For the best experience, open
https://m.newskannada.com
on your mobile browser.
Advertisement

ಮಂಗಳೂರಿನಲ್ಲಿ ಗಾನಾ‌ ಭಟ್ ಅವರ ನೂತನ "ಇಡಿಯೊ" ಮಳಿಗೆ ಶುಭಾರಂಭ

ಮಂಗಳೂರು: ನರದಲ್ಲಿ ಗಾನಾ ಭಟ್‌ ಮಾಲೀಕತ್ವದ ಇಡಿಯೊ ಎಂಬ ವಿಭಿನ್ನ ವಸ್ತ್ರಗಳ ಮಳಿಗೆ‌ ಶುಭಾರಂಭಗೊಂಡಿದೆ. ಮಳಿಗೆಯನ್ನು ಗುರು ಅವರ ಅಜಂತಾ ಬ್ಯುಸಿನೆಲ್‌ ಸೆಂಟರ್‌ ನಲ್ಲಿ ಅರ್ಜುನ್‌ ಕಾಪಿಕಾಡ್‌ ಹಾಗು ಗಾನಾ ಭಟ್‌ ಅವರ ತಂದೆಯವರಾದ ದಾಮೋದರ್‌ ಭಟ್‌ ಅವರು ಉದ್ಘಾಟನೆಗೊಳಿಸಿದರು. ಬಳಿಕ ಮಾತನಾಡಿದ ಗಾನಾ ಭಟ್‌ ಅವರ ಸ್ನೇಹಿತರಾದ ತುಳು ಚಿತ್ರನಟನಾದ ಅರ್ಜುನ್‌ ಕಾಪಿಕಾಡು, ಚರಣ್‌ ಅವರು ನೂತನ ಮಳಿಗೆಯ ಯಶಸ್ವಿಗೆ ಹಾರೈಸಿದರು.
05:33 PM Nov 22, 2023 IST | Ashitha S
ಮಂಗಳೂರಿನಲ್ಲಿ ಗಾನಾ‌ ಭಟ್ ಅವರ ನೂತನ  ಇಡಿಯೊ  ಮಳಿಗೆ ಶುಭಾರಂಭ

ಮಂಗಳೂರು: ನರಗದಲ್ಲಿ ಗಾನಾ ಭಟ್‌ ಮಾಲೀಕತ್ವದ ಇಡಿಯೊ ಎಂಬ ವಿಭಿನ್ನ ವಸ್ತ್ರಗಳ ಮಳಿಗೆ‌ ಬಿಜೈ-ಕಾಪಿಕಾಡ್‌ ನಲ್ಲಿ  ಶುಭಾರಂಭಗೊಂಡಿದೆ. ಮಳಿಗೆಯನ್ನು ಗುರುದತ್ತ ಅವರ  ಅಜಂತಾ ಬ್ಯುಸಿನೆಸ್ ಸೆಂಟರ್‌ ನಲ್ಲಿ ಅರ್ಜುನ್‌ ಕಾಪಿಕಾಡ್‌ ಹಾಗು ಗಾನಾ ಭಟ್‌ ಅವರ ತಂದೆಯವರಾದ ದಾಮೋದರ್‌ ಭಟ್‌ ಅವರು ಉದ್ಘಾಟನೆಗೊಳಿಸಿದರು. ಬಳಿಕ ಮಾತನಾಡಿದ ಗಾನಾ ಭಟ್‌ ಅವರ ಸ್ನೇಹಿತರಾದ ತುಳು ಚಿತ್ರನಟನಾದ ಅರ್ಜುನ್‌ ಕಾಪಿಕಾಡು, ಚರಣ್‌ ಅವರು ನೂತನ ಮಳಿಗೆಯ ಯಶಸ್ವಿಗೆ ಹಾರೈಸಿದರು.

