For the best experience, open
https://m.newskannada.com
on your mobile browser.
Advertisement

ಮೆಕ್ಯಾನಿಕ್‌ಗಳ ಬಗ್ಗೆ ಅವಹೇಳ ಹೇಳಿಕೆ : ಝೀ ವಾಹಿನಿ ವಿರುದ್ಧ ಗ್ಯಾರೇಜ್‌ ಮಾಲಿಕರ ಸಂಘ ಆಕ್ರೋಶ

ಇತ್ತೀಚೆಗಷ್ಟೆ ಝೀ ವಾಹಿಯಲ್ಲಿ ಪ್ರಸಾರವಾಗುವ ಮಹಾನಟಿ ಕಾರ್ಯಕ್ರಮದಲ್ಲಿ ಮೆಕ್ಯಾನಿಕ್‌ಗಳ ಬಗ್ಗೆ ಹೇಳಿಕೆ ನೀಡಲಾಗಿತ್ತು ಹಾಗೂ ತೀರ್ಪುಗಾರರ ವಿರುದ್ಧ ಕೇಸ್‌ ಕೂಡ ದಾಖಲಾಗಿತ್ತು. ಇದೀಗ ದ.ಕ.ಗ್ಯಾರೇಜ್‌ ಮಾಲಿಕರ ಸಂಘ ಈ ವಿರುದ್ದ ಆಕ್ರೋಶ ವ್ಯಕ್ತಪಡಿಸಿದೆ.
12:52 PM May 08, 2024 IST | Nisarga K
ಮೆಕ್ಯಾನಿಕ್‌ಗಳ ಬಗ್ಗೆ ಅವಹೇಳ ಹೇಳಿಕೆ   ಝೀ ವಾಹಿನಿ ವಿರುದ್ಧ ಗ್ಯಾರೇಜ್‌ ಮಾಲಿಕರ ಸಂಘ ಆಕ್ರೋಶ
ಮೆಕ್ಯಾನಿಕ್‌ಗಳ ಬಗ್ಗೆ ಅವಹೇಳ ಹೇಳಿಕೆ : ಝೀ ವಾಹಿನಿ ವಿರುದ್ಧ ಗ್ಯಾರೇಜ್‌ ಮಾಲಿಕರ ಸಂಘ ಆಕ್ರೋಶ

ಮಂಗಳೂರು: ಇತ್ತೀಚೆಗಷ್ಟೆ ಝೀ ವಾಹಿಯಲ್ಲಿ ಪ್ರಸಾರವಾಗುವ ಮಹಾನಟಿ ಕಾರ್ಯಕ್ರಮದಲ್ಲಿ ಮೆಕ್ಯಾನಿಕ್‌ಗಳ ಬಗ್ಗೆ ಹೇಳಿಕೆ ನೀಡಲಾಗಿತ್ತು ಹಾಗೂ ತೀರ್ಪುಗಾರರ ವಿರುದ್ಧ ಕೇಸ್‌ ಕೂಡ ದಾಖಲಾಗಿತ್ತು. ಇದೀಗ ದ.ಕ.ಗ್ಯಾರೇಜ್‌ ಮಾಲಿಕರ ಸಂಘ ಈ ವಿರುದ್ದ ಆಕ್ರೋಶ ವ್ಯಕ್ತಪಡಿಸಿದೆ.

