For the best experience, open
https://m.newskannada.com
on your mobile browser.
Advertisement

ಧೋನಿಯನ್ನು ಪ್ರೀತಿಯಿಂದ ಹಗ್ ಮಾಡಿದ ಗೌತಮ್ ಗಂಭೀರ್; ವಿಡಿಯೋ ವೈರಲ್

2011ರ ವರ್ಲ್ಡ್​​ಕಪ್ ಗೆಲುವಿನ ಪ್ರಮುಖ ರುವಾರಿ ಎಂಎಸ್​ ಧೋನಿ ಹಾಗೂ ಗೌತಮ್ ಗಂಭೀರ್ ಚಪಾಕ್ ಸ್ಟೇಡಿಯಂನಲ್ಲಿ ಪ್ರೀತಿಯಿಂದ ಪರಸ್ಪರ ಹಗ್ ಮಾಡಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ
10:43 AM Apr 09, 2024 IST | Ashitha S
ಧೋನಿಯನ್ನು ಪ್ರೀತಿಯಿಂದ ಹಗ್ ಮಾಡಿದ ಗೌತಮ್ ಗಂಭೀರ್  ವಿಡಿಯೋ ವೈರಲ್

ಚೆನ್ನೈ: 2011ರ ವರ್ಲ್ಡ್​​ಕಪ್ ಗೆಲುವಿನ ಪ್ರಮುಖ ರುವಾರಿ ಎಂಎಸ್​ ಧೋನಿ ಹಾಗೂ ಗೌತಮ್ ಗಂಭೀರ್ ಚಪಾಕ್ ಸ್ಟೇಡಿಯಂನಲ್ಲಿ ಪ್ರೀತಿಯಿಂದ ಪರಸ್ಪರ ಹಗ್ ಮಾಡಿಕೊಂಡಿದ್ದಾರೆ.

Advertisement

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಧೋನಿ ಬಳಗ ಗೆದ್ದು ಬೀಗಿದೆ. ಪಂದ್ಯ ಮುಗಿದ ಬಳಿಕ ಒಬ್ಬರನ್ನೊಬ್ಬರನ್ನು ಹಗ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿ ಫ್ಯಾನ್ಸ್ ಖಷಿಪಟ್ಟಿದ್ದಾರೆ.

ಹೌದು. . ಚೆನ್ನೈನ ಚಿದಂಬರಮ್ ಸ್ಟೇಡಿಯಂನಲ್ಲಿ ಸಿಎಸ್​ಕೆ ಹಾಗೂ ಕೆಕೆಆರ್ ಪಂದ್ಯ ನಡೆದಿದೆ. ಟಾಸ್ ಗೆದ್ದ ಚೆನ್ನೈ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಕೆಕೆಆರ್ ತಂಡ 20 ಓವರ್​ನಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 137 ರನ್​ ಟಾರ್ಗೆಟ್ ನೀಡಿತು. ಗೌತಮ್ ಅವರು ಕೆಕೆಆರ್​ ತಂಡದ ಮೆಂಟರ್ ಆಗಿದ್ದಾರೆ.

Advertisement

ಪಂದ್ಯ ಮುಗಿದ ಬಳಿಕ ಎದುರಾಳಿ ತಂಡದವರು ಬಂದು ಶೇಕ್​ ಹ್ಯಾಂಡ್ ಮಾಡಿದರು. ಈ ವೇಳೆ ಗಂಭೀರ್ ಹಾಗೂ ಧೋನಿ ಪರಸ್ಪರ ಹಗ್ ಮಾಡಿಕೊಂಡಿದ್ದಾರೆ. ಗೌತಮ್ ಅವರು ಖುಷಿ ಖುಷಿಯಿಂದ ಧೋನಿಯನ್ನು ಅಪ್ಪಿದ್ದಾರೆ. ಈ ವಿಡಿಯೋ ಫ್ಯಾನ್ಸ್ ಪೇಜ್​ಗಳಲ್ಲಿ ವೈರಲ್ ಆಗುತ್ತಿದೆ.

Advertisement
Tags :
Advertisement