ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಗುಜರಾತ್​ನಲ್ಲಿ 2 ಲಕ್ಷ ಕೋಟಿ ರೂ ಹೂಡಿಕೆ: ಅದಾನಿ ಘೋಷಣೆ

ಹತ್ತನೇ ಆವೃತ್ತಿಯ ವೈಬ್ರಂಟ್ ಗುಜರಾತ್ ಗ್ಲೋಬಲ್ ಸಮಿಟ್ 2024 ಕಾರ್ಯಕ್ರಮ ಇಲ್ಲಿಯ ಮಹಾತ್ಮ ಮಂದಿರ್​ನಲ್ಲಿ ಚಾಲನೆಗೊಂಡಿದೆ. ‘ಭವಿಷ್ಯಕ್ಕೆ ದಾರಿ’ ಎಂಬುದು ಈ ಬಾರಿಯ ಸಮಿಟ್​​ನ ಥೀಮ್ ಆಗಿದೆ. ಇಲ್ಲಿ 2 ಲಕ್ಷ ಕೋಟಿ ರೂ ಹೂಡಿಕೆ ಮಾಡುವುದಾಗಿ ಅದಾನಿ ಘೋಷಣೆ ಮಾಡಿದ್ದಾರೆ. 
05:09 PM Jan 10, 2024 IST | Ashitha S

ಗಾಂಧಿನಗರ್:  ಹತ್ತನೇ ಆವೃತ್ತಿಯ ವೈಬ್ರಂಟ್ ಗುಜರಾತ್ ಗ್ಲೋಬಲ್ ಸಮಿಟ್ 2024 ಕಾರ್ಯಕ್ರಮ ಇಲ್ಲಿಯ ಮಹಾತ್ಮ ಮಂದಿರ್​ನಲ್ಲಿ ಚಾಲನೆಗೊಂಡಿದೆ. ‘ಭವಿಷ್ಯಕ್ಕೆ ದಾರಿ’ ಎಂಬುದು ಈ ಬಾರಿಯ ಸಮಿಟ್​​ನ ಥೀಮ್ ಆಗಿದೆ. ಇಲ್ಲಿ 2 ಲಕ್ಷ ಕೋಟಿ ರೂ ಹೂಡಿಕೆ ಮಾಡುವುದಾಗಿ ಅದಾನಿ ಘೋಷಣೆ ಮಾಡಿದ್ದಾರೆ.

Advertisement

ಪ್ರಧಾನಿ  ಮೋದಿ ಈ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಉದ್ಘಾಟನೆ ನೆರವೇರಿಸಲಿದ್ದಾರೆ. ಹಲವು ವಿಶ್ವನಾಯಕರು, 34 ಪಾರ್ಟ್ನರ್ ದೇಶಗಳು ಹಾಗೂ 16 ಪಾರ್ಟ್ನರ್ ಸಂಘಟನೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ವೈಬ್ರಂಟ್ ಗುಜರಾತ್ ಸಮಿಟ್​ನಲ್ಲಿ ಭಾಷಣ ಮಾಡಿದ ಉದ್ಯಮಿ ಗೌತಮ್ ಅದಾನಿ ತಮ್ಮ ಮಾತೃ ನಾಡಾದ ಗುಜರಾತ್​ನಲ್ಲಿ ಮುಂದಿನ ಐದು ವರ್ಷದಲ್ಲಿ 2 ಲಕ್ಷ ಕೋಟಿ ರೂಗೂ ಹೆಚ್ಚು ಮೊತ್ತದ ಹೂಡಿಕೆ ಮಾಡುವುದಾಗಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

Advertisement

‘ಸ್ವಾವಲಂಬನೆ ಭಾರತಕ್ಕೆ ಹಸಿರು ಸರಬರಾಜು ಸರಪಳಿ ಬಲಪಡಿಸುತ್ತಿದ್ದೇವೆ. ಹಾಗೆಯೇ, ಅತಿದೊಡ್ಡ ಸಮಗ್ರ ಮರುಬಳಕೆ ಇಂಧನ ವ್ಯವಸ್ಥೆ ರೂಪಿಸಲಿದ್ದೇವೆ’ ಎಂದು ಅದಾನಿ ಘೋಷಿಸಿದ್ದಾರೆ.

ಗೌತಮ್ ಅದಾನಿ ಇತ್ತಿಚೆಗೆಯಷ್ಟೇ ತಮಿಳುನಾಡಿನಲ್ಲಿ ಸಾವಿರಾರು ಕೋಟಿ ರೂ ಹೂಡಿಕೆ ಮಾಡುವುದಾಗಿ ಹೇಳಿದ್ದರು. ವರ್ಷದ ಹಿಂದೆ ಹಿಂಡನ್ಬರ್ಗ್ ವರದಿ ಬಳಿಕ ಸಾಕಷ್ಟು ಹಿನ್ನಡೆ ಕಂಡಿದ್ದ ಗೌತಮ್ ಅದಾನಿ ಇದೀಗ ತಿರುಗಿ ನಿಂತಿದ್ದಾರೆ. ವಿಶ್ವದ ಅಗ್ರ ಶ್ರೀಮಂತರ ಸಾಲಿನಲ್ಲಿ ಅವರು ನಿಂತಿದ್ದಾರೆ.

ಇನ್ನು ಮುಂಬೈನಲ್ಲಿ ಕೇಂದ್ರವಾಗಿಟ್ಟುಕೊಂಡು ಉದ್ಯಮ ಸಾಮ್ರಾಜ್ಯ ಸ್ಥಾಪಿಸಿರುವ ಮುಕೇಶ್ ಅಂಬಾನಿ ಅವರು ತಮ್ಮ ರಿಲಾಯನ್ಸ್ ಕಂಪನಿ ಯಾವತ್ತಿದ್ದರೂ ಗುಜರಾತೀ ಕಂಪನಿಯೇ ಆಗಿ ಉಳಿದಿರುತ್ತದೆ ಎಂದು ಹೇಳಿದ್ದಾರೆ.

Advertisement
Tags :
GOVERNMENTindiaLatestNewsNewsKannadaಅದಾನಿ ಘೋಷಣೆಗುಜರಾತ್​​ನವದೆಹಲಿಪ್ರಧಾನಿ ನರೇಂದ್ರ ಮೋದಿಹೂಡಿಕೆ
Advertisement
Next Article