For the best experience, open
https://m.newskannada.com
on your mobile browser.
Advertisement

ಗ್ರಾಮವನ್ನೇ ಮಾರಿದ ಗ್ರಾಮ ಪಂಚಾಯ್ತಿ ಪಿಡಿಒ ಅಮಾನತಿಗೆ ಆದೇಶ

ಚಿಕ್ಕಬಳ್ಳಾಪುರ: ಬಾರ್ಲಹಳ್ಳಿ ಗ್ರಾಮವನ್ನು ನಿವೇಶನಗಳನ್ನಾಗಿ ವಿಂಗಡಿಸಿ ಮಾರಾಟ ಮಾಡಿದ್ದ ಪ್ರಕರಣದಲ್ಲಿ ಗ್ರಾಮ ಪಂಚಾಯ್ತಿ ಪಿಡಿಒ ಎಂ.ಸಿ. ವೆಂಕಟೇಶ ಅವರನ್ನು ಅಮಾನತು ಮಾಡಿ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಸಿಇಒ ಪ್ರಕಾಶ ಜೆ. ನಿಟ್ಟಾಲಿ ಆದೇಶ ಹೊರಡಿಸಿದ್ದಾರೆ.
05:47 PM Nov 21, 2023 IST | Ashitha S
ಗ್ರಾಮವನ್ನೇ ಮಾರಿದ ಗ್ರಾಮ ಪಂಚಾಯ್ತಿ ಪಿಡಿಒ ಅಮಾನತಿಗೆ ಆದೇಶ

ಚಿಕ್ಕಬಳ್ಳಾಪುರ: ಬಾರ್ಲಹಳ್ಳಿ ಗ್ರಾಮವನ್ನು ನಿವೇಶನಗಳನ್ನಾಗಿ ವಿಂಗಡಿಸಿ ಮಾರಾಟ ಮಾಡಿದ್ದ ಪ್ರಕರಣದಲ್ಲಿ ಗ್ರಾಮ ಪಂಚಾಯ್ತಿ ಪಿಡಿಒ ಎಂ.ಸಿ. ವೆಂಕಟೇಶ ಅವರನ್ನು ಅಮಾನತು ಮಾಡಿ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಸಿಇಒ ಪ್ರಕಾಶ ಜೆ. ನಿಟ್ಟಾಲಿ ಆದೇಶ ಹೊರಡಿಸಿದ್ದಾರೆ.

Advertisement

ಅಮಾನತುಗೊಂಡ ಅಧಿಕಾರಿ ಎಂ.ಸಿ. ವೆಂಕಟೇಶ ಅವಲಗುರ್ಕಿ ಗ್ರಾಮ ಪಂಚಾಯತಿ ಪಿ.ಡಿ.ಓ. ಆಗಿದ್ದರು. ಅವಲಗುರ್ಕಿ ಪಿಡಿಒ ಆಗಿದ್ದಾಗ ಬಾರ್ಲಹಳ್ಳಿ ಗ್ರಾಮವನ್ನೆ ಇವರು ಮಾರಾಟ ಮಾಡಿದ್ದರು.

ಗ್ರಾಮ ಪಂಚಾಯತಿ ಜನಪ್ರತಿನಿದಿಗಳ ಜೊತೆ ಶಾಮೀಲು ಆಗಿ ಅಕ್ರಮ ಕೆಲಸ ಎಸಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಇಒ ಪ್ರಕಾಶ ಜೆ. ನಿಟ್ಟಾಲಿ ತಿಳಿಸಿದ್ದಾರೆ.

Advertisement

Advertisement
Tags :
Advertisement