ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ವಿಶಿಷ್ಟ ಡೂಡಲ್ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದ ಗೂಗಲ್

ವಿಶ್ವದಾದ್ಯಂತ 2023ಕ್ಕೆ ವಿದಾಯ ಹೇಳಿ, 2024ರ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತಿದೆ. ಈ ಸಂಭ್ರಮಕ್ಕೆ ಕೈಜೋಡಿಸಿರುವ ಗೂಗಲ್, ವಿಶಿಷ್ಟ ಕಸ್ಟಮೈಸ್ಡ್ ಆಯನಿಮೆಟೇಡ್ ಡೂಡಲ್ ಮೂಲಕ ಗಮನ ಸೆಳೆದಿದೆ. ಗೂಗಲ್ ಹೊಸ ವರ್ಷವನ್ನು ರೋಮಾಂಚಕ ಡೂಡಲ್‌ನೊಂದಿಗೆ ಆಚರಿಸಿದೆ.
01:24 PM Jan 01, 2024 IST | Ashitha S

ವದೆಹಲಿ: ವಿಶ್ವದಾದ್ಯಂತ 2023ಕ್ಕೆ ವಿದಾಯ ಹೇಳಿ, 2024ರ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತಿದೆ. ಈ ಸಂಭ್ರಮಕ್ಕೆ ಕೈಜೋಡಿಸಿರುವ ಗೂಗಲ್, ವಿಶಿಷ್ಟ ಕಸ್ಟಮೈಸ್ಡ್ ಆಯನಿಮೆಟೇಡ್ ಡೂಡಲ್ ಮೂಲಕ ಗಮನ ಸೆಳೆದಿದೆ. ಗೂಗಲ್ ಹೊಸ ವರ್ಷವನ್ನು ರೋಮಾಂಚಕ ಡೂಡಲ್‌ನೊಂದಿಗೆ ಆಚರಿಸಿದೆ.

Advertisement

ಮಿನುಗುವ ಡಿಸ್ಕೊ ಚೆಂಡುಗಳು, ಬಣ್ಣ ಬಣ್ಣದ ಅಂಶಗಳು ಸಂಭ್ರಮವನ್ನು ಬಿಂಬಿಸಿವೆ. '3... 2... 1... ಹೊಸ ವರ್ಷದ ಶುಭಾಶಯಗಳು!' ಎಂದು ಗೂಗಲ್ ಶುಭ ಕೋರಿದೆ.

ಈ ಡೂಡಲ್ ಹೊಸ ವರ್ಷವನ್ನು ಪ್ರಾರಂಭಿಸಲು ಹೊಸ ಹುರುರಪನ್ನು ನೀಡುತ್ತದೆ! ಮಧ್ಯರಾತ್ರಿಯಿಂದ ಪ್ರಪಂಚದಾದ್ಯಂತದ ಜನರು ತಮ್ಮ ಹೊಸ ವರ್ಷದ ಸಂಕಲ್ಪ ಮತ್ತು ಯಶಸ್ಸು, ಪ್ರೀತಿ, ಸಂತೋಷ ಎಲ್ಲದಕ್ಕಾಗಿ ಶುಭ ಕೋರಲು ಪ್ರಾರಂಭಿಸಿದ್ದಾರೆ ಎಂದು ಬರೆಯಲಾಗಿದೆ.

Advertisement

ಭಾರತದಾದ್ಯಂತ ಮಹಾ ನಗರಗಳು ಹೊಸ ವರ್ಷವನ್ನು ಅದ್ದೂರಿಯಾಗಿ ಸಂಭ್ರಮದಿಂದ ಸ್ವಾಗತಿಸಿದವು. ಗೋವಾದಲ್ಲಿ ಪಟಾಕಿಗಳ ಭವ್ಯವಾದ ಪ್ರದರ್ಶನದೊಂದಿಗೆ ಬೆರಗುಗೊಳಿಸುವಂತಹ ಸಂಭ್ರಮ ನಡೆಯಿತು. ಮುಂಬೈನ ಗೇಟ್‌ವೇ ಆಫ್ ಇಂಡಿಯಾ ಬಳಿ ಸೇರಿದ್ದ ಜನರು ಸಂಭ್ರಮದಿಂದ ಹೊಸ ವರ್ಷವನ್ನು ಸ್ವಾಗತಿಸಿದರು.

https://doodles.google/doodle/new-years-eve-2023/

Advertisement
Tags :
indiaLatestNewsNewsKannadaಗೂಗಲ್ಡೂಡಲ್‌ನವದೆಹಲಿಹೊಸ ವರ್ಷ
Advertisement
Next Article