ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕೋವಿಡ್ ತಪಾಸಣೆ ತೀವ್ರಗೊಳಿಸಲು ಸರ್ಕಾರ ನಿರ್ಧಾರ

ರಾಜ್ಯದಲ್ಲಿ ಕೊರೊನಾ  ಭೀತಿ ಮತ್ತೆ ಆವರಿಸಿದ್ದು, ಇದರ ಬೆನ್ನಲ್ಲೇ ಕೋವಿಡ್ ತಪಾಸಣೆ ತೀವ್ರಗೊಳಿಸಲು ಸರ್ಕಾರ ನಿರ್ಧರಿಸಿದೆ.
07:04 AM Dec 20, 2023 IST | Ashika S

ಬೆಂಗಳೂರು: ರಾಜ್ಯದಲ್ಲಿ ಕೊರೊನಾ  ಭೀತಿ ಮತ್ತೆ ಆವರಿಸಿದ್ದು, ಇದರ ಬೆನ್ನಲ್ಲೇ ಕೋವಿಡ್ ತಪಾಸಣೆ ತೀವ್ರಗೊಳಿಸಲು ಸರ್ಕಾರ ನಿರ್ಧರಿಸಿದೆ.

Advertisement

ಇದರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕೊರೊನಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ. ಕೋವಿಡ್ -19 ವೈರಸ್ ಹರಡದಂತೆ ತಡೆಗಟ್ಟಲು ನಮ್ಮ ಸರ್ಕಾರವು ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿದೆ. ನಮ್ಮ ಪ್ರಯತ್ನ ಫಲನೀಡಬೇಕಾದರೆ ಸಾರ್ವಜನಿಕರ ಸಹಕಾರವೂ ಅತಿ ಮುಖ್ಯ ಎಂದಿದ್ದಾರೆ.

ವಿಕಾಸ ಸೌಧದಲ್ಲಿ ನಡೆದ ತಾಂತ್ರಿಕ ಸಲಹಾ ಸಮಿತಿ ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಡಿಸೆಂಬರ್‌ 23ರಿಂದ ರಾಜ್ಯದಲ್ಲಿ ಪ್ರತಿನಿತ್ಯ 5 ಸಾವಿರ ಪರೀಕ್ಷೆ ನಡೆಸಲಾಗುತ್ತದೆ. ಆಕ್ಸಿಜನ್‌, ವೆಂಟಿಲೇಟರ್‌, ಐಸಿಯು ಬೆಡ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಬೇಕು. ಜಿಲ್ಲಾ ಆರೋಗ್ಯ ಅಧಿಕಾರಿಗಳ ಜತೆ ವರ್ಚುವಲ್‌ ಸಭೆ ನಡೆಸಿ ಕೋವಿಡ್‌ ಕುರಿತು ನಿಗಾ ಇಡುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Advertisement

ಶನಿವಾರದಿಂದ ಯಾರಿಗೆಲ್ಲ ಕೋವಿಡ್ ಪರೀಕ್ಷೆ?: ಶೀತ, ಜ್ವರ, ಕೆಮ್ಮು ಸೇರಿ ಕೊರೊನಾ ಲಕ್ಷಣ ಇದ್ದವರು, ತೀವ್ರ ಉಸಿರಾಟ ಸಮಸ್ಯೆ ಹೊಂದಿರುವವರು, ಬೇರೆ ದೇಶಗಳಿಂದ ಬಂದ ಸೋಂಕು ಲಕ್ಷಣ ಇದ್ದವರು, ಕೇರಳದಿಂದ ಬಂದ ಸೋಂಕು ಲಕ್ಷಣ ಇದ್ದವರು, ಹೃದ್ರೋಗ, ವಯೋಸಹಜ ಕಾಯಿಲೆ ಇರುವವರು, ವಿಷಮ ಶೀತ ಜ್ವರ ಲಕ್ಷಣ ಹೊಂದಿರುವವರು, ದೀರ್ಘಕಾಲದ ಅನಾರೋಗ್ಯ ಸಮಸ್ಯೆ ಇರುವವರಿಗೆ ಶನಿವಾರದಿಂದ ಕೋವಿಡ್ ಟೆಸ್ಟ್ ನಡೆಸಲಾಗುತ್ತದೆ.

Advertisement
Tags :
LatestNewsNewsKannadaಕೊರೊನಾಕೋವಿಡ್ತಪಾಸಣೆಭೀತಿಸರ್ಕಾರ
Advertisement
Next Article