For the best experience, open
https://m.newskannada.com
on your mobile browser.
Advertisement

ಆರ್ಚರಿ ವಿಶ್ವಕಪ್​ನಲ್ಲಿ ಭಾರತಕ್ಕೆ 4 ಚಿನ್ನದ ಪದಕ

ಭಾರತದ ಬಿಲ್ಗಾರರು ಆರ್ಚರಿ ವಿಶ್ವಕಪ್​ ಸ್ಟೇಜ್​-1ರಲ್ಲಿ 4 ಚಿನ್ನ ಸಹಿತ 5 ಪದಕ ಗೆದ್ದುಕೊಂಡಿದ್ದಾರೆ. ಏಷ್ಯನ್​ ಗೇಮ್ಸ್​ ಚಾಂಪಿಯನ್​ ಜ್ಯೋತಿ ಸುರೇಖಾ ಕಂಪೌಂಡ್​ ವಿಭಾಗದಲ್ಲಿ ಭಾರತ ಗೆದ್ದ 3 ಸ್ವರ್ಣ ಪದಕಗಳಲ್ಲಿ ವಿಶೇಷ ಕೊಡುಗೆ ನೀಡಿ ಗಮನಸೆಳೆದರು.
06:53 AM Apr 28, 2024 IST | Ashitha S
ಆರ್ಚರಿ ವಿಶ್ವಕಪ್​ನಲ್ಲಿ ಭಾರತಕ್ಕೆ 4 ಚಿನ್ನದ ಪದಕ

ಶಾಂಘೈ: ಭಾರತದ ಬಿಲ್ಗಾರರು ಆರ್ಚರಿ ವಿಶ್ವಕಪ್​ ಸ್ಟೇಜ್​-1ರಲ್ಲಿ 4 ಚಿನ್ನ ಸಹಿತ 5 ಪದಕ ಗೆದ್ದುಕೊಂಡಿದ್ದಾರೆ. ಏಷ್ಯನ್​ ಗೇಮ್ಸ್​ ಚಾಂಪಿಯನ್​ ಜ್ಯೋತಿ ಸುರೇಖಾ ಕಂಪೌಂಡ್​ ವಿಭಾಗದಲ್ಲಿ ಭಾರತ ಗೆದ್ದ 3 ಸ್ವರ್ಣ ಪದಕಗಳಲ್ಲಿ ವಿಶೇಷ ಕೊಡುಗೆ ನೀಡಿ ಗಮನಸೆಳೆದರು.

Advertisement

ವಿಶ್ವ ನಂ. 3 ಜ್ಯೋತಿ ಸುರೇಖಾ ವೈಯಕ್ತಿಕ ವಿಭಾಗದ ಜತೆಗೆ ಮಹಿಳಾ ತಂಡ ವಿಭಾಗದಲ್ಲಿ ಅದಿತಿ ಸ್ವಾಮಿ ಮತ್ತು ಪರ್​ನೀತ್​ ಕೌರ್​ ಜತೆಗೆ ಚಿನ್ನ ಗೆದ್ದರು. ಮಿಶ್ರ ವಿಭಾಗದಲ್ಲಿ ಅಭಿಷೇಕ್​ ಶರ್ಮ ಜತೆಗೂಡಿ ಚಿನ್ನದ ಪದಕ ಜಯಿಸಿದರು.

ಪುರುಷರ ತಂಡ ವಿಭಾಗದಲ್ಲಿ ಅಭಿಷೇಕ್​ ಶರ್ಮ, ಪ್ರಿಯಾಂಶು, ಪ್ರಥಮೇಶ್​ ಒಳಗೊಂಡ ತಂಡ ಚಿನ್ನದ ಪದಕ ಜಯಿಸಿತು. ಪುರುಷರ ವೈಯಕ್ತಿಕ ವಿಭಾಗದಲ್ಲಿ ಪ್ರಿಯಾಂಶು ರಜತ ಪದಕ ಗೆದ್ದರು. ರಿಕರ್ವ್​ ವಿಭಾಗದ ಪದಕ ಸ್ಪರ್ಧೆಗಳು ಭಾನುವಾರ ನಡೆಯಲಿವೆ.

Advertisement

Advertisement
Tags :
Advertisement