For the best experience, open
https://m.newskannada.com
on your mobile browser.
Advertisement

ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳ ಸಾಗಣೆ : ಭಟ್ಕಳದ ವ್ಯಕ್ತಿಯ ಬಂಧನ

ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಟ್ಖಳ ಮೂಲದ ಪ್ರಯಾಣಿಕನೊಬ್ಬ 6 ಲಕ್ಷ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಕಸ್ಟಮ್‌ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ.
04:01 PM Mar 20, 2024 IST | Nisarga K
ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳ ಸಾಗಣೆ   ಭಟ್ಕಳದ ವ್ಯಕ್ತಿಯ ಬಂಧನ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳ ಸಾಗಣೆ : ಭಟ್ಕಳದ ವ್ಯಕ್ತಿಯ ಬಂಧನ

ಮಂಗಳೂರು: ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಟ್ಖಳ ಮೂಲದ ಪ್ರಯಾಣಿಕನೊಬ್ಬ 6 ಲಕ್ಷ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಕಸ್ಟಮ್‌ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ.

Advertisement

ಮಾರ್ಚ್‌ 19 ರಂದು ದುಬೈನಿಂದ ಪ್ರಯಾಣಿಸುತ್ತಿದ್ದ ಈ ವ್ಯಕ್ತಿ 6,19,200 ರೂಪಾಯಿ ಮೌಲ್ಯದ 96 ಗ್ರಾಂ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದನ್ನು ಕಸ್ಟಮ್‌ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ವಶಪಡಿಸಿಕೊಂಡ ಚಿನ್ನವನ್ನು ಪೇಸ್ಟ್ ಆಗಿ ಪರಿವರ್ತಿಸಿ ಎರಡು ಲೇಯರ್ ಕಂದು ಕಾಗದದ ಹಾಳೆಗಳ ನಡುವೆ ಬಚ್ಚಿಟ್ಟಿದ್ದರು. ಇದನ್ನು ಕಳ್ಳಸಾಗಣೆ ಮಾಡುವುದಕ್ಕಾಗಿ ಟ್ರಾಲಿ ಬ್ಯಾಗ್‌ನಲ್ಲಿ ಅಡಗಿಸಿ ಇಡಲಾಗಿತ್ತು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Advertisement
Tags :
Advertisement