For the best experience, open
https://m.newskannada.com
on your mobile browser.
Advertisement

ಗಗನ್‌ಯಾನ್‌ ಯೋಜನೆ; ಬಾಹ್ಯಾಕಾಶಕ್ಕೆ ಹಾರಲಿರುವ ನಾಲ್ವರು ಗಗನಯಾತ್ರಿಗಳಿಗೆ ವಿಷೇಶ ತರಬೇತಿ

ಗಗನ್‌ಯಾನ್‌ ಯೋಜನೆಯಡಿ ಭಾರತದ ಚೊಚ್ಚಲ ಮಾನವ ಬಾಹ್ಯಾಕಾಶ ಯಾನಕ್ಕೆ ನಾಲ್ವರು ಆಯ್ಕೆಯಾಗಿದಾರೆ.ಮಂಗಳವಾರ ಕೇರಳದ ತಿರುವನಂತಪುರಂನಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ (VSSI) ಪ್ರಧಾನಿ ನರೇಂದ್ರ ಮೋದಿ (Narendra Modi) ಗಗನಯಾತ್ರಿಗಳ ಹೆಸರು ಘೋಷಣೆ ಮಾಡಿದ್ದಾರೆ
05:58 PM Feb 28, 2024 IST | Nisarga K
ಗಗನ್‌ಯಾನ್‌ ಯೋಜನೆ  ಬಾಹ್ಯಾಕಾಶಕ್ಕೆ ಹಾರಲಿರುವ  ನಾಲ್ವರು ಗಗನಯಾತ್ರಿಗಳಿಗೆ ವಿಷೇಶ ತರಬೇತಿ
ಗಗನ್‌ಯಾನ್‌ ಯೋಜನೆ; ಬಾಹ್ಯಾಕಾಶಕ್ಕೆ ಹಾರಲಿರುವ ನಾಲ್ವರು ಗಗನಯಾತ್ರಿಗಳಿಗೆ ವಿಷೇಶ ತರಬೇತಿ

ಬೆಂಗಳೂರು: ಗಗನ್‌ಯಾನ್‌ ಯೋಜನೆಯಡಿ ಭಾರತದ ಚೊಚ್ಚಲ ಮಾನವ ಬಾಹ್ಯಾಕಾಶ ಯಾನಕ್ಕೆ ನಾಲ್ವರು ಆಯ್ಕೆಯಾಗಿದಾರೆ.ಮಂಗಳವಾರ ಕೇರಳದ ತಿರುವನಂತಪುರಂನಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ (VSSI) ಪ್ರಧಾನಿ ನರೇಂದ್ರ ಮೋದಿ (Narendra Modi) ಗಗನಯಾತ್ರಿಗಳ ಹೆಸರು ಘೋಷಣೆ ಮಾಡಿದ್ದಾರೆ. ಪಿ ಬಾಲಕೃಷ್ಣನ್ ನಾಯರ್, ಅಂಗದ್ ಪ್ರತಾಪ್, ಅಜಿತ್ ಕೃಷ್ಣನ್ ಮತ್ತು ಶುಭಾಂಶು ಶುಕ್ಲಾ ಈ ನಾಲ್ವರು ಗಗನಯಾತ್ರಿಗಳು ಗಗನ್‌ಯಾನ್‌ ಯೋಜನೆಯಡಿ ಬಾಹ್ಯಾಕಾಶಕ್ಕೆ ಹಾರಲಿದ್ದಾರೆ. ಇವರೆಲ್ಲರೂ ಭಾರತೀಯ ವಾಯುಪಡೆಯವರಾಗಿದ್ದು ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ, ಇದು ಬಾಹ್ಯಾಕಾಶ ಯಾನಕ್ಕೆ ಪ್ರಮುಖ ಅವಶ್ಯಕತೆಯಾಗಿದೆ.

