For the best experience, open
https://m.newskannada.com
on your mobile browser.
Advertisement

ಈಶಾ ಫೌಂಡೇಶನ್​ಗೆ ಹೋಗುವ ಪ್ರವಾಸಿಗರಿಗೆ ಗುಡ್ ನ್ಯೂಸ್

ಚಿಕ್ಕಬಳ್ಳಾಪುರದ ಹೊರವಲಯದಲ್ಲಿರುವ ಸುಂದರ ಬೆಟ್ಟಗಳು, ಹಸಿರ ತಪ್ಪಲಿನಲ್ಲಿ ಎದ್ದು ಕಾಣುವ ಬೃಹತ್ ಶಿವನ ಮೂರ್ತಿ ಇರುವ ಇಶಾ ಫೌಂಡೇಶನ್‌ ನೋಡಲು ಪ್ರತಿ ದಿನ ನೂರಾರು ಭಕ್ತರು ಭೇಟಿ ನೀಡುತ್ತಾರೆ.
04:15 PM Mar 05, 2024 IST | Ashitha S
ಈಶಾ ಫೌಂಡೇಶನ್​ಗೆ ಹೋಗುವ ಪ್ರವಾಸಿಗರಿಗೆ ಗುಡ್ ನ್ಯೂಸ್

ಬೆಂಗಳೂರು: ಚಿಕ್ಕಬಳ್ಳಾಪುರದ ಹೊರವಲಯದಲ್ಲಿರುವ ಸುಂದರ ಬೆಟ್ಟಗಳು, ಹಸಿರ ತಪ್ಪಲಿನಲ್ಲಿ ಎದ್ದು ಕಾಣುವ ಬೃಹತ್ ಶಿವನ ಮೂರ್ತಿ ಇರುವ ಇಶಾ ಫೌಂಡೇಶನ್‌ ನೋಡಲು ಪ್ರತಿ ದಿನ ನೂರಾರು ಭಕ್ತರು ಭೇಟಿ ನೀಡುತ್ತಾರೆ.

Advertisement

ಅದರಲ್ಲೂ ವಾರಾಂತ್ಯ, ರಜಾ ದಿನಗಳು ಬಂತೆಂದರೆ ಜನ ಸಾಗರವೇ ಕಂಡು ಬರುತ್ತೆ. ಸದ್ಯ ಈಶಾ ಫೌಂಡೇಶನ್​ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಬಿಎಂಟಿಸಿ ವಿಶೇಷ ಟೂರ್ ಪ್ಯಾಕೆಜ್ ವ್ಯವಸ್ಥೆ ಮಾಡಿದೆ. ನಾಳೆಯಿಂದ (ಮಾರ್ಚ್​.06) ಈಶಾ ಫೌಂಡೇಶನ್ ಟೂರ್ ಪ್ಯಾಕೇಜ್ ಆರಂಭವಾಗಲಿದೆ.  ಇನ್ನು ಇದು ಭೋಗ ನಂದೀಶ್ವರ ದೇವಸ್ಥಾನ (ಕಣಿವೆ ಬಸವಣ್ಣ ದೇವಸ್ಥಾನ)., ಸರ್.ಎಂ.ವಿಶ್ವೇಶ್ವರಯ್ಯ ಮ್ಯೂಸಿಯಂ ಮತ್ತು ಸಮಾಧಿ., ರಂಗಸ್ಥಳ ರಂಗನಾಥ ಸ್ವಾಮಿ ದೇವಸ್ಥಾನ., ಈಶಾ ಫೌಂಡೇಶನ್ ಸೇರಿ ಒಟ್ಟು 4 ಪ್ರವಾಸಿ ತಾಣಗಳನ್ನ ಈ ವಿಶೇಷ ಪ್ಯಾಕೇಜ್ ಒಳಗೊಂಡಿದೆ.

ಈಶಾ ಫೌಂಡೇಶನ್ ಹೆಸರಿನ ಟೂರ್ ಪ್ಯಾಕೇಜ್ ಸೇವೆಯನ್ನು ಬಿಎಂಟಿಸಿ ನೀಡಲು ಮುಂದಾಗಿದೆ. ಈ ವಿಶೇಷ ಟೂರ್ ಪ್ಯಾಕೇಜ್ ಅಡಿ ಕೆಂಪೇಗೌಡ ಬಸ್ ನಿಲ್ದಾಣದಿಂದ ಮಧ್ಯಾಹ್ನ 12 ಗಂಟೆಗೆ ಬಸ್ ಸೇವೆ ಶುರುವಾಗಲಿದ್ದು ರಾತ್ರಿ 9.30ಕ್ಕೆ ಮೆಜೆಸ್ಟಿಕ್​ಗೆ ವಾಪಸ್ ಕರೆದುಕೊಂಡು ಬರಲಾಗುತ್ತೆ. ಒಂದು ಸೀಟಿಗೆ 500 ರೂಪಾಯಿ ದರ ನಿಗದಿ ಮಾಡಲಾಗಿದೆ. ಈಶಾ ಫೌಂಡೇಶನ್ ಸೇರಿದಂತೆ ಚಿಕ್ಕಬಳ್ಳಾಪುರ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೂ ಭೇಟಿ ನೀಡಲು ಅವಕಾಶವಿದೆ. ನಾಳೆಯಿಂದ ಎಲ್ಲ ಸಾರ್ವತ್ರಿಕ ರಜೆ ದಿನಗಳಲ್ಲಿ ಈ ಸೇವೆ ಲಭ್ಯವಿರಲಿದೆ.

Advertisement

Advertisement
Tags :
Advertisement