ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸೆಕೆಂಡುಗಳಲ್ಲಿ ವಸ್ತುಗಳ ಮಾರಾಟ; ವಾರದಲ್ಲಿ ೧೧೫ ಕೋಟಿ ಸಂಪಾದಿಸಿದ ಮಹಿಳೆ

ಜೆಂಗ್ ಕ್ಸಿಯಾಂಗ್ ಕ್ಸಿಯಾಂಗ್ ಹೆಸರಿನ ಚೈನಾದ ಮಹಿಳೆ ಆನ್‌ಲೈನ್‌ ಲೈವ್‌ ಸ್ಟ್ರೀಮಿಂಗ್‌ ಮೂಲಕ ವಸ್ತುಗಳನ್ನು ಮಾರುತ್ತಿದ್ದು, ಒಂದು ವಾರದಲ್ಲಿ ೧೧೫ ಕೋಟಿ ಗಳಿಸಿ ಸುದ್ದಿಯಾಗಿದ್ದಾಳೆ.
06:29 PM Feb 09, 2024 IST | Maithri S

ಚೀನಾ: ಜೆಂಗ್ ಕ್ಸಿಯಾಂಗ್ ಕ್ಸಿಯಾಂಗ್ ಹೆಸರಿನ ಚೈನಾದ ಮಹಿಳೆ ಆನ್‌ಲೈನ್‌ ಲೈವ್‌ ಸ್ಟ್ರೀಮಿಂಗ್‌ ಮೂಲಕ ವಸ್ತುಗಳನ್ನು ಮಾರುತ್ತಿದ್ದು, ಒಂದು ವಾರದಲ್ಲಿ ೧೧೫ ಕೋಟಿ ಗಳಿಸಿ ಸುದ್ದಿಯಾಗಿದ್ದಾಳೆ.

Advertisement

@PicturesFoIder ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಆಕೆಯ ವೀಡಿಯೋ ಪೋಸ್ಟ್‌ ಮಾಡಲಾಗಿದ್ದು, ಜನರಿಂದ ನಾನಾರೀತಿಯ ಪ್ರತಿಕ್ರಿಯೆಗಳು ಬರುತ್ತಿವೆ.

ಸೋಷಿಯಲ್‌ ಮೀಡಿಯಾ ಇನ್ಫ್ಲೂಯೆನ್ಸರ್‌ ಆಗಿರುವ ಈಕೆ ಮಾರಾಟಕ್ಕಿರುವ ಲೈವ್‌ನಲ್ಲಿ ವಸ್ತುಗಳನ್ನು ಪ್ರದರ್ಶಿಸುತ್ತಾಳೆ. ಪ್ರತಿ ವಸ್ತುವನ್ನು ಮೂರು ಸೆಕೆಂಡ್‌ಗಳ ಕಾಲವಷ್ಟೇ ತೋರಿಸಿ ಅದರ ಬೆಲೆಯನ್ನೂ ತಿಳಿಸುವ ಈಕೆ, ಅಷ್ಟೇ ವೇಗದಲ್ಲಿ ಹಣ ಗಳಿಸಿದ್ದಾಳೆ.

Advertisement

ಅನ್ಯರಂತೆ ಒಂದೇ ವಸ್ತುವಿನ ಬಗ್ಗೆ ಸುದೀರ್ಘವಾಗಿ ಮಾತನಾಡುವ ಬದಲು ಈಕೆ ಅನುಸರಿಸಿರುವ ವಿಧಾನ ಕೆಲಸ ಮಾಡಿದ್ದು, ಕೆಲ ಸೆಕೆಂಡುಗಳ ನಂತರ ಹೊಸ ವಸ್ತು ತೋರಿಸುವವಳಿಗೆ ಸಹಾಯಕನೊಬ್ಬ ಅಷ್ಟೇ ವೇಗದಲ್ಲಿ ಬೇರೆಬೇರೆ ಬಾಕ್ಸ್‌ಗಳನ್ನು ಕೊಡುತ್ತಿರುತ್ತಾನೆ.

Advertisement
Tags :
CHINALatestNewsNewsKannadaOnline sellingZheng Xiang Xiang
Advertisement
Next Article