ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರಾಜ್ಯ ಸರ್ಕಾರಿ ಯೋಜನೆಗಳ ಮಾಹಿತಿ ಅರಿಯಲು ಇನ್‌ ಸ್ಟಾ ಪೇಜ್‌ ಓಪನ್‌ ಮಾಡಿದ ಸರ್ಕಾರ

ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ತಿಳಿಯಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ ಡಿಜಿಟಲ್ ವೇದಿಕೆಯಲ್ಲಿ ಅವಕಾಶ ಮಾಡಿಕೊಟ್ಟಿದೆ.
01:31 PM Dec 24, 2023 IST | Ashika S

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ತಿಳಿಯಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ ಡಿಜಿಟಲ್ ವೇದಿಕೆಯಲ್ಲಿ ಅವಕಾಶ ಮಾಡಿಕೊಟ್ಟಿದೆ.

Advertisement

ನಮ್ಮ ಸರ್ಕಾರದ ಎಲ್ಲಾ ಇಲಾಖೆಗಳ ಜನಪರ ಯೋಜನೆಗಳು, ಸಾಧನೆಗಳು, ಫಲಾನುಭವಿಗಳು ಅನುಸರಿಸಬೇಕಿರುವ ಪ್ರಕ್ರಿಯೆಗಳು, ಸಾರ್ವಜನಿಕ ಜಾಗೃತಿಗಳನ್ನು ಒಳಗೊಂಡ ಸಂಪೂರ್ಣ ಮಾಹಿತಿಯನ್ನು 'ಕರ್ನಾಟಕ ವಾರ್ತೆ'ಯ ಅಧಿಕೃತ ಮೂಲಗಳಿಂದ ನೀವು ತಿಳಿಯಬಹದು ಎಂದು ಸಿಎಂ ಆಪ್ ಕರ್ನಾಟಕ ಟಿಟ್ಟರ್ X ಖಾತೆಯಲ್ಲಿ ಮಾಹಿತಿ ಮತ್ತು ಲಿಂಕ್‌ಗಳನ್ನು ಹಂಚಿಕೊಳ್ಳಲಾಗಿದೆ.

ಸರ್ಕಾರದಿಂದ ವಾಟ್ಸಪ್ ಚಾನಲ್, ಇನ್‌ಸ್ಟಾ ಪೇಜ್ ಕಾಂಗ್ರೆಸ್ ಸರ್ಕಾರದ ಎಲ್ಲ ಇಲಾಖೆಗಳ ಯೋಜನೆ, ಪ್ರಕ್ರಿಯೆ ಮುಂತಾದ ಅಂಶಗಳನ್ನು ತಿಳಿಯಲು ಇಲಾಖೆಗಳ ವ್ಯಾಪ್ತಿಯಲ್ಲಿ ವಾಟ್ಸಾಪ್ ಚಾನೆಲ್‌ ಹಾಗೂ ಇನ್ಸ್‌ಟಾಗ್ರಾಮ್ ಪೇಜ್‌ಗಳ ಮೂಲಕ ನಿಯಮಿತವಾಗಿ ತಲುಪಿಸುತ್ತೇವೆ. ನಮ್ಮ ಸರ್ಕಾರದೊಂದಿಗೆ ನೇರ ಸಂಪರ್ಕ ಸಾಧಿಸಲು ಈಗಲೇ ಈ ಕೆಳಗಿನ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ, ಫಾಲೋ ಮಾಡಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕರನ್ನು ಆಹ್ವಾನಿಸಿದ್ದಾರೆ.

Advertisement

''ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಯುವನಿಧಿ, ಶಕ್ತಿಯೋಜನೆ, ಅನ್ನಭಾಗ್ಯ ಯೋಜನೆಗಳ'' ಮಾತ್ರವಲ್ಲೇ ನೀವು ಈ ಕೆಳಗಿನ ಲಿಂಕ್ ಮೂಲಕ ಸರ್ಕಾರ ಮಟ್ಟದಲ್ಲಿನ ''ಉದ್ಯೋಗ ನೇಮಕಾತಿ, ಆರೋಗ್ಯ ಅಭಿಯಾನ, ಯೊಜನೆ ಲಾಭ ಪಡೆಯಲು ಅರ್ಜಿ ಸಲ್ಲಿಕೆಗಳು, ಪ್ರಕ್ರಿಯೆ, ಸರ್ಕಾರ ಸಾಧನೆ, ಜಾಗೃತಿ ಅಭಿಯಾನ, ಇನ್ನಿತರ ಯೋಜನೆಗಳ ಕುರಿತು ಮೊಬೈಲ್‌ನಲ್ಲಿಯೇ ತಿಳಿದುಕೊಳ್ಳಬಹುದು.

ಈ ಸಂಬಂಧ 'ಕರ್ನಾಟಕ ನವ ನಿರ್ಮಾಣಕ್ಕೆ ಗ್ಯಾರೆಂಟಿ ಸರ್ಕಾರ' ಘೋಷವಾಕ್ಯದಡಿ ಮೇಲಿನ ಎಲ್ಲ ಇಲಾಖೆಗಳ ಮಾಹಿತಿ ತಿಳಿಯಲು ನೀವು ಕರ್ನಾಟಕ ವಾರ್ತಾ ಚಾನಲ್ ವಾಟ್ಸಪ್ https://whatsapp.com/channel/0029VaCGAbD0gcfO1BkYQo26 ಗೆ ಹಾಗೂ ಕರ್ನಾಟಕ ವಾರ್ತೆ ಇನ್‌ಸ್ಟಾಗ್ರಾಮ್ ಪೇಜ್‌ https://www.instagram.com/karnatakavarthe/ ಫಾಲೋ ಮಾಡುವ ಮೂಲಕ ನೀವು ಸರ್ಕಾರ ಯೋಜನೆಗಳನ್ನು ತಿಳಿಯಬಹುದಾಗಿದೆ. ಲಿಂಕ್ ಸಿಗದಿದ್ದರೆ x ಫೋಟೊದಲ್ಲಿರುವ ಕ್ಯೂಆರ್ ಕೋಡ್ ಸಹ ಸ್ಕ್ಯಾನ್ ಮಾಡಬಹುದು.

Advertisement
Tags :
LatestNewsNewsKannada
Advertisement
Next Article