For the best experience, open
https://m.newskannada.com
on your mobile browser.
Advertisement

ಗುಡ್‌ ನ್ಯೂಸ್:‌ ಶುಗರ್‌, ಹೃದ್ರೋಗ ಸೇರಿ 41 ಔಷಧಿಗಳ ಬೆಲೆ ಕಡಿತ

ಕೇಂದ್ರ ಸರ್ಕಾರವು 41 ಅಗತ್ಯ ಔಷಧಗಳು ಹಾಗೂ ಹೃದಯ ರಕ್ತನಾಳದ ಕಾಯಿಲೆ, ಸಕ್ಕರೆ ಕಾಯಿಲೆ ಇರುವವರು ಬಳಸುವ 6 ಫಾರ್ಮುಲೇಷನ್‌ಗಳ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಸಿದೆ.
06:37 AM May 17, 2024 IST | Ashitha S
ಗುಡ್‌ ನ್ಯೂಸ್ ‌ ಶುಗರ್‌  ಹೃದ್ರೋಗ ಸೇರಿ 41 ಔಷಧಿಗಳ ಬೆಲೆ ಕಡಿತ

ನವದೆಹಲಿ: ಕೇಂದ್ರ ಸರ್ಕಾರವು 41 ಅಗತ್ಯ ಔಷಧಗಳು ಹಾಗೂ ಹೃದಯ ರಕ್ತನಾಳದ ಕಾಯಿಲೆ, ಸಕ್ಕರೆ ಕಾಯಿಲೆ ಇರುವವರು ಬಳಸುವ 6 ಫಾರ್ಮುಲೇಷನ್‌ಗಳ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಸಿದೆ.

Advertisement

ಹೃದ್ರೋಗ , ಮಧುಮೇಹ, ಮೈಕೈ ನೋವು, ಹೃದಯರಕ್ತನಾಳದ ಕಾಯಿಲೆಗಳು, ಯಕೃತ್ತಿನ ಸಮಸ್ಯೆಗಳು, ಆಂಟಾಸಿಡ್‌ಗಳು, ಸೋಂಕುಗಳು, ಅಲರ್ಜಿಗಳು, ಮಲ್ಟಿವಿಟಮಿನ್‌ಗಳು ಮತ್ತು ಆಂಟಿಬಯೋಟಿಕ್‌ಗಳಿಗೆ ಮೀಸಲಾದ ಔಷಧಿಗಳ ಬೆಲೆಗಳನ್ನು ಔಷಧೀಯ ಮತ್ತು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರದ ಅಧಿಸೂಚನೆಯ ಪ್ರಕಾರ ಕಡಿತಗೊಳಿಸಿ ಆದೇಶ ಹೊರಡಿಸಿದೆ.

ರಕ್ತದ ಗ್ಲುಕೋಸ್‌ ಕಡಿಮೆಯಾದಾಗ ಬಳಿಸುವ Dapagliflozin Metformin Hydrochlorideಗೆ ಮೊದಲು 30 ರೂ. ಇತ್ತು. ಈಗ ಅದಕ್ಕೆ 16 ರೂ. ನಿಗದಿಪಡಿಸಲಾಗಿದೆ. ಅಸ್ತಮಾ ಹಾಗೂ ಶ್ವಾಸಕೋಶದ ಸಮಸ್ಯೆ ಇದ್ದವರು ತೆಗೆದುಕೊಳ್ಳವ ಬ್ಯೂಡ್‌ಸೊನೈಡ್‌ ಹಾಗೂ ಫಾರ್ಮೊಟೆರೋಲ್‌ನ ಒಂದು ಡೋಸ್‌ ಬೆಲೆಯನ್ನು 6.62 ರೂ.ಗೆ ಇಳಿಕೆ ಮಾಡಲಾಗಿದೆ.

Advertisement

Advertisement
Tags :
Advertisement