For the best experience, open
https://m.newskannada.com
on your mobile browser.
Advertisement

ಗೌರಿಬಿದನೂರಿನಲ್ಲಿ ಅತ್ಯಾಧುನಿಕ ಆಟೋಮೋಟಿವ್ ಪ್ಲಾಸ್ಟಿಕ್ ಘಟಕ ಸ್ಥಾಪನೆ

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನಲ್ಲಿ ಅತ್ಯಾಧುನಿಕ ಆಟೋಮೋಟಿವ್ ಪ್ಲಾಸ್ಟಿಕ್ ಘಟಕ ಸ್ಥಾಪಿಸಲಾಗುತ್ತಿದ್ದು, ಬರೋಬ್ಬರಿ 288 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತಿದೆ. ಈ ಮಹತ್ವದ ಒಪ್ಪಂದವನ್ನು ರಾಜ್ಯ ಸರ್ಕಾರ ಮತ್ತು ಕೊರಿಯಾ ದೇಶದ NIFCO ಸೌತ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್ ಮಾಡಿಕೊಂಡಿದೆ.
10:15 PM Dec 06, 2023 IST | Gayathri SG
ಗೌರಿಬಿದನೂರಿನಲ್ಲಿ ಅತ್ಯಾಧುನಿಕ ಆಟೋಮೋಟಿವ್ ಪ್ಲಾಸ್ಟಿಕ್ ಘಟಕ ಸ್ಥಾಪನೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನಲ್ಲಿ ಅತ್ಯಾಧುನಿಕ ಆಟೋಮೋಟಿವ್ ಪ್ಲಾಸ್ಟಿಕ್ ಘಟಕ ಸ್ಥಾಪಿಸಲಾಗುತ್ತಿದ್ದು, ಬರೋಬ್ಬರಿ 288 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತಿದೆ. ಈ ಮಹತ್ವದ ಒಪ್ಪಂದವನ್ನು ರಾಜ್ಯ ಸರ್ಕಾರ ಮತ್ತು ಕೊರಿಯಾ ದೇಶದ NIFCO ಸೌತ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್ ಮಾಡಿಕೊಂಡಿದೆ.

Advertisement

ನಿಫ್ಕೊ ದಕ್ಷಿಣ ಭಾರತದ ಅಧ್ಯಕ್ಷರಾದ ಹ್ಯುನ್-ಡಾನ್ ಚೋಯ್ ಅವರೊಂದಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಅವರು ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಗೌರಿಬಿದನೂರಿನಲ್ಲಿ ಅತ್ಯಾಧುನಿಕ ಆಟೋಮೋಟಿವ್ ಪ್ಲಾಸ್ಟಿಕ್ ಘಟಕ ಸ್ಥಾಪನೆ ಮಾಡುತ್ತಿರೋದು ರಾಜ್ಯದ ಕೈಗಾರಿಕಾ ವಲಯದಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಸಚಿವ ಎಂ.ಬಿ ಪಾಟೀಲ್ ಅವರು ನಿಫ್ಕೊ ಕಂಪನಿಗೆ ರಾಜ್ಯದಿಂದ ಹಲವಾರು ಸೌಲಭ್ಯ ಮತ್ತು ಪ್ರೋತ್ಸಾಹದೊಂದಿಗೆ ಸಂಪೂರ್ಣ ಬೆಂಬಲದ ಭರವಸೆ ನೀಡಿದ್ದಾರೆ. ಮಹಿಳಾ ಸಬಲೀಕರಣದ ಬದ್ಧತೆಯೊಂದಿಗೆ ಸುಮಾರು 400 ವ್ಯಕ್ತಿಗಳಿಗೆ ಉದ್ಯೋಗದ ಭರವಸೆ ನೀಡುವ ಯೋಜನೆ ಇದಾಗಿದ್ದು, ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

Advertisement

ಈ ಸಂದರ್ಭದಲ್ಲಿ ಮಾತನಾಡಿದ ನಿಫ್ಕೊ ದಕ್ಷಿಣ ಭಾರತದ ಅಧ್ಯಕ್ಷರಾದ ಹ್ಯುನ್-ಡಾನ್ ಚೋಯ್ ಅವರು ನಾನು ಕೊರಿಯಾದಿಂದ ಕರ್ನಾಟಕ ರಾಜ್ಯಕ್ಕೆ 288 ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿದ್ದೇನೆ. ಈ ಮೂಲಕ 400 ಮಂದಿಗೆ ಉದ್ಯೋಗ ನೀಡುವ ಭರವಸೆ ಹೊಂದಿದ್ದೇನೆ ಎಂದರು.

Advertisement
Tags :
Advertisement