For the best experience, open
https://m.newskannada.com
on your mobile browser.
Advertisement

ಮಕ್ಕಳಾಗದ ದಂಪತಿಗೆ ಗುಡ್ ನ್ಯೂಸ್ : ಐವಿಎಫ್‌ ಈಗ ಸರ್ಕಾರಿ ಆಸ್ಪತ್ರೆಯಲ್ಲೂ ಲಭ್ಯ

ಹಲವು ದಂಪತಿಗಳಿಗೆ ಮಕ್ಕಳ್ಳಿಲ್ಲದ ಕೊರತೆ ಕಾಡುತ್ತಿವೆ. ಕೆಲವು ದಂಪತಿಗಳು ಹರಕೆ ಹೊರುತ್ತಾರೆ ಇನ್ನೂ ಕೆಲವರು ಐವಿಎಫ್ ನಂತಹ ಚಿಕಿತ್ಸೆ ಮೊರೆ ಹೋಗ್ತಿದ್ದಾರೆ. ಆದರೆ ಇದಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಿದ್ದು ಬಡ ಹಾಗೂ ಮದ್ಯಮ ವರ್ಗದವರಿಗೆ ಈ ಚಿಕಿತ್ಸೆ ಪಡೆಯೋದು ಕಷ್ಟವಾಗಿದೆ. ಕಷ್ಟವಾಗಿದೆ. ಎಷ್ಟೋ ಪೋಷಕರು ಇದೇ ಕಾರಣಕ್ಕೆ ಮಕ್ಕಳು ಪಡೆಯಲು ಸಾಧ್ಯವಾಗದೆ ಸಂಕಷ್ಟ ಎದುರಿಸುವಂತಾಗಿದೆ. ಇದೀಗ ಇಂತಹ ದಂಪತಿಗಳಿಗೆ ಆರೋಗ್ಯ ಇಲಾಖೆ ಸಿಹಿ ಸುದ್ಧಿ ನೀಡಿದೆ.
07:54 AM May 07, 2024 IST | Nisarga K
ಮಕ್ಕಳಾಗದ ದಂಪತಿಗೆ ಗುಡ್ ನ್ಯೂಸ್   ಐವಿಎಫ್‌ ಈಗ ಸರ್ಕಾರಿ ಆಸ್ಪತ್ರೆಯಲ್ಲೂ ಲಭ್ಯ
ಮಕ್ಕಳಾಗದ ದಂಪತಿಗೆ ಗುಡ್ ನ್ಯೂಸ್ : ಐವಿಎಫ್‌ ಈಗ ಸರ್ಕಾರಿ ಆಸ್ಪತ್ರೆಯಲ್ಲೂ ಲಭ್ಯ

ಬೆಂಗಳೂರು:   ಹಲವು ದಂಪತಿಗಳಿಗೆ ಮಕ್ಕಳ್ಳಿಲ್ಲದ ಕೊರತೆ ಕಾಡುತ್ತಿವೆ. ಕೆಲವು ದಂಪತಿಗಳು ಹರಕೆ ಹೊರುತ್ತಾರೆ ಇನ್ನೂ ಕೆಲವರು ಐವಿಎಫ್ ನಂತಹ ಚಿಕಿತ್ಸೆ ಮೊರೆ ಹೋಗ್ತಿದ್ದಾರೆ. ಆದರೆ ಇದಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಿದ್ದು ಬಡ ಹಾಗೂ ಮದ್ಯಮ ವರ್ಗದವರಿಗೆ ಈ ಚಿಕಿತ್ಸೆ ಪಡೆಯೋದು ಕಷ್ಟವಾಗಿದೆ. ಕಷ್ಟವಾಗಿದೆ. ಎಷ್ಟೋ ಪೋಷಕರು ಇದೇ ಕಾರಣಕ್ಕೆ ಮಕ್ಕಳು ಪಡೆಯಲು ಸಾಧ್ಯವಾಗದೆ ಸಂಕಷ್ಟ ಎದುರಿಸುವಂತಾಗಿದೆ. ಇದೀಗ ಇಂತಹ ದಂಪತಿಗಳಿಗೆ ಆರೋಗ್ಯ ಇಲಾಖೆ ಸಿಹಿ ಸುದ್ಧಿ ನೀಡಿದೆ.

Advertisement

ಇಷ್ಟು ದಿನ ಮಗು ಪಡೆಯಲು ಸಾಧ್ಯವಾಗದವರು IVF ಚಿಕಿತ್ಸೆ ಪಡೆಯಲು ಖಾಸಗಿ ಆಸ್ಪತ್ರೆ ಮೊರೆ ಹೋಗಬೇಕಿತ್ತು. ಇದಕ್ಕೆ ಲಕ್ಷ ಲಕ್ಷ ಹಣ ಖರ್ಚು ಮಾಡಬೇಕಿತ್ತು. ಆದರೆ ಇನ್ಮುಂದೆ ಚಿಂತೆ ಬೇಡ. ಯಾಕೆಂದ್ರೆ ಸರ್ಕಾರದಿಂದ ಮಕ್ಕಳಾಗದವರಿಗೆ ಐವಿಎಫ್ ಚಿಕಿತ್ಸೆ ಅವಶ್ಯ ಇದ್ದವರಿಗೆ ಕಡಿಮೆ ವೆಚ್ಚದಲ್ಲಿ ಈ ಚಿಕಿತ್ಸೆಯನ್ನ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಶುರುವಾಗ್ತಿದೆ IVF ಸೌಲಭ್ಯ
ಪ್ರಾಥಮಿಕ ಹಂತದಲ್ಲಿ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಈ ಚಿಕಿತ್ಸೆ ಶುರುವಾಗ್ತಿದೆ. IVF ಚಿಕಿತ್ಸೆ ಅಂದ್ರೆ ಅಂಡಾಣು ಮತ್ತು ವೀರ್ಯಾಣುವನ್ನು ದೇಹದ ಹೊರಗೆ ಫಲ ನೀಡಲು ಇಡಲಾಗುವುದು ಬಳಿಕ ಮಹಿಳೆ ಗರ್ಭಾಶಯಕ್ಕೆ ಇಂಜೆಕ್ಟ್ ಮಾಡುವ ಪ್ರಕ್ರಿಯೆಯನ್ನು ಐವಿಎಫ್ ಚಿಕಿತ್ಸೆ ಎನ್ನಲಾಗುತ್ತೆ. ಸದ್ಯ ಇದು ಬಡ ಹಾಗೂ ಮದ್ಯಮ ವರ್ಗದವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಬರ್ತಿರೋದು ವರವಾಗಲಿದೆ ಎಂದಿದ್ದಾರೆ ಕೆ.ಸಿ. ಜನರಲ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ ಇಂದಿರಾ.

Advertisement

ಒಟ್ನಲ್ಲಿ ಈ ಸೌಲಭ್ಯದಿಂದ ಬಡ ಮತ್ತು ಮಧ್ಯಮ ವರ್ಗದ ದಂಪತಿಗಳು ನಿಟ್ಟುಸಿರು ಬಿಡುವಂತಾಗಿದೆ.ಪೋಷಕರಿಗೆ ವರದಾನವಾಗಲಿದೆ.

Advertisement
Tags :
Advertisement