ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮುಟ್ಟಿನ ಹೊಟ್ಟೆ ನೋವು ನಿವಾರಣೆ ಮಾತ್ರೆ ಸೇವಿಸಿ ಬಾಲಕಿ ಸಾವು

16 ವರ್ಷದ ಬಾಲಕಿ ಮುಟ್ಟಿನ ಹೊಟ್ಟೆ ನೋವಿನ ಮಾತ್ರೆಗಳನ್ನು ಸೇವಿಸಿದ ಬಳಿಕ ಸಾವನ್ನಪ್ಪಿದ್ದಾಳೆ. ಲೈಲಾ ಖಾನ್ ಮೃತ ಬಾಲಕಿಯಾಗಿದ್ದಾಳೆ.
07:27 PM Dec 20, 2023 IST | Ramya Bolantoor

ಇಂಗ್ಲೆಂಡ್‌:   16 ವರ್ಷದ ಬಾಲಕಿ ಮುಟ್ಟಿನ ಹೊಟ್ಟೆ ನೋವಿನ ಮಾತ್ರೆಗಳನ್ನು ಸೇವಿಸಿದ ಬಳಿಕ ಸಾವನ್ನಪ್ಪಿದ್ದಾಳೆ. ಲೈಲಾ ಖಾನ್ ಮೃತ ಬಾಲಕಿಯಾಗಿದ್ದಾಳೆ. ಲೈಲಾ ಖಾನ್ ಮುಟ್ಟಿನ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ತನ್ನ ಸ್ನೇಹಿತರ ಸಲಹೆಯ ಮೇರೆಗೆ ಪ್ರತೀ ತಿಂಗಳು ನೋವು ನಿವಾರಕ ಮಾತ್ರೆ ಸೇವಿಸಿದ್ದಾಳೆ. ಇದರಿಂದ ಆಕೆಯ ಸಾವು ಸಂಭವಿಸಿದೆ ಎಂದು ವರದಿಯಾಗಿದೆ.

Advertisement

ಇತ್ತೀಚಿಗೆ ನವೆಂಬರ್ 25ರಂದು ಋತು ಸ್ರಾವ ಆದ ದಿನವೇ ಲೈಲಾ ಖಾನ್ ಹೊಟ್ಟೆ ನೋವು ನಿವಾರಣಾ ಮಾತ್ರೆ ಸೇವಿಸಿದ್ದಾಳೆ. ಹೊಟ್ಟೆ ನೋವು ನಿವಾರಕ ಮಾತ್ರೆಗಳಿಂದ ಸಾಮಾನ್ಯವಾಗಿ ಮೂರರಿಂದ ನಾಲ್ಕು ದಿನಗಳಲ್ಲಿ ಮಹಿಳೆಯರಲ್ಲಿ ನೋವು ಕಡಿಮೆಯಾಗುತ್ತದೆ. ಆದರೆ ಲೈಲಾಳಿಗೆ ಮಾತ್ರೆ ಸೇವನೆ ಬಳಿಕ ಬೇರೆ ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಒಂದೆಡರು ದಿನ ಕಳೆಯುದರಲ್ಲಿ ಆಕೆಯ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ.

ಆಕೆಯ ಕುಟುಂಬಸ್ಥರ ಪ್ರಕಾರ ಲೈಲಾ ಅರ್ಧ ಗಂಟೆಗಳಿಗೊಮ್ಮೆ ವಾಂತಿ ಮಾಡಿಕೊಳ್ಳುತ್ತಿದ್ದಳಂತೆ. ಜೊತೆಗೆ ಈಕೆಯ ಮುಟ್ಟಿನ ನೋವು ಕೂಡ ಉಲ್ಬಣಗೊಂಡಿದೆ. ಕೊನೆಗೆ ಡಿಸೆಂಬರ್​​​ 05ರ ವೇಳೆಗೆ ಲೈಲಾ ವಿಪರೀತ ವಾಂತಿ ಭೇದಿ ಆರಂಭವಾಗಿದ್ದು, ಜೊತೆಗೆ ತೀವ್ರ ತಲೆನೋವಿನಿಂದ ಈಕೆ ಬಳಲಿದ್ದಾಳೆ. ಕೊನೆಗೆ ಆಕೆಯಪೋಷಕರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

Advertisement

ತಲೆ ನೋವಿನಿಂದ ಒದ್ದಾಡುತ್ತಿದ್ದ ಆಕೆಯನ್ನು ಮೊದಲು ಸಿಟಿ ಸ್ಕ್ಯಾನ್‌ಗೆ ಒಳಪಡಿಸಲಾಯಿತು. ಈ ವೇಳೆ ಆಕೆಯ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ತಿಳಿದುಬಂದಿದೆ. ಕೂಡಲೇ ಆಕೆಯನ್ನು ಬೇರೆ ಆಸ್ಪತ್ರೆಗೆ ಶಿಫ್ಟ್‌ ಮಾಡಿದ್ದಾರೆ. ತುರ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದರೂ ಸಹ ಚಿಕಿತ್ಸೆ ಫಲಕಾರಿಯಾಗದೆ, ಮೆದುಳು ನಿಷ್ಕ್ರಿಯಗೊಂಡು ಲೈಲಾ ಸಾವನ್ನಪ್ಪಿದ್ದಾಳೆ

Advertisement
Tags :
deathLatestNewsmenstrualNewsKannadaಇಂಗ್ಲೆಂಡ್
Advertisement
Next Article