For the best experience, open
https://m.newskannada.com
on your mobile browser.
Advertisement

ಮಾರುಕಟ್ಟೆಯಲ್ಲಿ ಇವತ್ತಿನ ಚಿನ್ನ, ಬೆಳ್ಳಿ ಬೆಲೆಗಳೆಷ್ಟು?

ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಹೆಚ್ಚಾಗಿವೆ. ಚಿನ್ನದ ಬೆಲೆ ಗ್ರಾಮ್​ಗೆ ಬರೋಬ್ಬರಿ 75 ರೂನಷ್ಟು ಹೆಚ್ಚಾದರೆ, ಬೆಳ್ಳಿ ಬೆಲೆಯೂ ಗ್ರಾಮ್​ಗೆ 2 ರೂನಷ್ಟು ಜಿಗಿತ ಕಂಡಿದೆ. ಎರಡೂ ಕೂಡ ಹೊಸ ದಾಖಲೆ ಬೆಲೆ ಪಡೆದಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇವೆರಡೂ ಲೋಹಗಳಿಗೆ ಭಾರೀ ಬೇಡಿಕೆ ಮುಂದುವರಿದಿದೆ.
06:54 AM Apr 04, 2024 IST | Ashitha S
ಮಾರುಕಟ್ಟೆಯಲ್ಲಿ ಇವತ್ತಿನ ಚಿನ್ನ  ಬೆಳ್ಳಿ ಬೆಲೆಗಳೆಷ್ಟು

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಹೆಚ್ಚಾಗಿವೆ. ಚಿನ್ನದ ಬೆಲೆ ಗ್ರಾಮ್​ಗೆ ಬರೋಬ್ಬರಿ 75 ರೂನಷ್ಟು ಹೆಚ್ಚಾದರೆ, ಬೆಳ್ಳಿ ಬೆಲೆಯೂ ಗ್ರಾಮ್​ಗೆ 2 ರೂನಷ್ಟು ಜಿಗಿತ ಕಂಡಿದೆ. ಎರಡೂ ಕೂಡ ಹೊಸ ದಾಖಲೆ ಬೆಲೆ ಪಡೆದಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇವೆರಡೂ ಲೋಹಗಳಿಗೆ ಭಾರೀ ಬೇಡಿಕೆ ಮುಂದುವರಿದಿದೆ.

Advertisement

ಚಿನ್ನದ ಬೆಲೆ ಗ್ರಾಮ್​ಗೆ 35 ರೂನಷ್ಟು ಕಡಿಮೆ ಆಗಿದೆ. ಆದರೆ, ಬೆಳ್ಳಿ ಬೆಲೆಯ ಏರಿಕೆ ಮುಂದುವರಿದಿದೆ. ಗ್ರಾಮ್​ಗೆ 40 ಪೈಸೆಯಷ್ಟು ಬೆಳ್ಳಿ ಬೆಲೆ ಹೆಚ್ಚಳವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 64,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 69,870 ರೂಪಾಯಿ ಆಗಿದೆ.

100 ಗ್ರಾಮ್ ಬೆಳ್ಳಿ ಬೆಲೆ 8,100 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 64,100 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,825 ರೂಪಾಯಿಯಲ್ಲಿ ಇದೆ.

Advertisement

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ) ಬೆಂಗಳೂರು: 64,100 ರೂ., ಚೆನ್ನೈ: 65,000 ರೂ., ಮುಂಬೈ: 64,100 ರೂ., ದೆಹಲಿ: 64,250 ರೂ., ಕೋಲ್ಕತಾ: 64,100 ರೂ., ಕೇರಳ: 64,100 ರೂ., ಅಹ್ಮದಾಬಾದ್: 64,150 ರೂ., ಜೈಪುರ್: 64,250 ರೂ., ಲಕ್ನೋ: 64,250 ರೂ., ಭುವನೇಶ್ವರ್: 64,100 ರೂಪಾಯಿ ಇದೆ.

Advertisement
Tags :
Advertisement