ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಗೋಬಿ, ಕಾಟನ್ ಕ್ಯಾಂಡಿ ರಾಜ್ಯದಲ್ಲೂ ಬ್ಯಾನ್‌ ಆಗುವ ಸಾಧ್ಯತೆ

ಗೋಬಿ ಮಂಚೂರಿ ಎಂದರೆ ದೊಡ್ಡವರು ಚಿಕ್ಕವರೆನ್ನದೆ ಎಲ್ಲರೂ ಇಷ್ಟಪಡುತ್ತಾರೆ. ಕೆಲವರಿಗಂತು ಹೆಸರು ಕೇಳಿಯೆ ಬಾಯಲ್ಲಿ ನೀರು ಬರುತ್ತದೆ. ಹಾಗೂ ಕಾಟನ್‌ ಕ್ಯಾಂಡಿ ಮಕ್ಕಳ ನೆಚ್ಚಿನ ತಿನಿಸು ಆದರೆ ಇದೀಗ ಗೋಬಿ ಹಾಗೂ ಕಾಟನ್ ಕ್ಯಾಂಡಿಯಲ್ಲಿ ಕ್ಯಾನ್ಸರ್ ಉಂಟುಮಾಡುವ ರೋಡಮೈನ್-ಬಿ ಎಂಬ ಬಣ್ಣ (ಬಟ್ಟೆಗೆ ಬಳಸುವ ಡೈ) ಪತ್ತೆಯಾಗಿದೆ.
01:21 PM Mar 10, 2024 IST | Nisarga K
ಗೋಬಿ,ಕಾಟನ್ ಕ್ಯಾಂಡಿ ಕರ್ನಾಟಕದಲ್ಲೂ ಬ್ಯಾನ್‌ ಆಗುವ ಸಾಧ್ಯತೆ

ಬೆಂಗಳೂರು: ಗೋಬಿ ಮಂಚೂರಿ ಎಂದರೆ ದೊಡ್ಡವರು ಚಿಕ್ಕವರೆನ್ನದೆ ಎಲ್ಲರೂ ಇಷ್ಟಪಡುತ್ತಾರೆ. ಕೆಲವರಿಗಂತು ಹೆಸರು ಕೇಳಿಯೆ ಬಾಯಲ್ಲಿ ನೀರು ಬರುತ್ತದೆ. ಕಾಟನ್‌ ಕ್ಯಾಂಡಿ ಮಕ್ಕಳ ನೆಚ್ಚಿನ ತಿನಿಸು ಆದರೆ ಇದೀಗ ಗೋಬಿ ಹಾಗೂ ಕಾಟನ್ ಕ್ಯಾಂಡಿಯಲ್ಲಿ ಕ್ಯಾನ್ಸರ್ ಉಂಟುಮಾಡುವ ರೋಡಮೈನ್-ಬಿ ಎಂಬ ಬಣ್ಣ (ಬಟ್ಟೆಗೆ ಬಳಸುವ ಡೈ) ಪತ್ತೆಯಾಗಿದೆ. ಹೀಗಾಗಿ ಪುದುಚೇರಿ ಮತ್ತು ತಮಿಳುನಾಡು ಸರ್ಕಾರಗಳ ಬಳಿಕ ರಾಜ್ಯ ಸರ್ಕಾರವೂ ಅಸುರಕ್ಷಿತ ಕಾಟನ್‌ ಕ್ಯಾಂಡಿ, ಗೋಬಿಯನ್ನು ಬ್ಯಾನ್‌ ಮಾಡಲು ಮುಂದಾಗಿದೆ.

