For the best experience, open
https://m.newskannada.com
on your mobile browser.
Advertisement

ಮತ್ತೆ ಏರಿಕೆಯತ್ತ ಚಿನ್ನ, ಬೆಳ್ಳಿ ದರ: ಇವತ್ತಿನ ಬೆಲೆಗಳೆಷ್ಟು?

ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತ ಎರಡನೇ ದಿನ ಜಿಗಿದಿದೆ. ಮೊನ್ನೆ ಅಮೆರಿಕದ ಫೆಡರಲ್ ರಿಸರ್ವ್ ಮೂರು ಬಾರಿ ಬಡ್ಡಿದರ ಕಡಿತಗೊಳಿಸುವ ಸುಳಿವು ನೀಡಿದ ಬೆನ್ನಲ್ಲೇ ಚಿನ್ನದ ಬೆಲೆ ಗ್ರಾಮ್​ಗೆ 100 ರೂನಷ್ಟು ಏರಿದೆ. ಬೆಳ್ಳಿ ಬೆಲೆಯೂ ಗ್ರಾಮ್​ಗೆ ಒಂದೂವರೆ ರೂನಷ್ಟು ದುಬಾರಿಯಾಗಿದೆ.
06:57 AM Mar 22, 2024 IST | Ashitha S
ಮತ್ತೆ ಏರಿಕೆಯತ್ತ ಚಿನ್ನ  ಬೆಳ್ಳಿ ದರ  ಇವತ್ತಿನ  ಬೆಲೆಗಳೆಷ್ಟು

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತ ಎರಡನೇ ದಿನ ಜಿಗಿದಿದೆ. ಮೊನ್ನೆ ಅಮೆರಿಕದ ಫೆಡರಲ್ ರಿಸರ್ವ್ ಮೂರು ಬಾರಿ ಬಡ್ಡಿದರ ಕಡಿತಗೊಳಿಸುವ ಸುಳಿವು ನೀಡಿದ ಬೆನ್ನಲ್ಲೇ ಚಿನ್ನದ ಬೆಲೆ ಗ್ರಾಮ್​ಗೆ 100 ರೂನಷ್ಟು ಏರಿದೆ. ಬೆಳ್ಳಿ ಬೆಲೆಯೂ ಗ್ರಾಮ್​ಗೆ ಒಂದೂವರೆ ರೂನಷ್ಟು ದುಬಾರಿಯಾಗಿದೆ.

Advertisement

ಇತ್ತೀಚಿನ ವರ್ಷಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಕಂಡ ಅತಿದೊಡ್ಡ ಹೆಚ್ಚಳ ಇದು. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 61,800 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 67,420 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,850 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 61,800 ರೂಪಾಯಿ ಆಗಿದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 61,800 ರೂ
  • ಚೆನ್ನೈ: 62,350 ರೂ
  • ಮುಂಬೈ: 61,800 ರೂ
  • ದೆಹಲಿ: 61,950 ರೂ
  • ಕೋಲ್ಕತಾ: 61,800 ರೂ
  • ಕೇರಳ: 61,800 ರೂ
  • ಅಹ್ಮದಾಬಾದ್: 61,850 ರೂ
  • ಜೈಪುರ್: 61,950 ರೂ
  • ಲಕ್ನೋ: 61,950 ರೂ
  • ಭುವನೇಶ್ವರ್: 61,800 ರೂ

    ಇಂದು ಬೆಳ್ಳಿ ದರವೂ ಕೊಂಚ ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 76.10 ರೂ. ಇದೆ. 8 ಗ್ರಾಂಗೆ 608.80 ರೂ ಇದ್ದರೆ, 10 ಗ್ರಾಂಗೆ 761 ರೂ. ಇದೆ. 100 ಗ್ರಾಂಗೆ 7,610 ರೂ. ಹಾಗೂ 1 ಕಿಲೋಗೆ 76,100 ರೂ. ಬೆಲೆ ನಿಗದಿ ಆಗಿದೆ.

    Advertisement

Advertisement
Tags :
Advertisement