For the best experience, open
https://m.newskannada.com
on your mobile browser.
Advertisement

ʼಲೇಡಿ ಡಾನ್‌ ವೆಡ್ಸ್ ಗ್ಯಾಂಗ್​ಸ್ಟರ್ʼ: ಇವರ ಲವ್​ ಮ್ಯಾರೇಜ್​ ಗೆ ಹೈ ಸೆಕ್ಯೂರಿಟಿ !

ಲೇಡಿ ಡಾನ್​ವೊಬ್ಬಳು ತನ್ನ ಗ್ಯಾಂಗ್​ಸ್ಟರ್​ ಪ್ರಿಯತಮನನ್ನು ಮದುವೆಯಾಗಲು ಕಾದು ಕುಳಿತ್ತಿದ್ದು, ಇದೀಗ ಆಕೆಯ ಪ್ರೀತಿಗಾಗಿ ಜೈಲಿನಲ್ಲಿರುವ ಗ್ಯಾಂಗ್​ ಸ್ಟರ್​ ಪರೋಲ್​ ಪಡೆದು ಬರುತ್ತಿದ್ದಾನೆ.
04:38 PM Mar 12, 2024 IST | Ashitha S
ʼಲೇಡಿ ಡಾನ್‌ ವೆಡ್ಸ್ ಗ್ಯಾಂಗ್​ಸ್ಟರ್ʼ  ಇವರ ಲವ್​ ಮ್ಯಾರೇಜ್​ ಗೆ ಹೈ ಸೆಕ್ಯೂರಿಟಿ

ದೆಹಲಿ: ಲೇಡಿ ಡಾನ್​ವೊಬ್ಬಳು ತನ್ನ ಗ್ಯಾಂಗ್​ಸ್ಟರ್​ ಪ್ರಿಯತಮನನ್ನು ಮದುವೆಯಾಗಲು ಕಾದು ಕುಳಿತ್ತಿದ್ದು, ಇದೀಗ ಆಕೆಯ ಪ್ರೀತಿಗಾಗಿ ಜೈಲಿನಲ್ಲಿರುವ ಗ್ಯಾಂಗ್​ ಸ್ಟರ್​ ಪರೋಲ್​ ಪಡೆದು ಬರುತ್ತಿದ್ದಾನೆ.

Advertisement

ಲೇಡಿ ಡಾನ್‌ ಅನುರಾಧಾ, ಗ್ಯಾಂಗ್​ಸ್ಟರ್ ಕಾಲಾ ಜಾತೇರಿಯ ಲವ್ ಮಾಡಿದ್ದರು.  ಕಾಲಾ ಜಾತೇರಿಯ ಜೈಲಿಗೆ ಹೋದರೂ ಆತನ ಮೇಲಿನ ಪ್ರೀತಿ ಕಡಿಮೆಯಾಗದೆ ಆತನನ್ನೇ ಮದುವೆಯಾಗಲು ಲೇಡಿ ಡಾನ್ ಅನುರಾಧಾ ಮುಂದಾಗಿದ್ದಾಳೆ. ಹಾಗಾಗಿ ಇಂದು ಕೋರ್ಟ್​ ಕಾಲಾ ಜಾತೇರಿಯಗೆ ಪೆರೋಲ್​ ನೀಡುತ್ತಿದ್ದು, ಆತನ ಅನುರಾಧಾಳನ್ನು ವಿವಾಹವಾಗಲೆಂದು ಜೈಲಿನಿಂದ ಪರೋಲ್​ ಪಡೆದು ಬರುತ್ತಿದ್ದಾನೆ.

ಅಂದಹಾಗೆಯೇ ದೆಹಲಿಯ ದ್ವಾರಕಾದ ಮತಿಹಾಲ್ ನಲ್ಲಿ ಇಬ್ಬರು ಡಾನ್ ಗಳ ಮದುವೆ ನಡೆಯಲಿದೆ. ಇಬ್ಬರು ಡಾನ್ ಗಳ ಮದುವೆಗೆ ದೆಹಲಿ ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ. ಜೊತೆಗೆ ಈ ಮದುವೆ ಮೇಲೆ ಮೂರು ರಾಜ್ಯಗಳ ಪೊಲೀಸರ ನಿಗಾವಹಿಸಿದ್ದಾರೆ. ಮಾಹಿತಿ ಪ್ರಕಾರ ಒಟ್ಟು 250ಕ್ಕೂ ಹೆಚ್ಚು ಪೊಲೀಸರು ನಿಘಾ ವಹಿಸಿದ್ದಾರೆ. ಡ್ರೋಣ್ ಕ್ಯಾಮರಾ, ಸಿಸಿಟಿವಿ ಮೂಲಕವೂ ಪೊಲೀಸರ ನಿಗಾವಹಿಸಿದ್ದಾರೆ. ಜೊತೆಗೆ ಕಾಲಾ ಜಾತೇರಿ ಎಸ್ಕೇಪ್ ಆಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಮಾತ್ರವಲ್ಲದೆ, ಬೇರೆ ಗ್ಯಾಂಗ್ ಗಳು ಮದುವೆ ವೇಳೆ ದಾಳಿ ನಡೆಸದಂತೆ ತಡೆಯುವ ನಿಟ್ಟಿನಲ್ಲಿ ಭದ್ರತೆ ವಹಿಸಿದ್ದಾರೆ.

Advertisement

Advertisement
Tags :
Advertisement