For the best experience, open
https://m.newskannada.com
on your mobile browser.
Advertisement

ಸಿಬ್ಬಂದಿಗೆ ಸಂಬಳ ನೀಡಲು ಸರ್ಕಾರದ ಬಳಿ ಹಣದ ಕೊರತೆ ಇಲ್ಲ: ದಿನೇಶ್ ಗುಂಡೂರಾವ್

ಧರಣಿ ನಿರತ 108 ಆ್ಯಂಬುಲೆನ್ಸ್​ ಚಾಲಕರಿಗೆ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದು, ಚುನಾವಣಾ ನೀತಿ ಸಂಹಿತೆ ಇರುವುದರಿಂದ ಮುಷ್ಕರ ಕೈಬಿಡಿ. ಒಂದು ವೇಳೆ ಮುಷ್ಕರ ಕೈಬಿಡಿದಿದ್ದರೆ ನಾವು ಪರ್ಯಾಯ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಹೇಳಿದ್ದಾರೆ.
08:06 PM May 06, 2024 IST | Ashika S
ಸಿಬ್ಬಂದಿಗೆ ಸಂಬಳ ನೀಡಲು ಸರ್ಕಾರದ ಬಳಿ ಹಣದ ಕೊರತೆ ಇಲ್ಲ  ದಿನೇಶ್ ಗುಂಡೂರಾವ್

ಬೆಂಗಳೂರು: ಧರಣಿ ನಿರತ 108 ಆ್ಯಂಬುಲೆನ್ಸ್​ ಚಾಲಕರಿಗೆ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದು, ಚುನಾವಣಾ ನೀತಿ ಸಂಹಿತೆ ಇರುವುದರಿಂದ ಮುಷ್ಕರ ಕೈಬಿಡಿ. ಒಂದು ವೇಳೆ ಮುಷ್ಕರ ಕೈಬಿಡಿದಿದ್ದರೆ ನಾವು ಪರ್ಯಾಯ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಹೇಳಿದ್ದಾರೆ.

Advertisement

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಬ್ಬಂದಿಗೆ ಸಂಬಳ ನೀಡಲು ಸರ್ಕಾರದ ಬಳಿ ಹಣದ ಕೊರತೆ ಇಲ್ಲ. 108 ಆ್ಯಂಬುಲೆನ್ಸ್​ ಚಾಲಕರಿಗೆ ಪೂರ್ತಿ ಹಣ ನೀಡಿದ್ದೇವೆ. ವೇತನ ನೀಡುವಲ್ಲಿ ಸಣ್ಣ ಸಮಸ್ಯೆಯಾಗಿತ್ತು ಆದರೆ ಸಂಬಳ ಕೊರತೆ ಮಾಡಿಲ್ಲ.

ಇದು ಚುನಾವಣೆ ಸಮಯ, ಈಗ ಯಾವುದೇ ಬದಲಾವಣೆ ಮಾಡುವುದಕ್ಕೆ ಆಗೋದಿಲ್ಲ. ನಮ್ಮ ಬಳಿ ಬೇರೆ ಚಾಲಕರಿದ್ದಾರೆ, ಅವರನ್ನು ಸೇವೆಗೆ ಬಳಸಿಕೊಳುತ್ತೇವೆ ಎಂದು ಹೇಳಿದ್ದು, ಅಶೋಕ್​ ಅವರೇ ನಿಮ್ಮ ಸರ್ಕಾರದ ಅವಧಿಯಲ್ಲೇ ಲೋಪವಾಗಿತ್ತು ಎಂದು ವಾಗ್ದಾಳಿ ಮಾಡಿದ್ದಾರೆ.

Advertisement

ರಾತ್ರಿಯಿಂದಲೇ ಕೆಲಸಕ್ಕೆ ಹಾಜರಾಗದಿರಲು ನಿರ್ಧರಿಸಿದ್ದು, ಈಗಾಗಲೇ ಆರೋಗ್ಯ ಇಲಾಖೆ ಎಸ್ಮಾ ಜಾರಿ ಮಾಡಿದೆ. ಎಸ್ಮಾ ಹಿನ್ನೆಲೆ ಇಲಾಖೆ ನಡೆ ನೋಡಿ ಚಾಲಕರು ತೀರ್ಮಾನ ಮಾಡಲಿದ್ದಾರೆ. ನಾಳೆಯಿಂದ 108 ಆ್ಯಂಬುಲೆನ್ಸ್​​​ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ ಇದೆ.

Advertisement
Tags :
Advertisement