ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕಾಂತಾರ-1 ಟೀಸರ್ ನೋಡಿ ವಾ...ವ್... ಎಂದು ಪೋಸ್ಟ್ ಮಾಡಿದ ಗೂಗಲ್

ಕಳೆದೊಂದು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಭಾರತ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾದ ಫಸ್ಟ್ ಲುಕ್ ಟೀಸರ್ ಸಖತ್‌ ವೈರಲ್‌ ಆಗಿದ್ದು, ಟ್ರೆಂಡಿಂಗ್ ಸೃಷ್ಟಿಸಿದೆ.
04:40 PM Nov 28, 2023 IST | Ashitha S

ಕಳೆದೊಂದು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಭಾರತ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾದ ಫಸ್ಟ್ ಲುಕ್ ಟೀಸರ್ ಸಖತ್‌ ವೈರಲ್‌ ಆಗಿದ್ದು, ಟ್ರೆಂಡಿಂಗ್ ಸೃಷ್ಟಿಸಿದೆ.

Advertisement

ಯುಟ್ಯೂಟ್‌ನಲ್ಲೂ ಈ ಸಿನಿಮಾದ ಟೀಸರ್ ಹವಾ ಜೋರಾಗಿದ್ದು, ಕೇವಲ 24 ಗಂಟೆಗಲಲ್ಲಿ 13 ಮಿಲಿಯನ್‌ ಗೂ ಅಧಿಕ ವೀಕ್ಷಣೆ ಕಂಡಿದೆ. ಇನ್ನು ಗೂಗಲ್‌ನಲ್ಲಿ ಕಾಂತಾರ 1 ಸಿನಿಮಾ ಬಿಡುಗಡೆ ದಿನಾಂಕವನ್ನು 77 ಲಕ್ಷಕ್ಕೂ ಅಧಿಕ ಜನರು ಹುಡುಕಾಡಿದ್ದಾರೆ. ಇನ್ನು ಕಾಂತಾರ 1 ಸಿನಿಮಾದ ಟೀಸರ್ ವೀಕ್ಷಣೆ ಮಾಡಿದ ಗೂಗಲ್ '2024 got more exciting. saw the ಕಾಂತಾರ teaser, and just want to say wooooooaaaah' (2024 ಹೆಚ್ಚು ರೋಮಾಂಚನಕಾರಿಯಾಗಿದೆ. ಕಾಂತಾರ ಟೀಸರ್ ನೋಡಿದೆ, ಮತ್ತು ಕೇವಲ ವಾ....ವ್ ಎಂದು ಹೇಳಲು ಬಯಸುತ್ತೇನೆ) ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದೆ.

ಕಾಂತಾರ ಚಾಪ್ಟರ್ 1 ಫಸ್ಟ್‌ ಲುಕ್ ರಿವೀಲ್ ಆಗಿರುವ ವಿಡಿಯೋದ ಆರಂಭದಲ್ಲಿ ರಿಷಬ್ ಶೆಟ್ಟಿ ಬೆಳಕು ಹಿಡಿದು ಕಾಡಿನೊಳಗೆ ಓಡಿ ಹೋಗುತ್ತಾರೆ. ಬಳಿಕ ದಟ್ಟ ಗುಹೆಯಲ್ಲಿ ರುದ್ರಾಕ್ಷಿ ಮಾಲೆ ಧರಿಸಿ ಉಗ್ರ ಅವತಾರದಲ್ಲಿ ನಿಂತಿರುವ ರಿಷಬ್‌ನ ಈ ಫಸ್ಟ್‌ ಲುಕ್‌ನಲ್ಲಿ ನೋಡಬಹುದು. ಮೈ ತುಂಬಾ ರಕ್ತದ ಕಲೆಯನ್ನು ನೋಡಬಹುದು. ಮತ್ತೊಂದು ಅಶ್ಚರ್ಯ ಏನೆಂದರೆ ರಿಷಬ್ ಮುಖ ರಿವೀಲ್ ಆಗುವ ಸಮಯದಲ್ಲಿ ಅವರ ಹಿಂದೆ ಶಿವನ ತ್ರಿಶೂಲ ಕಾಣಿಸುತ್ತದೆ.

Advertisement

ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ಕೆರಾಡಿಯ ಆನೆಗುಡ್ಡೆ ದೇವಸ್ಥಾನದಲ್ಲಿ ಮುಹೂರ್ತ ಅದ್ಧೂರಿಯಾಗಿ ನಡೆದಿದೆ.

Read More:  https:
1. https://newskannada.com/entertainment/rishab-shetty-kantara-02-poster-release/27112023

2. https://newskannada.com/gandhi-nagar/sandalwood/kantara-chapter-1-movie-first-poster-will-be-released-today/27112023

 

Advertisement
Tags :
indiaLatestNewsNewsKannadaಕಾಂತಾರ ಚಾಪ್ಟರ್ 1ಗೂಗಲ್ಟೀಸರ್‌ನವದೆಹಲಿಬೆಂಗಳೂರು
Advertisement
Next Article