For the best experience, open
https://m.newskannada.com
on your mobile browser.
Advertisement

ಗಡಿಯಾಚೆ ಚಿಗುರಿದ ಪ್ರೀತಿಗೆ ಸ್ವದೇಶದಲ್ಲಿ ವಿವಾಹಭಾಗ್ಯ; ಜರ್ಮನ್ ಕುವರಿಯೀಗ ಕುಂದಾಪುರದ ಸೊಸೆ

ಜರ್ಮನಿಯಲ್ಲಿ ಉದ್ಯೋಗಿಯಾಗಿದ್ದ ಕುಂದಾಪುರ ತಾಲೂಕಿನ ಆಜ್ರಿ ಮೂಲದ ಚಂದನ್‌ ಅಲ್ಲಿ ಶಿಕ್ಷಕಿಯಾಗಿದ್ದ ಕಾರಿನ್ ರನ್ನು ಪ್ರೀತಿಸುತ್ತಿದ್ದು, ಈಗ ಈ ಜೋಡಿ ಭಾರತಕ್ಕೆ ಬಂದು ಜ.೧ರಂದು ಹಿಂದೂ ಸಂಪ್ರದಾಯದಂತೆ ಸಿದ್ದಾಪುರ ಸಮೀಪದ ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಎರಡೂ ಪರಿವಾರಗಳ ಒಪ್ಪಿಗೆಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
06:58 PM Jan 04, 2024 IST | Maithri S
ಗಡಿಯಾಚೆ ಚಿಗುರಿದ ಪ್ರೀತಿಗೆ ಸ್ವದೇಶದಲ್ಲಿ ವಿವಾಹಭಾಗ್ಯ  ಜರ್ಮನ್ ಕುವರಿಯೀಗ ಕುಂದಾಪುರದ ಸೊಸೆ

ಕುಂದಾಪುರ: ಪ್ರೀತಿಸಿದವರನ್ನು ಪಡೆಯಲು ಪ್ರೇಮಿಗಳು ದೇಶದೇಶಗಳ ಗಡಿ ದಾಟಿ ಬರುತ್ತಿರುವ ಪ್ರಕರಣಗಳು ಇತ್ತೀಚೆಗೆ ಒಂದರಮೇಲೊಂದರಂತೆ ಬೆಳಕಿಗೆ ಬರುತ್ತಿವೆ. ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್, ಭಾರತದಿಂದ ಪಾಕಿಸ್ತಾನಕ್ಕೆ ಹಾರಿದ ಅಂಜುವಿನ ನಂತರ ಈಗೊಬ್ಬ ಜರ್ಮನಿಯ ಯುವತಿ ಕುಂದಾಪುರದ ಯುವಕನನ್ನು ವಿವಾಹವಾಗಿದ್ದಾರೆ.

Tags :
Advertisement