For the best experience, open
https://m.newskannada.com
on your mobile browser.
Advertisement

ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಗುಜರಾತ್​​​​ ಟೈಟನ್ಸ್ ಗೆ 35 ರನ್‌ಗಳ ಜಯ

ಅಹ್ಮದಾಬಾದಿನ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ವಿರುದ್ಧ ಗುಜರಾತ್​​​​ ಟೈಟನ್ಸ್​ ಬರೋಬ್ಬರಿ 35 ರನ್​​ಗಳಿಂದ ಗೆದ್ದು ಬೀಗಿದೆ.
07:37 AM May 11, 2024 IST | Ashika S
ಚೆನ್ನೈ ಸೂಪರ್​ ಕಿಂಗ್ಸ್​  ವಿರುದ್ಧ ಗುಜರಾತ್​​​​ ಟೈಟನ್ಸ್ ಗೆ 35 ರನ್‌ಗಳ ಜಯ

ಅಹಮದಾಬಾದ್‌: ಅಹ್ಮದಾಬಾದಿನ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ವಿರುದ್ಧ ಗುಜರಾತ್​​​​ ಟೈಟನ್ಸ್​ ಬರೋಬ್ಬರಿ 35 ರನ್​​ಗಳಿಂದ ಗೆದ್ದು ಬೀಗಿದೆ.

Advertisement

ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಗುಜರಾತ್​​ ಟೈಟನ್ಸ್ ನಿಗದಿತ ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 231 ರನ್‌ಗಳನ್ನು ಕಲೆ ಹಾಕಿತು.  232 ರನ್‌ಗಳ ಬೃಹತ್​  ಗುರಿ ಬೆನ್ನತ್ತಿದ ಚೆನ್ನೈ 20 ಓವರ್​ನಲ್ಲಿ 8 ವಿಕೆಟ್​ ನಷ್ಟಕ್ಕೆ 196 ರನ್​​ ಕಲೆ ಕಲೆ ಹಾಕಲು ಸಾಧ್ಯವಾಯಿತು.

ಗುಜರಾತ್​ ಪರ ಓಪನರ್ಸ್​ ಆಗಿ ಬಂದ ಸಾಯ್​ ಸುದರ್ಶನ್​ ಮತ್ತು ಕ್ಯಾಪ್ಟನ್​ ಶುಭ್ಮನ್​ ಗಿಲ್​​ ಭರ್ಜರಿ ಬ್ಯಾಟಿಂಗ್​ ಮಾಡಿದರು. ಸಾಯ್​ ಸುದರ್ಶನ್​ ತಾನು ಎದುರಿಸಿದ 51 ಬಾಲ್​​ನಲ್ಲಿ 7 ಭರ್ಜರಿ ಸಿಕ್ಸರ್​​, 5 ಫೋರ್​ ಸಮೇತ 103 ರನ್​ ಸಿಡಿಸಿದ್ದಾರೆ. ಇವರಿಗೆ ಸಾಥ್​ ಕೊಟ್ಟ ಶುಭ್ಮನ್​ ಗಿಲ್​​ ಕೇವಲ 55 ಬಾಲ್​ನಲ್ಲಿ 6 ಭರ್ಜರಿ ಸಿಕ್ಸರ್​, 9 ಫೋರ್​ನೊಂದಿಗೆ 104 ರನ್​ ಚಚ್ಚಿದರು.

Advertisement

ಚೆನ್ನೈ ತಂಡದ ಮೊತ್ತ 10 ರನ್‌ ಇರುವಾಗಲೇ 3 ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಎದರಿಸಿತು. ತಂಡದ ಪರ ಡೆರಿಲ್ ಮಿಚೆಲ್ 34 ಎಸೆತಗಳಲ್ಲಿ 3 ಸಿಕ್ಸರ್‌, 7 ಬೌಂಡರಿ ನೆರವಿನಿಂದ 63 ರನ್‌ ಕಲೆ ಹಾಕಿದರು. ಮೊಯಿನ್ ಅಲಿ 36 ಎಸೆತಗಳಲ್ಲಿ 4 ಸಿಕ್ಸರ್‌ 4 ಬೌಂಡರಿ ಸಿಡಿಸಿ 56 ರನ್‌ ಗಳಿಸಿದರು. ಶಿವಂ ದುಬೆ 13 ಎಸೆತಗಳಲ್ಲಿ 21, ಜಡೇಜಾ 10 ಎಸೆತಗಳಲ್ಲಿ 18 ರನ್‌ಗಳ ಕೊಡುಗೆ ನೀಡಿದರು. ಧೋನಿ 11 ಎಸೆತಗಳಲ್ಲಿ 3 ಸಿಕ್ಸರ್‌, 1 ಬೌಂಡರಿ ನೆರವಿನಿಂದ 26 ರನ್‌ ಗಳಿಸಿದರು.

Advertisement
Tags :
Advertisement