ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಗುವನ್ನು ಆಮೇಲೆ ಪಡೆದರಾಯಿತೆಂದು ಯೋಚಿಸುತ್ತಿದ್ದೀರಾ?

ಮದುವೆಯಾದ ಮೇಲೂ ತಡವಾಗಿ ಮಕ್ಕಳನ್ನು ಪಡೆಯೋಣ ಎಂದು ಆಲೋಚಿಸುವ ಮಹಿಳೆಯರು ತಮ್ಮ  ತೀರ್ಮಾನಗಳಿಂದ ಹೊರ ಬಂದರೆ ಒಳಿತು. ಕಾರಣ ಬದಲಾದ ಕಾಲಘಟ್ಟದಲ್ಲಿ ಬದುಕಿನ ಕ್ರಮಗಳಲ್ಲಿಯೂ ಏರಿತಗಳು ಆಗುತ್ತಿದ್ದು, ಆರೋಗ್ಯದ ವಿಚಾರದಲ್ಲಿ ಬದಲಾವಣೆಗಳಾಗುತ್ತಿರುವುದರಿಂದ ತಡವಾಗಿ ವಿವಾಹವಾಗುವವರು ಮಗುವನ್ನು ಪಡೆಯುವ ನಿರ್ಧಾರವನ್ನು ಮುಂದಕ್ಕೆ ಹಾಕುವ ಆಲೋಚನೆಗಳಿಂದ ಹೊರಬಂದರೆ ಉತ್ತಮ.
01:14 PM Mar 16, 2024 IST | Ashika S

ಮದುವೆಯಾದ ಮೇಲೂ ತಡವಾಗಿ ಮಕ್ಕಳನ್ನು ಪಡೆಯೋಣ ಎಂದು ಆಲೋಚಿಸುವ ಮಹಿಳೆಯರು ತಮ್ಮ  ತೀರ್ಮಾನಗಳಿಂದ ಹೊರ ಬಂದರೆ ಒಳಿತು. ಕಾರಣ ಬದಲಾದ ಕಾಲಘಟ್ಟದಲ್ಲಿ ಬದುಕಿನ ಕ್ರಮಗಳಲ್ಲಿಯೂ ಏರಿತಗಳು ಆಗುತ್ತಿದ್ದು, ಆರೋಗ್ಯದ ವಿಚಾರದಲ್ಲಿ ಬದಲಾವಣೆಗಳಾಗುತ್ತಿರುವುದರಿಂದ ತಡವಾಗಿ ವಿವಾಹವಾಗುವವರು ಮಗುವನ್ನು ಪಡೆಯುವ ನಿರ್ಧಾರವನ್ನು ಮುಂದಕ್ಕೆ ಹಾಕುವ ಆಲೋಚನೆಗಳಿಂದ ಹೊರಬಂದರೆ ಉತ್ತಮ.

Advertisement

ಇಷ್ಟಕ್ಕೂ ಮೊದಲಿಗೆ ಹೋಲಿಸಿದರೆ ಈಗ ಯುವತಿಯರು ತಡವಾಗಿ ಮದುವೆಯಾಗುತ್ತಿದ್ದಾರೆ. ಮದುವೆಯಾದ ಬಳಿಕವೂ ಇನ್ನೊಂದಷ್ಟು ವರ್ಷ ಕಳೆದು ಆಮೇಲೆ ಮಗುವನ್ನು ಪಡೆಯುವ ನಿರ್ಧಾರ ಮಾಡೋಣ ಎಂದು ಬಯಸಿದರೆ ಕೆಲವರಿಗೆ ಅದರಿಂದ ತೊಂದರೆ ಆದರೂ ಆಗಬಹುದು. ಏಕೆಂದರೆ ಈಗೀಗ ಬಹಳಷ್ಟು ಹೆಣ್ಣು ಮಕ್ಕಳು ಮಾತ್ರವಲ್ಲದೆ ಗಂಡು ಮಕ್ಕಳಲ್ಲಿಯೂ ಸಂತಾನಕ್ಕೆ ಸಂಬಂಧಿಸಿದಂತೆ ತೊಂದರೆ ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ವೈದ್ಯರ ಸಲಹೆ ಪಡೆದು ಮಕ್ಕಳನ್ನು ಪಡೆಯುವತ್ತ ಗಮನಹರಿಸಬೇಕಿದೆ.

