ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

147 ರನ್​​ಗೆ ಆಲೌಟ್ ಆದ ಗುಜರಾತ್​ ಟೈಟನ್ಸ್​ : ಆರ್​ಸಿಬಿ ವೇಗಿಗಳ ದಾಖಲೆ ಪ್ರದರ್ಶನ

ಚಿನ್ನಸ್ವಾಮಿ​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ರೋಚಕ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್​ ತಂಡವನ್ನು ರಾಯಲ್​ ಚಾಲೆಂಜರ್ಸ್​ ಬೆಂಗಳೂರು 19.3 ಓವರ್​ಗಳಲ್ಲಿ 147 ರನ್​​ಗೆ ಆಲೌಟ್​ ಮಾಡಿದೆ.
11:02 PM May 04, 2024 IST | Ashika S

ಬೆಂಗಳೂರು: ಚಿನ್ನಸ್ವಾಮಿ​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ರೋಚಕ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್​ ತಂಡವನ್ನು ರಾಯಲ್​ ಚಾಲೆಂಜರ್ಸ್​ ಬೆಂಗಳೂರು 19.3 ಓವರ್​ಗಳಲ್ಲಿ 147 ರನ್​​ಗೆ ಆಲೌಟ್​ ಮಾಡಿದೆ.

Advertisement

ಇನ್ನು, ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಗುಜರಾತ್​ ಟೈಟನ್ಸ್​ ತಂಡವು ಆರ್​​ಸಿಬಿ ಬೌಲರ್​​ಗಳ ದಾಳಿಗೆ ತತ್ತರಿಸಿದೆ.

ಆರ್​​ಸಿಬಿ ಪರ ಸಿರಾಜ್​​, ಯಶ್​ ದಯಾಳ್​​, ವೈಶಾಕ್​​ ತಲಾ 2 ವಿಕೆಟ್​ ತೆಗೆದ್ರು. ಕ್ಯಾಮೆರಾನ್​ ಗ್ರೀನ್​ ಮತ್ತು ಕರಣ್​ ಶರ್ಮಾ ತಲಾ 1 ವಿಕೆಟ್​ ತೆಗೆದರು.

Advertisement

ಆರಂಭದಲ್ಲೇ ಬ್ಯಾಕ್​ ಟು ಬ್ಯಾಕ್​​ 3 ವಿಕೆಟ್​ ಕಳೆದುಕೊಂಡು ಗುಜರಾತ್​ ಟೈಟನ್ಸ್​​​ ಸಂಕಷ್ಟಕ್ಕೆ ಸಿಲುಕಿತ್ತು. ಸಾಹಾ 1, ಗಿಲ್​ 2, ಸಾಯ್​ ಸುದರ್ಶನ್​​ 6 ರನ್​ಗಳಿಗೆ ಔಟಾದ್ರು.

ಬಳಿಕ ಬಂದ ಶಾರುಖ್​ ಖಾನ್​​​ ಕ್ರೀಸ್​ನಲ್ಲೇ ನಿಂತು 1 ಸಿಕ್ಸರ್​​, 5 ಫೋರ್​ ಸಮೇತ 37 ರನ್​ ಸಿಡಿಸಿದ್ರು. ಡೇವಿಡ್​ ಮಿಲ್ಲರ್​ ಕೂಡ ಶಾರುಖ್​ಗೆ ಸಾಥ್​ ನೀಡಿದ್ದು, 20 ಬಾಲ್​ನಲ್ಲಿ 2 ಸಿಕ್ಸರ್​, 3 ಫೋರ್​ನೊಂದಿಗೆ 30 ರನ್​ ಪೇರಿಸಿದ್ರು.

ರಾಹುಲ್​ ತೆವಾಟಿಯಾ ಮತ್ತು ರಶೀದ್​ ಖಾನ್​ ಭರ್ಜರಿ ಆಟ ಆಡಿದ್ರು. ತೆವಾಟಿಯಾ 21 ಬಾಲ್​ನಲ್ಲಿ 1 ಸಿಕ್ಸರ್​​, 5 ಫೋರ್​ ಸಮೇತ 35 ರನ್​​, ರಶೀದ್​ ಖಾನ್​​ 1 ಸಿಕ್ಸ್​​, 2 ಫೋರ್​ನೊಂದಿಗೆ 18 ರನ್​ ಚಚ್ಚಿದ್ರು. ವಿಜಯ್​ ಶಂಕರ್​​ 10 ರನ್​ಗೆ ವಿಕೆಟ್​ ಒಪ್ಪಿಸಿದ್ರು.

Advertisement
Tags :
bowlerscricketGujarat TitansLatetsNewsNewsKarnatakaRCB
Advertisement
Next Article