For the best experience, open
https://m.newskannada.com
on your mobile browser.
Advertisement

ಈ ವಾರ ಚಿನ್ನ ಬೆಳ್ಳಿಯ ಬೆಲೆ ಏರಿಕೆ ಸಾಧ್ಯತೆ ಕಡಿಮೆ: ಇವತ್ತಿನ ದರ ಪಟ್ಟಿ ಹೀಗಿದೆ

ಚಿನ್ನ ಮತ್ತು ಬೆಳ್ಳಿ ಬೆಲೆ ಈ ವಾರ ಹೆಚ್ಚು ಏರಿಕೆ ಆಗುವ ಸಾಧ್ಯತೆ ಕಡಿಮೆ ಇದೆ. ಕಳೆದ ಎರಡು ತಿಂಗಳಿಂದ ಚಿನ್ನದ ಬೆಲೆ ಜಾಗತಿಕವಾಗಿ ಭರ್ಜರಿ ಏರಿಕೆ ಆಗಿದೆ
06:48 AM Apr 22, 2024 IST | Ashika S
ಈ ವಾರ ಚಿನ್ನ ಬೆಳ್ಳಿಯ ಬೆಲೆ ಏರಿಕೆ ಸಾಧ್ಯತೆ ಕಡಿಮೆ  ಇವತ್ತಿನ ದರ ಪಟ್ಟಿ ಹೀಗಿದೆ

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆ ಈ ವಾರ ಹೆಚ್ಚು ಏರಿಕೆ ಆಗುವ ಸಾಧ್ಯತೆ ಕಡಿಮೆ ಇದೆ. ಕಳೆದ ಎರಡು ತಿಂಗಳಿಂದ ಚಿನ್ನದ ಬೆಲೆ ಜಾಗತಿಕವಾಗಿ ಭರ್ಜರಿ ಏರಿಕೆ ಆಗಿದೆ.

Advertisement

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 68,050 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 74,140 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,650 ರೂಪಾಯಿ ಇದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಬೆಂಗಳೂರು: 68,050 ರೂ, ಚೆನ್ನೈ: 68,850 ರೂ
ಮುಂಬೈ: 68,050 ರೂ,  ದೆಹಲಿ: 68,200 ರೂ, ಕೋಲ್ಕತಾ: 68,050 ರೂ, ಕೇರಳ: 68,050 ರೂ, ಅಹ್ಮದಾಬಾದ್: 68,100 ರೂ, ಜೈಪುರ್: 68,200 ರೂ, ಲಕ್ನೋ: 68,200 ರೂ, ಭುವನೇಶ್ವರ್: 68,050 ರೂ ಇದೆ.

Advertisement

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಮಲೇಷ್ಯಾ: 3,650 ರಿಂಗಿಟ್ (63,612 ರೂಪಾಯಿ), ದುಬೈ: 2,682.50 ಡಿರಾಮ್ (60,896 ರೂಪಾಯಿ), ಅಮೆರಿಕ: 730 ಡಾಲರ್ (60,864 ರೂಪಾಯಿ), ಸಿಂಗಾಪುರ: 1,014 ಸಿಂಗಾಪುರ್ ಡಾಲರ್ (62,086 ರೂಪಾಯಿ), ಕತಾರ್: 2,730 ಕತಾರಿ ರಿಯಾಲ್ (62,407 ರೂಪಾಯಿ), ಸೌದಿ ಅರೇಬಿಯಾ: 2,740 ಸೌದಿ ರಿಯಾಲ್ (60,896 ರೂಪಾಯಿ), ಓಮನ್: 289 ಒಮಾನಿ ರಿಯಾಲ್ (62,589 ರೂಪಾಯಿ), ಕುವೇತ್: 227 ಕುವೇತಿ ದಿನಾರ್ (61,375 ರೂಪಾಯಿ) ಆಗಿದೆ.

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ಈ ವರ್ಷದಲ್ಲಿ (2024ರ ಅಂತ್ಯಕ್ಕೆ) ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

Advertisement
Tags :
Advertisement