Advertisement

ಅಭ್ಯರ್ಥಿಗಳು ಇತರ ದೇಶದವರೊಂದಿಗೆ ಭಾರತದ ಐತಿಹಾಸಿಕ ಗಗನಯಾತ್ರಿ ಅಭ್ಯರ್ಥಿಗಳೆಂದು ದೃಢೀಕರಿಸುವ ಮೊದಲು ಎರಡು ದೇಶಗಳಲ್ಲಿ (ಭಾರತ ಮತ್ತು ರಷ್ಯಾ) ಮತ್ತು ಒಂದು ಡಜನ್ ವಿಭಿನ್ನ ಪರಿಸರಗಳಲ್ಲಿ 2018-2019 ರಿಂದ ಪ್ರಾರಂಭವಾಗುವ ಕಠಿಣ ಸ್ಕ್ರೀನಿಂಗ್, ಆಯ್ಕೆ ಮತ್ತು ತರಬೇತಿ ಪೂರೈಸಿ ಮೂಲಕ ಆಯ್ಕೆ ಆಗಿರುವುದಾಗಿ ಮೂಲ ತಿಳಿಸಿದೆ. ನಾಲ್ಕು ಅಭ್ಯರ್ಥಿಗಳಲ್ಲಿ ಅಂತಿಮವಾಗಿ 7 ದಿನಗಳಲ್ಲಿ ಕಾರ್ಯಚಾರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 2025 ರಲ್ಲಿಗಗನಯಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಈ ಗಗನ್‌ಯಾನ್‌ ಆಯ್ಕೆಯ ಕುರಿತು ನೋಡುವುದಾದರೆ;
ಗಗನಯಾತ್ರಿಗಳು ವೈದ್ಯಕೀಯ, ಭೂವಿಜ್ಞಾನ ಮತ್ತು ಹಾರಾಟದಂತಹ ತಮ್ಮ ಕ್ಷೇತ್ರಗಳಲ್ಲಿ ಅನುಭವಿ ವೃತ್ತಿಪರರಾಗಿರಬೇಕು.ಗಗನಯಾತ್ರಿ ಆಯ್ಕೆಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 39 ಆಗಿತ್ತು. ವಿಜ್ಞಾನ ಮತ್ತು ಎಂಜಿನಿಯರ್‌ಗಳ ಪದವಿ ನಂತರ ವೃತ್ತಿ ಅನುಭವ ಅಗತ್ಯ. NASA ಗಾಗಿ, ಜೆಟ್ ವಿಮಾನದಲ್ಲಿ ಸುಮಾರು 1,000 ಗಂಟೆಗಳ ಹಾರಾಟವನ್ನು ಹೊಂದಿರುವ ಕೂಡ ಅರ್ಹರಾಗುತ್ತಾರೆ.

Advertisement

ಅಭ್ಯರ್ಥಿಗಳ ದೃಷ್ಟಿ, ರಕ್ತದೊತ್ತಡ ಮತ್ತು ಹೃದಯರಕ್ತನಾಳದ ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಗಳನ್ನು ಮಾಡಲಾಗುತ್ತದೆ.ನಂತರ ಬಾಹ್ಯಾಕಾಶ ಹಾರಾಟದ ಮೈಕ್ರೋಗ್ರಾವಿಟಿಯನ್ನು ಅನುಕರಿಸುವ ಪರಿಸರಕ್ಕೆ ಒಡ್ಡಿಕೊಳ್ಳುವುದನ್ನು ಒಳಗೊಂಡ ಪ್ರಾಥಮಿಕ ತರಬೇತಿಗೆ ತೆರಳುತ್ತಾರೆ. ಬಾಹ್ಯಾಕಾಶ ನಡಿಗೆಗೆ ತರಬೇತಿ ನೀಡುತ್ತಾರೆ ಮತ್ತು ಅಣಕು ಸ್ಪೇಸ್‌ಸೂಟ್ ಧರಿಸಿ ಈಜು ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ.ಅಲ್ಲದೆ ತುರ್ತು ಪರಿಸ್ಥಿತಿಗಳನ್ನು ಎದುರಿಸಲು, ರೋಬೋಟಿಕ್ ಕೌಶಲ್ಯಗಳನ್ನು ಕಲಿಯಲು ಮತ್ತು ತುರ್ತು ಬಾಹ್ಯಾಕಾಶ ಹಾರಾಟದ ಸಮಯದಲ್ಲಿ ಅವರು ಒಡ್ಡಿಕೊಳ್ಳಬಹುದಾದ ಯಾವುದೇ ಭಾಷೆಗಳೊಂದಿಗೆ ತಮ್ಮನ್ನು ತಾವು ಪರಿಚಿತರಾಗಲು ತರಬೇತಿ ನೀಡುತ್ತಾರೆ.ತರಬೇತಿ ಪ್ರಕ್ರಿಯೆಯು 18 ತಿಂಗಳಿಂದ ಎರಡು ವರ್ಷಗಳವರೆಗೆ ನಡೆಯಬಹುದು ಎಂದು ಹೇಳಲಾಗಿದೆ.

Advertisement
Tags :
Advertisement