For the best experience, open
https://m.newskannada.com
on your mobile browser.
Advertisement

ರಾಮ್‌ ಚರಣ್‌ ನಟನೆಯ ʻಗೇಮ್‌ ಚೇಂಜರ್‌ʼ ಮೊದಲ ಸಾಂಗ್‌ ಔಟ್‌

ರಾಮಚರಣ್‌ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿನಯದ ಗೇಮ್‌ ಚೇಂಜರ್‌ ಸಿನಿಮಾದ ಮೊದಲ ಸಾಂಗ್‌ನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ರಾಮ್‌ಚರಣ್‌ ಈ ಹಾಡಿನಲ್ಲಿ ವಿಷೇಶ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಅವರಿಗೆ ಕಿಯಾರ ಅಡ್ವಾಣಿ ಜೋಡಿಯಾಗಿದ್ದಾರೆ. ʻಜರಗಂಡಿʼ ಎಂಬ ಶೀರ್ಷಿಕೆಯ ಈ ಹಾಡನ್ನು ಪಂಜಾಬಿ ಪಾಪ್ ಗಾಯಕ ದಲೇರ್ ಮೆಹಂದಿ ಮತ್ತು ಸುನಿಧಿ ಚೌಹಾನ್ ಹಾಡಿದ್ದಾರೆ. ಈ ಹಾಡನ್ನು ಸಂಗೀತ ನಿರ್ದೇಶಕ ಥಮನ್ ಎಸ್ ರಚಿಸಿದ್ದಾರೆ. ಇದೀಗ ಎಲ್ಲೆಡೆ ಈ ಮೊದಲ ಹಾಡಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
11:46 AM Mar 27, 2024 IST | Nisarga K
ರಾಮ್‌ ಚರಣ್‌ ನಟನೆಯ ʻಗೇಮ್‌ ಚೇಂಜರ್‌ʼ ಮೊದಲ ಸಾಂಗ್‌ ಔಟ್‌
ರಾಮ್‌ ಚರಣ್‌ ನಟನೆಯ ʻಗೇಮ್‌ ಚೇಂಜರ್‌ʼ ಮೊದಲ ಸಾಂಗ್‌ ಔಟ್‌

ಬೆಂಗಳೂರು : ರಾಮಚರಣ್‌ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿನಯದ ಗೇಮ್‌ ಚೇಂಜರ್‌ ಸಿನಿಮಾದ ಮೊದಲ ಸಾಂಗ್‌ನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ರಾಮ್‌ಚರಣ್‌ ಈ ಹಾಡಿನಲ್ಲಿ ವಿಷೇಶ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಅವರಿಗೆ ಕಿಯಾರ ಅಡ್ವಾಣಿ ಜೋಡಿಯಾಗಿದ್ದಾರೆ. ʻಜರಗಂಡಿʼ ಎಂಬ ಶೀರ್ಷಿಕೆಯ ಈ ಹಾಡನ್ನು ಪಂಜಾಬಿ ಪಾಪ್ ಗಾಯಕ ದಲೇರ್ ಮೆಹಂದಿ ಮತ್ತು ಸುನಿಧಿ ಚೌಹಾನ್ ಹಾಡಿದ್ದಾರೆ. ಈ ಹಾಡನ್ನು ಸಂಗೀತ ನಿರ್ದೇಶಕ ಥಮನ್ ಎಸ್ ರಚಿಸಿದ್ದಾರೆ. ಇದೀಗ ಎಲ್ಲೆಡೆ ಈ ಮೊದಲ ಹಾಡಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

ಹಾಡಿನಲ್ಲಿ ಕಿಯಾರಾ ಆಡ್ವಾಣಿ ಹಾಗೂ ರಾಮ್ ಚರಣ್ ಡ್ಯಾನ್ಸ್‌ ಮಾಡಿರುವ ಸಣ್ಣ ಕ್ಲಿಪ್ಸ್‌ ಕೂಡ ಇದೆ. ಕಿಯಾರ ಅವರು ಮಾಸ್‌ ಆಗಿ ಕುಣಿದಿದ್ದಾರೆ. ಪ್ರಭುದೇವ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಗೇಮ್ ಚೇಂಜರ್‌ಗಾಗಿ ನಿರ್ದೇಶಕ ಎಸ್‌ ಶಂಕರ್ ಚಿತ್ರದ ಹಾಡುಗಳಿಗೆ 90 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚೆಗೆ ಸಂರ್ಧಶನದಲ್ಲಿ ʻಗೇಮ್‌ ಚೇಂಜರ್‌ʼ ಚಿತ್ರತಂಡ ರಾಮ್‌ಚರಣ್‌ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸರ್‌ಪ್ರೈಸ್‌ ಟ್ರೀಟ್‌ ನೀಡುವುದಾಗಿ ಹೇಳಿದ್ದರು ಇದೀಗ ʻಗೇಮ್ ಚೇಂಜರ್‌ʼ ಹೊಸ ಪೋಸ್ಟರ್ ಜತೆಗೆ ಹಾಡನ್ನು ಶೇರ್‌ ಮಾಡಿಕೊಂಡಿದೆ.

Advertisement

Advertisement
Tags :
Advertisement