For the best experience, open
https://m.newskannada.com
on your mobile browser.
Advertisement

ಗೂಗಲ್ ಪೇ ಕಸ್ಟಮರ್ ಕೇರ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಸಾವಿರಾರು ರೂ. ವಂಚನೆ

ಗೂಗಲ್ ಪೇ ಕಸ್ಟಮರ್ ಕೇರ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಸಾವಿರಾರು ರೂ. ವಂಚಿಸಿರುವ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
05:03 PM Mar 19, 2024 IST | Nisarga K
ಗೂಗಲ್ ಪೇ ಕಸ್ಟಮರ್ ಕೇರ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಸಾವಿರಾರು ರೂ  ವಂಚನೆ
ಗೂಗಲ್ ಪೇ ಕಸ್ಟಮರ್ ಕೇರ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಸಾವಿರಾರು ರೂ. ವಂಚನೆ

ಉಡುಪಿ: ಗೂಗಲ್ ಪೇ ಕಸ್ಟಮರ್ ಕೇರ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಸಾವಿರಾರು ರೂ. ವಂಚಿಸಿರುವ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಕುಮಾರ್ ಎಂಬವರು ಮಾರ್ಚ್ 14ರಂದು ತನ್ನ ವ್ಯವಹಾರದ 6000ರೂ. ಹಣವನ್ನು ಗೂಗಲ್ ಪೇನಲ್ಲಿ ಕೈತಪ್ಪಿನಿಂದ ಬೇರೊಂದು ನಂಬರಿಗೆ ಕಳುಹಿಸಿದ್ದು, ಈ ಸಂಬಂಧ ಗೂಗಲ್‌ನಲ್ಲಿ ಸಿಕ್ಕಿದ ಕಸ್ಟಮರ್ ಕೇರ್‌ಗೆ ಕರೆ ಮಾಡಿದ್ದರು. ಹಣವನ್ನು ಹಿಂದಕ್ಕೆ ಪಡೆಯಲು 5 ಡಿಜಿಟ್‌ಗಳ ಸಂಖ್ಯೆಗಳ ಆ್ಯಪ್‌ನಲ್ಲಿ ನಮೂದಿಸುವಂತೆ ತಿಳಿಸಿದ್ದರು. ಅದರಂತೆ ನಂಬರ್ ನಮೂದಿಸಿದ ಬಳಿಕ ಇವರ ಖಾತೆಯಿಂದ 75,040ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.

Advertisement
Advertisement
Tags :
Advertisement