ ದರ್ಶನ ಪಡೆದರು. ರಾತ್ರಿ ಸಾವಿರ ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಿತು.

ಈ ಸಂದರ್ಭದಲ್ಲಿ ಬಸವಣಪ್ಪ ವಿಭೂತಿ, ಪ್ರೇಮಕುಮಾರ ಹೆಮಣಿ, ಮಲ್ಲಿಕಾರ್ಜುನ್ ಕುಂಬಾರ, ಮಲ್ಲಿಕಾರ್ಜುನ್ ಕಿಟ್ಟಾ, ಗುರುಲಿಂಗ ಭಾವಿ, ಗುರಪ್ಪ ವಿಭೂತಿ, ನಿರಂಜಪ್ಪ ವಿಭೂತಿ, ರವಿ ಹೊಸಳ್ಳಿ, ಗಜೇಂದ್ರ ಕನಕಟ್ಕರ್, ಈಶ್ವರ ಕಲಬುರಗಿ, ಶಶಿಕಾಂತ ಘನಶ್ರೀ, ಶಾಂತಕುಮಾರ ಸ್ವಾಮಿ, ಸಂಜುಕುಮಾರ ಪಸಾರ್ಗಿ, ಡಾ.ರಾಜಕುಮಾರ ಭೋಲಾ, ಅಶೋಕ ವಿಭೂತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement
Tags :
Advertisement