Advertisement

ರಾಜ್ಯಾದ್ಯಂತ ಮಾರಾಟ ಮಾಡುತ್ತಿರುವ ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿಯನ್ ಮಾದರಿ ಗಳಲ್ಲಿ ಆರೋಗ್ಯಕ್ಕೆ ಮಾರಕವಾದ ರೋಡಮೈನ್ -ಜಿ ಎಂಬ ಬಣ್ಣ ಸೇರಿದಂತೆ ವ್ಯಸನಕಾರಿ ರಾಸಾಯನಿಕ ಅಂಶಗಳು ಪತ್ತೆಯಾಗಿದ್ದು, ಈ ಅಸುರಕ್ಷಿತ ವಸ್ತು ಗಳನ್ನು ಬಳಕೆ ಮಾಡದಂತೆ ಆರೋಗ್ಯ ಇಲಾಖೆಯು ಸೋಮವಾರ ಕಟ್ಟುನಿಟ್ಟಿನ ಆದೇಶ ಹೊರಡಿಸಲಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಅಧಿಕಾರಿಗಳು ಆರೋಗ್ಯ ಇಲಾಖೆ ಸಹಯೋಗದಲ್ಲಿ ರಾಜ್ಯಾದ್ಯಂತ 170ಕ್ಕೂ ಹೆಚ್ಚು ಗೋಬಿ ಮಂಚೂರಿಯನ್ ಹಾಗೂ 100ಕ್ಕೂ ಹೆಚ್ಚು ಕಾಟನ್ ಕ್ಯಾಂಡಿಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ಪೈಕಿ 100ಕ್ಕೂ ಹೆಚ್ಚು ಅಸುರಕ್ಷಿತ ಎಂಬುದು ಸಾಬೀತಾಗಿದೆ.

Advertisement

ರೋಡಮೈನ್-ಜಿ ಹೊಂದಿರುವ ಕಾಟನ್ ಕ್ಯಾಂಡಿಯನ್ನು ತಿನ್ನುವವರು ಮಾರಕ ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಹುದು. ಜತೆಗೆ ಇದೊಂದು ವ್ಯಸನಕಾರಿ ಹಾಗೂ ಸ್ಟೋ ಪಾಯಿಷನ್ ಆಗಿಯೂ ಕೆಲಸ ಮಾಡಲಿದೆ ಎಂದು ವರದಿಗಳು ಸೂಚಿಸಿವೆ. ಹೀಗಾಗಿಯೇ ಇದನ್ನು ನಿಷೇಧ ಮಾಡಬೇಕು ಎಂಬ ಚರ್ಚೆಯಾಗಿದ್ದು, ಗೋಬಿ ನಿಷೇಧ ಮಾಡಿದರೆ ರೈತರಿಗೆ ಅನಾನುಕೂಲವಾಗಲಿದೆ. ಹೀಗಾಗಿ ಗೋಬಿಗೆ ಅಡಿಕ್ಟಿಮ್ಸ್ (ವ್ಯಸನಕಾರಿ ವಸ್ತು) ಹಾಗೂ ಕೃತಕ ಬಣ್ಣ, ನಿಷೇಧಿತ ಉತ್ಪನ್ನಗಳ ಸೇರ್ಪಡೆಯನ್ನು ನಿಷೇಧಿಸಲಾಗುವುದು. ಈ ನಿಯಮ ಉಲ್ಲಂಘನೆ ಮಾಡಿದರೆ ಆಹಾರ ಸುರಕ್ಷತೆ ನಿಯಮಗಳ ಆಡಿ ಈಗಾಗಲೇ ಇರುವ ನಿಯಮದಂತೆ 10 ಲಕ್ಷರು.ವರೆಗೆ ದಂಡವಿಧಿ ಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಷೇಧಿತ ವಸ್ತುಗಳನ್ನು ಬಳಕೆ ಮಾಡದ ಕಾಟನ್ ಕ್ಯಾಂಡಿ ಅಥವಾ ಗೋಬಿ ಮಂಚೂರಿಯನ್ ನಿಷೇಧವಿಲ್ಲ. ಗೋಬಿಯನ್ನು ನಾವು ನಿಷೇಧ ಮಾಡಲು ಬರುವುದಿಲ್ಲ. ಇನ್ನು ಹಾನಿಕಾರಕ ಪದಾರ್ಥ ಬಳಕೆ ಮಾಡದಿದ್ದರೆ ಕಾಟನ್ ಕ್ಯಾಂಡಿಯಲ್ಲೂ ಸಕ್ಕರೆ ಮತ್ತಿತರ ಅಂಶ ಬಿಟ್ಟು ಬೇರೇನೂ ಇರುವುದಿಲ್ಲ. ಹೀಗಾಗಿ ಹಾನಿಕಾರಕ ಪದಾರ್ಥಗಳ ಬಳಕೆ ಮಾತ್ರವೇ ನಿಷೇಧಿಸಲಾಗುವುದು ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ತಿಳಿಸಿದ್ದಾರೆ.

Advertisement
Tags :
BANbengalurucottoncandyGobi ManchurianKARNATAKALatestNewsNewsKannada
Advertisement
Next Article