ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ: ಗ್ರಾಮ್​ಗೆ 60 ರೂನಷ್ಟು ಕುಸಿತ

ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ಸ್ವಲ್ಪ ಮಟ್ಟಿಗಿನ ಕುಸಿತ ಕಂಡಿದೆ. ಚಿನ್ನದ ಬೆಲೆ ಗ್ರಾಮ್​ಗೆ ಬರೋಬ್ಬರಿ 60 ರೂನಷ್ಟು ಕಡಿಮೆಯಾಗಿದೆ.
06:51 AM Feb 15, 2024 IST | Ashika S

ಬೆಂಗಳೂರು: ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ಸ್ವಲ್ಪ ಮಟ್ಟಿಗಿನ ಕುಸಿತ ಕಂಡಿದೆ. ಚಿನ್ನದ ಬೆಲೆ ಗ್ರಾಮ್​ಗೆ ಬರೋಬ್ಬರಿ 60 ರೂನಷ್ಟು ಕಡಿಮೆಯಾಗಿದೆ.

Advertisement

ಬೆಳ್ಳಿ ಬೆಲೆ ಗ್ರಾಮ್​ಗೆ 15 ಪೈಸೆಯಷ್ಟು ಇಳಿಕೆ ಆಗಿದೆ. ಬೆಂಗಳೂರು ಹೊರತುಪಡಿಸಿ ಉಳಿದ ಕಡಿಮೆ ಬೆಳ್ಳಿ ಸ್ವಲ್ಪ ಅಗ್ಗವಾಗಿದೆ.  ವಿದೇಶಗಳಲ್ಲೂ ಬಹಳ ಕಡೆ ಚಿನ್ನದ ಬೆಲೆ ಇಳಿಕೆ ಮುಂದುವರಿದಿದೆ. ಅಮೆರಿಕದಂಥ ಕೆಲ ದೇಶಗಳಲ್ಲಿ ಯಥಾಸ್ಥಿತಿ ಇದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 57,000 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 62,180 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,400 ರೂಪಾಯಿ ಇದೆ.

Advertisement

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಬೆಂಗಳೂರು: 57,000 ರೂ, ಚೆನ್ನೈ: 57,500 ರೂ
ಮುಂಬೈ: 57,000 ರೂ, ದೆಹಲಿ: 57,150 ರೂ, ಕೋಲ್ಕತಾ: 57,000 ರೂ, ಕೇರಳ: 57,000 ರೂ, ಅಹ್ಮದಾಬಾದ್: 57,050 ರೂ, ಜೈಪುರ್: 57,150 ರೂ, ಲಕ್ನೋ: 57,150 ರೂ, ಭುವನೇಶ್ವರ್: 57,000 ರೂ ಇದೆ.

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಮಲೇಷ್ಯಾ: 3,060 ರಿಂಗಿಟ್ (53,074 ರೂಪಾಯಿ ), ದುಬೈ: 2,232.50 ಡಿರಾಮ್ (50,473 ರೂಪಾಯಿ ), ಅಮೆರಿಕ: 620 ಡಾಲರ್ (51,485 ರೂಪಾಯಿ ), ಸಿಂಗಾಪುರ: 836 ಸಿಂಗಾಪುರ್ ಡಾಲರ್ (51,424 ರೂಪಾಯಿ ), ಕತಾರ್: 2,300 ಕತಾರಿ ರಿಯಾಲ್ (52,376 ರೂ), ಸೌದಿ ಅರೇಬಿಯಾ: 2,300 ಸೌದಿ ರಿಯಾಲ್ (50,922 ರೂಪಾಯಿ ), ಓಮನ್: 243 ಒಮಾನಿ ರಿಯಾಲ್ (52,411 ರೂಪಾಯಿ), ಕುವೇತ್: 192.50 ಕುವೇತಿ ದಿನಾರ್ (51,839 ರೂಪಾಯಿ ) ಇದೆ.

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ.

Advertisement
Tags :
gold pricegold silverLatetsNewsNewsKannadaಚಿನ್ನಬೆಳ್ಳಿ
Advertisement
Next Article