Advertisement

ದ.ಕ.ಗ್ಯಾರೇಜ್‌ ಮಾಲಿಕರ ಸಂಘವು 1985 ರಲ್ಲಿ ಸ್ಥಾಮಪನೆಗೊಂದು 1992 ರಲ್ಲಿ ಕರ್ನಾಟಕ ಸೊಸೈಟಿ ರಿಜಿಸ್ಟ್ರೇಶನ್‌ ಕಾಯಿದೆ 1960 ರಂತೆ ನೊಂದಯಿಸಲ್ಪಟ್ಟಿದೆ. ದ.ಕ ಗ್ಯಾರೇಜ್‌ ಮಾಲಿಕರ ಸಂಘವು ಕೆಲವೇ ವರ್ಷಗಳಲ್ಲಿ ತನ್ನದೇ ಆದ ಸುಸುಜ್ಜಿತ ಸಭಾಂಗಣವನ್ನೊಳಗೊಂಡ ಕಟ್ಟಡ ನಿರ್ಮಿಸಿ ಗ್ರಾಹಕರಿಗೆ ಉತ್ತಮ ಪ್ರಾಮಾಣಿಕ ಗುಣಮಟ್ಟದ ಸೇವೆ ಸಲ್ಲಿಸುವುದು, ಕಲಸಗಾರರಿಗೆ ಉತ್ತಮ ತರಭೇತಿ ನೀಡುವುದು, ಗ್ಯಾರೇಜಿ ಕೆಲಸಗಾರರ ಬಗ್ಗೆ ವಿಶೇಷ ಕಾಳಜಿ ವಹಿಸುವುದು, ತತ್ಸಂಬಂಧಿ ವಿಷಯಗಳ ಬಗ್ಗೆ ಚರ್ಚಿಸುವುದು, ನಿರ್ಧಾರ ಮತ್ತು ನಡವಳಿ ಜಾರಿಗೆ ತರುವುದಲ್ಲದೆ ಭೋಕಂಪ ಪರಿಹಾರ ನಿಧಿ, ಕಾರ್ಗಿಲ್‌ ಯುದ್ಧ ನಿಧಿ, ನೆರೆ ಪರಿಹಾರ ಮುಂತಾದ ಸಹಾಯ ಹಸ್ತದೊಂದಿಗೆ ರಾಷ್ಟ್ರದ ದ್ಯೆಯೋದ್ದೇಶಗಳ ಬಗ್ಗೆ ಲಕ್ಷ್ಯವಿಟ್ಟುಕೊಂಡು ಸಾರ್ವಜನಿಕವಾಗಿ ಉಚಿತ ವೈದಕೀಯ ಶಿಬಿರ ರಕ್ತದಾನ ಹಾಗೂ ಕೋವಿಡ್‌ ಸಂಕಷ್ಟ ಸಮಯದಲ್ಲಿ ಉಚಿತ ಲಸಿಕೆ ಚಿಕಿತ್ಸಾ ಶಿಬಿರ, ಉಚಿತ ದವಸ ಧ್ಯಾನಗಳಕಿಟ್‌ ವಿತರಣೆ, ಕ್ರೀಡೋತ್ಸವ ಇತ್ಯಾದಿ ಹಲವಾರು ಯೋಜನೆಗಳೊಂದಿಗೆ ಸಕ್ರೀಯವಾಗಿ ಶ್ರಮಿಸುತ್ತಾ ಬಂದಿದೆ ಎಂದು ಹೇಳಿದ್ದಾರೆ.

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಟಿ ಕಾರ್ಯಕ್ರಮದಲ್ಲಿ ಮೆಕ್ಯಾನಿಕ್‌ಗಳ ಬಗ್ಗೆ ಅವಹೇಳನ ಮಾಡಿ ಮಾತನಾಡಿದ್ದು ನೋಡಿ ತುಂಬಾ ಬೇಸರವಾಗಿದೆ. ಮೆಕ್ಯಾನಿಕ್‌ಗಳ ಜೊತೆಯಲ್ಲಿ ಬದುಕಲು ಸಾಧ್ಯವಿಲ್ಲ ಎಂದಾಗ ತೀರ್ಪುಗಾರರು ಶಿಳ್ಳೆ ಹೊಡೆದು ಚಪ್ಪಾಳೆ ನೀಡಿದ್ದಾರೆ. ಇದು ಅವರ ಘನತೆಗೆ ತಕ್ಕುದಲ್ಲ. ತಮಾಷೆಗೂ ಕೂಡ ಒಂದು ಇತಿ ಮಿತಿ ಇರಬೇಕು. ಇಂತಹ ತಮಾಷೆ ಶೋಕಿಗಳ ಟಿ.ಆರ್‌.ಪಿ ಹೆಚ್ಚಿಸಬಹುದೇ ವಿನಹಃ ಪ್ರೇಕ್ಷಕರ ಮನ ಗೆಲ್ಲಲಾಗದು. ದುಡಿದು ತಿನ್ನುವವರು ಹಾಗೂ ಕುಟುಂಬಕ್ಕೆ ಸಹಾಯ ಮಾಡುವ ಪ್ರತಿಯೊಬ್ಬರು ಯಾವುದೇ ಸಿಪಾಯಿಗಿಂತ ಕಡಿಮೆ ಇಲ್ಲ ಎಂದು ಆರೋಪಿಸಿದ್ದಾರೆ.

