ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪೊಲೀಸ್‌ ಪರೀಕ್ಷಾರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟ ರೈಲ್ವೆ

ರಾಜ್ಯ ಪೊಲೀಸ್​ ನೇಮಕಾತಿ ಪರೀಕ್ಷೆ ಹಿನ್ನೆಲೆ ರಾಜ್ಯದೊಳಗೆ ಸಂಚರಿಸುವ 22 ಪ್ರಮುಖ ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಜನರಲ್​ ಬೋಗಿ ಸೇರ್ಪಡೆಗೊಳಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.
09:04 PM Feb 19, 2024 IST | Ashitha S

ಬೆಂಗಳೂರು: ರಾಜ್ಯ ಪೊಲೀಸ್​ ನೇಮಕಾತಿ ಪರೀಕ್ಷೆ ಹಿನ್ನೆಲೆ ರಾಜ್ಯದೊಳಗೆ ಸಂಚರಿಸುವ 22 ಪ್ರಮುಖ ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಜನರಲ್​ ಬೋಗಿ ಸೇರ್ಪಡೆಗೊಳಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.

Advertisement

ಇತ್ತೀಚೆಗೆ ಪೊಲೀಸ್​ ಪರೀಕ್ಷೆ ಸಂದರ್ಭದಲ್ಲಿ ರೈಲುಗಳಲ್ಲಿ ಉಂಟಾಗುತ್ತಿರುವ ಪ್ರಯಾಣಿಕ ದಟ್ಟಣೆ ನಿಯಂತ್ರಿಸಲು, ಫೆ.23 ರಿಂದ ಫೆ.26ರ ವರೆಗೂ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

 ಮೈಸೂರು ವಿಭಾಗದ ದೇವರಗುಡ್ಡ ಮತ್ತು ಬ್ಯಾಡಗಿ ನಿಲ್ದಾಣಗಳ ನಡುವೆ ಅಗತ್ಯ ಸುರಕ್ಷತಾ ಸಂಬಂಧಿತ ನಿರ್ವಹಣಾ ಕಾಮಗಾರಿಯ ಸಲುವಾಗಿ, 2 ರೈಲುಗಳನ್ನು ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುತ್ತಿದೆ. ಫೆ.22ರಂದು 16541 ಯಶವಂತಪುರ&ಪಂಢರಪುರ(16541) ರೈಲು 60 ನಿಮಿಷ, ಫೆ.20 ರಿಂದ ಫೆ.28 ವರೆಗೆ ಮೈಸೂರು&ಪಂಢರಪುರ (16535) ಎಕ್ಸ್​ಪ್ರೆಸ್​ ರೈಲನ್ನು ಮಾರ್ಗ ಮಧ್ಯೆ 20 ನಿಮಿಷ ನಿಯಂತ್ರಿಸಲಾಗುತ್ತದೆ.

Advertisement

Advertisement
Tags :
indiaKARNATAKALatestNewsNewsKannadaರೈಲ್ವೆ
Advertisement
Next Article