Advertisement

ಬಳಿಕ ಮಾತನಾಡಿದ ವೇದವ್ಯಾಸ ಕಾಮತ್‌ ಅವರು, ಬೆಳೆಯುತ್ತಿರುವ ಮಂಗಳೂರಿನಲ್ಲಿ ಹೊಸ ಹೊಸ ವಿನ್ಯಾಸಗಳು ಇಂದು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಈ ನಡುವೆಯು ಜನರ ಆಸೆ ಅಭಿಲಾಷೆಗಳನ್ನು ಅರಿತು, ಚಿಂತನೆಗಳನ್ನು ಮಾಡಿ ಅದನ್ನು ಅನುಷ್ಠಾನ ಮಾಡಿ ಯಶಸ್ಸನ್ನು ಕಾಣುವ ಪ್ರಯತ್ನವನ್ನು ಮಾಡುತ್ತೇವೆ. ಇಂತಹ ಉದ್ಯಮಕ್ಕೆ ಬಹಳ ದೊಡ್ಡ ರೀತಿಯ ಸವಾಲುಗಳು ಎದುರಾಗುತ್ತದೆ. ಬಂದಂತಹ ಗ್ರಾಹಕರನ್ನು ತೃಪ್ತಿ ಪಡಿಸುವ ಮೂಲಕ ಈ ವಿನೂತನ ಮಳಿಗೆಯು ಮತ್ತಷ್ಟು ಯಶಸ್ಸನ್ನು ಕಾಣಲಿ ಎಂದು ಶುಭಾಹಾರೈಸಿದರು.

Advertisement

ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ಗಾನಾ ಭಟ್‌ ಅವರು ತಂದೆಯವರಾದ ದಾಮೋದರ್‌ ಭಟ್‌ ಅವರು, ಮಗಳು ಆರಂಭದಲ್ಲಿ ಸಿನೆಮಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಳು. ಆದರೆ ನಮಗೆ ಅದು ಇಷ್ಟವಿರಲಿಲ್ಲ. ದೇಹ ಪ್ರದರ್ಶನ ಮಾಡಿ ಅದರಲ್ಲಿ ಹಣ ಮಾಡುವುದು ನಮಗೆ ಇಷ್ಟವಿರಲಿಲ್ಲ. ಆದರೂ ಸಿನೆಮಾದಲ್ಲಿ ನಾಯಕಿಯಾಗಿ ಪಾತ್ರ ನಿರ್ವಹಿಸಿದಳು. ಅದರಲ್ಲಿ ಅಂತಹ ದೇಹ ಪ್ರದರ್ಶನವಿರಲ್ಲಿ ಅದರಿಂದ ನಮಗೆ ಸ್ಪಲ್ಪ ಸಮಾದಾನ ತಂದಿದೆ.

ಈಗ ಆಕೆ ಬ್ಯುಸಿನೆಲ್‌ ಮೇಲೆ ಆಸಕ್ತಿಯನ್ನು ಹೊಂದಿದ್ದಾಳೆ. ಅದಕ್ಕಾಗಿ ಬಹಳಷ್ಟು ಕಷ್ಟ ಪಟ್ಟಿದ್ದಾಳೆ. ಕಷ್ಟ ಪಟ್ಟು ಇಷ್ಟು ಮುಂದೆ ಬಂದಿದ್ದಾಳೆ. ಹೀಗಾಗಿ ಆಕೆಯ ಮುಂದಿನ ಹೊಸ ಹೆಜ್ಜೆಗೆ ನಿಮ್ಮೆಲ್ಲರ ಆಶೀರ್ವಾದ ಬಹಳ ಮುಖ್ಯ. ಯಾವಾಗಲೂ ನಿಮ್ಮ ಸಹಕಾರ ಇರಲಿ ಎಂದು ಕೇಳಿಕೊಂಡರು.

ಬಳಿಕ ಉದ್ಯಮಿ ಅಜಂತಾ ಬ್ಯುಸಿನೆಸ್ ಸೆಂಟರ್‌ ನ ಮಾಲೀಕರಾದ ಗುರುದತ್ತ ಅವರು ಅಜಂತಾ ಸೆಂಟರ್‌ ನಲ್ಲಿನ ಇಡಿಯೊ ಮಳಿಗೆಯ ಕೀಲಿ ಕೈ ಅನ್ನು ಗಾನಾ ಭಟ್‌ ಅವರಿಗೆ ಹಸ್ತಾಂತರಿಸಿದರು.

ಇನ್ನು ಸೌಜನ್ಯ ಅವರು ನಿರೂಪಣೆಯ ಮೂಲಕ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟರು.

Advertisement
Tags :
Advertisement