Advertisement

ಚಿಂತಾಜನಕ ರೋಗಿಯೊಬ್ಬರು ಜೀವ ಉಳಿಸುವುದು ಮೆಕ್ಯಾನಿಕ್‌ ದುರಸ್ತಿ ಮಾಡಿದ ವಾಹನವಾಗಿರುತ್ತದೆ. ಮೆಕ್ಯಾನಿಕ್‌ಗಳು ಇಲ್ಲದೇ ಹೋದಲ್ಲಿ ಇದೇ ಶಿಳ್ಳೆ ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡಿದ ತೀರ್ಪುಗಾರರಯ, ನಿರೂಪಕಿ, ಪರಿಸ್ಥಿತಿ ಒಮ್ಮೆ ಊಹಿಸಿ ನೋಡಲಿ ಇವರ ವಾಹನ ಕೆಟ್ಟು ನಿಂತಾಗ ಗ್ರೀಸ್‌ ತಿನ್ನುವ ಮೆಕ್ಯಾನಿಕ್‌ಗಳೇ ಸರಿ ಮಾಡುವುದುವಿನಹ ಮತ್ಯಾರು ಅಲ್ಲ . ಮೆಕ್ಯಾನಿಕ್‌ಗಳಿಲ್ಲದಿದ್ದರೆ ಜನರ ಪರಿಸ್ಥಿತಿ ಕೇವಲ ಊಹಿಸಿದಾಗಲೇ ತಿಳಿಯಬಹುದು. ಮೆಕ್ಯಾನಿಕ್‌ಗಳು ಶ್ರಮ ಪಟ್ಟು ದುಡಿದು ತಿನ್ನುವ ಶ್ರಮ ಜೀವಿಗಳು. ಗ್ರೀಸ್‌ ತಿನ್ನುವ ಬಗ್ಗೆ ಯಾವ ಆಧಾರದ ಮೇಲೆ ತಮಾಷೆ ಮಾಡಿದ್ದು ಈ ಹೇಳಿಕೆ ನೀಡಿದ ಯುವತಿ, ಆಯೋಜಕರು, ತೀರ್ಪುಗಾರರು, ನಿರೂಪಕಿ, ಮೆಕ್ಯಾನಿಕ್‌ಗಳು ಮತ್ತು ಅದರ ಕುಟುಂಬದವರ ಬಳಿ ಬಹಿರಂಗವಾಗಿ ಕ್ಷಮೆ ಯಾಚಿಸಲೇ ಬೇಕು. ಪ್ರತಿಷ್ಥಿತ ಅನುಭವಿ ಶ್ರೇಷ್ಠ ನಟ, ನಟಿಯರು ಉಪಸ್ಥಿತರಿದ್ದರು ಈ ಕಾರ್ಯಕ್ರಮದ ಬಗ್ಗೆ ಯಾವುದೇ ಆಕ್ಷೇಪ ಅಥವಾ ವಿಷಾದ ವ್ಯಕ್ತಪಡಿಸದೆ ಚಪ್ಪಾಳೆಯೊಂದಿಗೆ ಪ್ರೋತ್ಸಾಹಿಸಿರುವುದು ವಿಪರ್ಯಾಸವಾಗಿದೆ ಎಂದು ವ್ಯಂಗಿಸಿದ್ದಾರೆ.

ಇಂತಹ ತುಚ್ಚ ಮನೋಭಾವದ ಕಾರ್ಯಕ್ರಮಗಳನ್ನು ನಾವು ಖಂಡಿಸುತ್ತೇವೆ. ಸರಕಾರದ ಎಲ್ಲಾ ಇಲಾಖೆ ಅದರಲ್ಲೂ ಪೊಲೀಸ್‌ ಇಲಾಖೆಯಂತಹ ಜವಾಬ್ದಾರಿಯುತ ಇಲಾಖೆ ನಮ್ಮ ವೃತ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ನಿಟ್ಟಿನಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಈ ಬಗ್ಗೆ ತಮ್ಮ ಖಂಡನಾ ನಿರ್ಣಯವನ್ನು ಸಭೆಯಲ್ಲಿ ನಿರ್ಧರಿಸಿ ಪ್ರಚಾರ ಮಾಡಬೇಕಾಗಿ ಮನವಿ ಮಾಡಿದ್ದಾರೆ.

ಯಾವುದೇ ವೃತ್ತಿಯನ್ನು ಕೀಳು ಮನೋಭಾವದಿಂದ ನೋಡುವುದು ಅಪರಾಧವಾಗಿದ್ದು ಈ ಬಗ್ಗೆ ಕಾರ್ಮಿಕ ಇಲಾಖೆ ಸಹಿತ ಎಲ್ಲಾ ಸಂಬಂಧ ಪಟ್ಟ ಇಲಾಖೆಗಳು ಕೂಡಲೇ ಸ್ಪಂಧಿಸಿ ಝೀ ವಾಹಿನಿಗೆ ನೋಟೀಸ್‌ ನೀಡಿ ಎಚ್ಚರಿಕೆ ನೀಡಬೇಕಾಗಿ ವಿನಂತಿಸಿದ್ದಾರೆ.

Advertisement
Tags :
Advertisement