ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರಾಮನಿಗೆ ಪಾದುಕೆ ಹೊತ್ತು ರಾಮ ನಡೆದ ದಾರಿಯಲ್ಲೇ ಪಾದಯಾತ್ರೆ

ಹೈದರಾಬಾದ್ ಮೂಲದ ಚಲ್ಲಾ ಶ್ರೀನಿವಾಸ್ ಶಾಸ್ತ್ರೀ ಎಂಬ ರಾಮಭಕ್ತ ಶ್ರೀರಾಮನಿಗೆ ಆರ್ಪಣೆ ಮಾಡಲು ಚಿನ್ನಲೇಪಿತ ಪಾದುಕೆಗಳೊಂದಿಗೆ ರಾಮೇಶ್ವರದಿಂದ ಅಯೋಧ್ಯೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.
07:09 PM Jan 06, 2024 IST | Maithri S

ಹೈದರಾಬಾದ್: ಹೈದರಾಬಾದ್ ಮೂಲದ ಚಲ್ಲಾ ಶ್ರೀನಿವಾಸ್ ಶಾಸ್ತ್ರೀ ಎಂಬ ರಾಮಭಕ್ತ ಶ್ರೀರಾಮನಿಗೆ ಆರ್ಪಣೆ ಮಾಡಲು ಚಿನ್ನಲೇಪಿತ ಪಾದುಕೆಗಳೊಂದಿಗೆ ರಾಮೇಶ್ವರದಿಂದ ಅಯೋಧ್ಯೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.

Advertisement

ಮೂಲತಃ ಸೌಂಡ್ ಇಂಜಿನಿಯರ್ ಆಗಿರುವ ೫೪ ವರ್ಷದ ಶಾಸ್ತ್ರಿ ಜ.೨೨ರಂದು ನಡೆಯಲಿರುವ ರಾಮಮಂದಿರದ ಉದ್ಘಾಟನೆಗೂ ಮೊದಲೇ ಕಾಲ್ನಡಿಗೆಯಲ್ಲಿ ಅಯೋಧ್ಯೆ ತಲುಪಿದ್ದು, ರಾಮಮಂದಿರ ಹೋರಾಟದಲ್ಲಿ ಕರಸೇವಕರಾಗಿದ್ದ ತಮ್ಮ ತಂದೆಯ ಕನಸನ್ನು ನನಸು ಮಾಡುವ ಅವಕಾಶ ಸಿಕ್ಕಿದ್ದಕ್ಕಾಗಿ ಸಂತೋಷಿಸಿದ್ದಾರೆ.

ಇವರ ಪಾದಯಾತ್ರೆ ಜುಲೈ ೨೦ಕ್ಕೆ ಪ್ರಾರಂಭವಾಗಿದ್ದು, ವನವಾಸದ ಸಮಯದಲ್ಲಿ ಅಯೋಧ್ಯೆಯಿಂದ ರಾಮೇಶ್ವರ ಸೇರಲು ರಾಮ ತುಳಿದ ಹಾದಿಯನ್ನೇ ಹಿಡಿದು, ಶಿವಲಿಂಗಗಳ ದರ್ಶನ ಪಡೆಯುತ್ತಾ ಬಂದಿರುವುದಾಗಿ ಹೇಳಿದ್ದಾರೆ.

Advertisement

ಸಂಪೂರ್ಣ ಚಿನ್ನ ಲೇಪಿತ ಪಾದುಕೆಯು ಪಂಚಲೋಹಗಳಿಂದ ಮಾಡಲಾಗಿದ್ದು, ಅದನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಮೂಲಕ ಟ್ರಸ್ಟ್ ಗೆ ತಲುಪಿಸಿದ್ದಾರೆ.

ಪಾದುಕೆ ಸೇರಿ ದೇವಸ್ಥಾನಕ್ಕೆ ಸಲ್ಲಿಸಲಿರುವ ಆಭರಣ ಮತ್ತು ಪರಿಕರಗಳು ೬೫ ಲಕ್ಷ ಬೆಲೆಯವೆಂದು ಮಾಹಿತಿ ನೀಡಿದ್ದಾರೆ.

Advertisement
Tags :
AyodhyaGolden padukeindiaLatestNewsNewsKannadapadayatre
Advertisement
Next Article