For the best experience, open
https://m.newskannada.com
on your mobile browser.
Advertisement

ಕುದುರೆಯಲ್ಲಿ ಗ್ಲಾಂಡರ್ಸ್‌ ರೋಗ ಪತ್ತೆ : ಇದು ಮನುಷ್ಯರಿಗೂ ಬರಬಹುದು

ನಗರದ ಡಿ.ಜಿ ಹಳ್ಳಿ ಪ್ರದೇಶದಲ್ಲಿ ಕುದುರೆಯೊಂದರಲ್ಲಿ ಗ್ಲಾಂಡರ್ಸ್‌ ಎಂಬ ಮಾರಕ ರೋಗ ಪತ್ತೆಯಾಗಿದೆ. ಇದು ಸೋಂಕು ರೋಗವಾದ್ದರಿಂದ ಡಿ.ಜೆ ಹಳ್ಳಿಯ ಸುತ್ತಮುತ್ತ 5 ಕಿ.ಮೀ ವರೆಗೂ ರೋಗ ಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ.
02:16 PM Apr 17, 2024 IST | Nisarga K
ಕುದುರೆಯಲ್ಲಿ ಗ್ಲಾಂಡರ್ಸ್‌ ರೋಗ ಪತ್ತೆ   ಇದು ಮನುಷ್ಯರಿಗೂ ಬರಬಹುದು
ಕುದುರೆಯಲ್ಲಿ ಗ್ಲಾಂಡರ್ಸ್‌ ರೋಗ ಪತ್ತೆ : ಇದು ಮನುಷ್ಯರಿಗೂ ಬರಬಹುದು

ಬೆಂಗಳೂರು: ನಗರದ ಡಿ.ಜಿ ಹಳ್ಳಿ ಪ್ರದೇಶದಲ್ಲಿ ಕುದುರೆಯೊಂದರಲ್ಲಿ ಗ್ಲಾಂಡರ್ಸ್‌ ಎಂಬ ಮಾರಕ ರೋಗ ಪತ್ತೆಯಾಗಿದೆ. ಇದು ಸೋಂಕು ರೋಗವಾದ್ದರಿಂದ ಡಿ.ಜೆ ಹಳ್ಳಿಯ ಸುತ್ತಮುತ್ತ 5 ಕಿ.ಮೀ ವರೆಗೂ ರೋಗ ಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ.

Advertisement

ಉತ್ತರ ತಾಲೂಕಿನ ಡಿ.ಜೆ.ಹಳ್ಳಿಯ ಖಲೀದ್ ಷರೀಫ್ ಬಿನ್ ಎ.ಜೆ ಷರೀಫ್ ಎಂಬವರ ಕುದುರೆಯಲ್ಲಿ ಈ ಸೋಂಕು ಇರುವುದು ದೃಢವಾಗಿದೆ. ಹೀಗಾಗಿ ಹಳ್ಳಿಯ ಸುತ್ತಮುತ್ತ ಹಾಗೂ 5 ಕಿ.ಮೀ ವರೆಗೂ ಜಾಗೃತ ವಲಯ ಎಂದು ಘೋಷಿಸಲಾಗಿದೆ.

ರೋಗದ ಹಿನ್ನಲೆ ಪಶುಸಂಗೋಪನೆ ಇಲಾಖೆ ಕುದುರೆ ಮತ್ತು ಕತ್ತೆಗಳ ಚಲನವಲನಕ್ಕೆ ನಿರ್ಬಂಧ ಹೇರಿದೆ.

Advertisement

ಏನೆದು ಗ್ಲಾಂಡರ್ಸ್‌ ರೋಗ?
ಗ್ಲಾಂಡರ್ಸ್ ಒಂದು ಸಾಂಕ್ರಾಮಿಕ ಮತ್ತು ಮಾರಣಾಂತಿಕ ಕಾಯಿಲೆ. ಇದು ಸಾಮಾನ್ಯವಾಗಿ ಕುದುರೆಗಳು, ಕತ್ತೆಗಳು ಮತ್ತು ಹೇಸರಗತ್ತೆಗಳಿಗೆ ಬರುತ್ತದೆ. ಇದು ಬರ್ಖೋಲ್ಡೆರಿಯಾ ಮಲ್ಲಿ ಎಂಬ ಬ್ಯಾಕ್ಟೀರಿಯಂದಿಂದ ಉಂಟಾಗುತ್ತದೆ. ಇದು ಶ್ವಾಸನಾಳ ಮತ್ತು ಶ್ವಾಸಕೋಶಗಳಲ್ಲಿ ಗಂಟುಗಳು ಮತ್ತು ಹುಣ್ಣುಗಳನ್ನು ಉಂಟುಮಾಡುತ್ತದೆ. ಇದನ್ನು ಫಾರ್ಸಿ ಎಂದು ಕರೆಯಲಾಗುತ್ತದೆ. ಇದು ಉಲ್ಬಣವಾದರೆ ಸಾವು ಕೂಡ ಸಂಭವಿಸುತ್ತದೆ.

ಈ ಗ್ಲಾಂಡರ್ಸ್ ರೋಗ ಜೂನೋಟಿಕ್ ಕಾಯಿಲೆಯಾಗಿದ್ದು, ಇದು ಮನುಷ್ಯರಿಗೂ ಹರಡುವ ಸಾಧ್ಯತೆ ಇದೆ.

Advertisement
Tags :
Advertisement