For the best experience, open
https://m.newskannada.com
on your mobile browser.
Advertisement

ರಾಹುಲ್​ ದ್ರಾವಿಡ್​ಗೆ ಭಾರತರತ್ನ ನೀಡಿ: ಸುನೀಲ್​ ಗಾವಸ್ಕರ್​ ಒತ್ತಾಯ

ರಾಹುಲ್​ ದ್ರಾವಿಡ್​ಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಭಾರತರತ್ನ' ನೀಡಿ ಗೌರವಿಸಬೇಕೆಂದು ಮಾಜಿ ನಾಯಕ ಸುನೀಲ್​ ಗಾವಸ್ಕರ್​ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
07:36 AM Jul 08, 2024 IST | Ashitha S
ರಾಹುಲ್​ ದ್ರಾವಿಡ್​ಗೆ ಭಾರತರತ್ನ ನೀಡಿ  ಸುನೀಲ್​ ಗಾವಸ್ಕರ್​ ಒತ್ತಾಯ

ಮುಂಬೈ: ಭಾರತ ತಂಡಕ್ಕೆ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆದ್ದುಕೊಟ್ಟ ಕೋಚ್​ ರಾಹುಲ್​ ದ್ರಾವಿಡ್​ಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಭಾರತರತ್ನ' ನೀಡಿ ಗೌರವಿಸಬೇಕೆಂದು ಮಾಜಿ ನಾಯಕ ಸುನೀಲ್​ ಗಾವಸ್ಕರ್​ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement

'ದ್ರಾವಿಡ್​ ಸಾಧನೆ ದೇಶದ ಎಲ್ಲರಿಗೂ ಸಂತೋಷ ತಂದಿದೆ. ಭಾರತೀಯ ಕ್ರಿಕೆಟ್​ಗೆ ಅವರು ಆಟಗಾರ ಮತ್ತು ಕೋಚ್​ ಆಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಅವರು ದೇಶದ ಅತ್ಯುನ್ನತ ಗೌರವಕ್ಕೆ ಅರ್ಹರಾಗಿದ್ದಾರೆ. ಜನಸಾಮಾನ್ಯರಿಂದ ಹಿಡಿದು ಎಲ್ಲರೂ ನನ್ನ ಈ ಮಾತಿಗೆ ಧ್ವನಿಗೂಡಿಸಬೇಕು. 'ಭಾರತರತ್ನ ರಾಹುಲ್​ ಶರದ್​ ದ್ರಾವಿಡ್​' ಎಂಬುದನ್ನು ಕೇಳಲು ಆಹ್ಲಾದಕರ ಎನಿಸುತ್ತಿದೆ' ಎಂದು ಗಾವಸ್ಕರ್​ ಪತ್ರಿಕಾ ಅಂಕಣವೊಂದರಲ್ಲಿ ಬರೆದಿದ್ದಾರೆ.

Advertisement
Advertisement
Tags :
Advertisement