For the best experience, open
https://m.newskannada.com
on your mobile browser.
Advertisement

ಗುಡಿಬಂಡೆ: ಲಾರಿ ಡಿಕ್ಕಿಯಾಗಿ ಇಬ್ಬರು ದುರಂತ ಅಂತ್ಯ

ಗುಡಿಬಂಡೆಯಲ್ಲಿ ಘೋರ ಅಪಘಾತವೊಂದು ನಡೆದುಹೋಗಿದೆ.
03:12 PM Dec 13, 2023 IST | Ramya Bolantoor
ಗುಡಿಬಂಡೆ  ಲಾರಿ ಡಿಕ್ಕಿಯಾಗಿ ಇಬ್ಬರು ದುರಂತ ಅಂತ್ಯ

ಗುಡಿಬಂಡೆ: ಗುಡಿಬಂಡೆಯಲ್ಲಿ ಘೋರ ಅಪಘಾತವೊಂದು ನಡೆದುಹೋಗಿದೆ. ಪಟ್ಟಣದ ಕಣಿವೆಯಲ್ಲಿ ಲಾರಿ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿ. 13ರ ಬುಧವಾರ ನಡೆದಿದೆ.

Advertisement

ಗುಡಿಬಂಡೆ ಪಟ್ಟಣದ ಕಡೆಯಿಂದ ಗೌರೀಬಿದನೂರು ಹೋಗುತ್ತಿದ್ದ ಲಾರಿ ಕಣಿವೆಯ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡಿದಿದ್ದು, ನಂತರ ಹಸು ಮೇಯಿಸುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದೆ. ಘಟನೆ ಪರಿಣಾಮ ಹಸು ಮೇಯಿಸುತ್ತಿದ್ದ ಮಹಿಳೆ ತುಳಸಿ ಬಾಯಿ ಸ್ಥಳದಲ್ಲೇ ಮೃತಪಟ್ಟು, ದ್ವಿಚಕ್ರ ವಾಹನ ಸವಾರ ನಂದೀಶ್ ನಾಯ್ಕ ಗುಡಿಬಂಡೆ ಸಾರ್ವಜನಿಕ ಅಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

Advertisement
Advertisement
Tags :
Advertisement