For the best experience, open
https://m.newskannada.com
on your mobile browser.
Advertisement

ತುಮಕೂರು: ಮಚ್ಚಿನಿಂದ ಕೊಚ್ಚಿ ಅತಿಥಿ ಶಿಕ್ಷಕನ ಕೊಲೆ

ಅತಿಥಿ ಶಿಕ್ಷಕರೊಬ್ಬರನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಭೀಕರ ಘಟನೆ ಕುಣಿಗಲ್ ತಾಲೂಕಿನ  ಕುಳ್ಳನಂಜಯ್ಯನಪಾಳ್ಯದಲ್ಲಿ ನಡೆದಿದೆ.
10:17 AM Feb 10, 2024 IST | Ashika S
ತುಮಕೂರು  ಮಚ್ಚಿನಿಂದ ಕೊಚ್ಚಿ ಅತಿಥಿ ಶಿಕ್ಷಕನ ಕೊಲೆ

ತುಮಕೂರು: ಅತಿಥಿ ಶಿಕ್ಷಕರೊಬ್ಬರನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಭೀಕರ ಘಟನೆ ಕುಣಿಗಲ್ ತಾಲೂಕಿನ  ಕುಳ್ಳನಂಜಯ್ಯನಪಾಳ್ಯದಲ್ಲಿ ನಡೆದಿದೆ.

Advertisement

ಮೋದೂರು ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿದ್ದ ಮರಿಯಪ್ಪ (47) ಅವರೇ ಕೊಲೆಯಾದವರು. ಮೋದೂರು ಶಾಲೆಯಲ್ಲಿ ಶಿಕ್ಷಕರಾಗಿದ್ದು ಜನಾನುರಾಗಿಯಾಗಿದ್ದ ಮರಿಯಪ್ಪ.

ಅವರ ಶವ ಕುಳ್ಳನಂಜಯ್ಯನ ಪಾಳ್ಯದ ಜಮೀನೊಂದರಲ್ಲಿ ಶನಿವಾರ ಮುಂಜಾನೆ ಪತ್ತೆಯಾಗಿದ್ದು,  ಅವರ ತಲೆ ಮತ್ತು ಭುಜದ ಭಾಗಕ್ಕೆ ಮಚ್ಚಿನಿಂದ ಕಡಿಯಲಾಗಿದೆ. ಹಲವಾರು ಬಾರಿ ತಲೆಯನ್ನು ಕೊಚ್ಚಿದಂತೆ ಕಾಣುತ್ತಿದೆ.

Advertisement

ದುಷ್ಕರ್ಮಿಗಳು ಅವರನ್ನು ಜಮೀನಿನ ಮಧ್ಯ ಭಾಗದಲ್ಲಿ ಕೊಲೆ ಮಾಡಿ ಎಸೆದು ಹೋಗಿದ್ದಾರೆ.

ಸದ್ಯದ ಮಟ್ಟಿಗೆ ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಬೆಳಗ್ಗೆ ಶವ ಪತ್ತೆಯಾಗುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಶ್ವಾನದಳವನ್ನು ಕೂಡಾ ಕರೆಸಲಾಗಿದೆ. ಈ ಕೊಲೆ ಪ್ರಕರಣವನ್ನು ಬೇಧಿಸಲು ಸಾಧ್ಯವಿದೆ ಎಂಬ ನಂಬುಗೆಯನ್ನು ಜನರು ವ್ಯಕ್ತಪಡಿಸಿದ್ದಾರೆ.

Advertisement
Tags :
Advertisement