ಏತಕ್ಕಾಗಿ ತಡವಾಗಿ ವಿವಾಹವಾಗುವವರು ಮಕ್ಕಳನ್ನು ಪಡೆಯುವಲ್ಲಿ ತಡ ಮಾಡಬಾರದು ಎಂದು ಹೇಳುತ್ತಾರೆ ಎಂಬುದನ್ನು ವೈದ್ಯರು ಹೇಳಿದಂತೆ ಹೇಳುವುದಾದರೆ, ಮಹಿಳೆಯರಲ್ಲಿ 25ವರ್ಷ ವಯಸ್ಸಿನ ನಂತರ ಉತ್ಪತ್ತಿಯಾಗುವ ಅಂಡಾಣುವಿನ ಗುಣಮಟ್ಟ ಕಡಿಮೆಯಾಗುತ್ತ ಬರುತ್ತದೆ. ಗರ್ಭದಲ್ಲಿನ ಭ್ರೂಣದ ಮೊದಲ ಹಂತವು ಋತುಚಕ್ರದಲ್ಲಿ ನಷ್ಟವಾಗುವ ಪ್ರಮಾಣ ಹೆಚ್ಚುತ್ತದೆ. ಇದೂ ಒಂದು ರೀತಿಯಲ್ಲಿ ಗರ್ಭಪಾತವೇ ಆಗಿರುತ್ತದೆ. ಋತುಮತಿಯಾದ ಸಂದರ್ಭದಲ್ಲಿ ರಕ್ತಸ್ರಾವದ ಜೊತೆಗೆ ಈ ಬಗೆಯ ಗರ್ಭಪಾತ ಸಂಭವಿಸಿರುತ್ತದೆಯಂತೆ.

Advertisement

ಸಾಮಾನ್ಯವಾಗಿ ಋತುಚಕ್ರದ 17-18 ನೇ ದಿನ ಈ ಪ್ರಕ್ರಿಯೆ ಸಂಭವಿಸಿರುತ್ತದೆ. ಮಹಿಳೆಯರ ಅರಿವಿಗೇ ಬಾರದಂತೆ ಇದು ನಡೆಯುತ್ತದೆ. ಉತ್ಪತ್ತಿಯಾದ ಭ್ರೂಣ ಗರ್ಭಪಾತವಾಗುವ ಅಪಾಯವು ಕಿರಿ ವಯಸ್ಸಿನ ಮಹಿಳೆಯರಲ್ಲಿ ಶೇ. 24 ರಷ್ಟು ಮತ್ತು 35 ವರ್ಷ ದಾಟಿದ ಮಹಿಳೆಯರಲ್ಲಿ ಶೇ.38ರಷ್ಟು ಇರುತ್ತದೆ. ಅಂಡಾಣುಗಳ ಅಂಶವಷ್ಟೇ ಅಲ್ಲದೇ, ಗರ್ಭದ ಅಂಶಗಳೂ ಕೂಡ ವಯಸ್ಸಾದ ಮಹಿಳೆಯರಲ್ಲಿನ ಬಂಜೆತನದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ ಎಂದು ಹೇಳಲಾಗಿದೆ.

ಅಂಡಾಣುಗಳನ್ನು ಕಿರಿ ವಯಸ್ಸಿನ ಮಹಿಳೆಯರಿಂದ ಪಡೆದು ವಿಭಿನ್ನ ವಯೋಮಾನದ ಮಹಿಳೆಯರ ಗರ್ಭಾಶಯಕ್ಕೆ ದಾನ ಮಾಡಿದಾಗ ಫಲಿತಾಂಶ ವಿಭಿನ್ನವಾಗಿಯೇ ಇರುತ್ತದೆ. ಉದಾಹರಣೆಗೆ 40 ಅಥವಾ ಅದಕ್ಕಿಂತ ಹೆಚ್ಚಿನ ವಯೋಮಾನದ ಮಹಿಳೆಯರಲ್ಲಿ ಶೇಕಡಾ 10ರಷ್ಟು ಗರ್ಭ ಕಟ್ಟುವವಿಕೆ ಯಶಸ್ವಿಯಾದರೆ, 35ಕ್ಕಿಂತ ಸಣ್ಣ ವಯಸ್ಸಿನ ಮಹಿಳೆಯರಲ್ಲಿ ಇದರ ಯಶಸ್ಸಿನ ಪ್ರಮಾಣ ಶೇಕಡಾ 23ರಷ್ಟು. ರೂಢಿಗತವಾಗಿ ಹೇಳುವುದಾದರೆ, ಮಹಿಳೆ ಮೊದಲ ಬಾರಿ ಗರ್ಭ ಧರಿಸುವಾಗ 30 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರಬಾರದು.

ಇನ್ನು ವೃತ್ತಿಪರ ಮಹಿಳೆಯರು ತಮ್ಮ ಕುಟುಂಬದ ವಿಸ್ತರಣೆ ತಡವಾಗಲಿ ಎಂದು ಬಯಸಿದರೆ ಅಂಥವರು ತಮ್ಮ ದೇಹಾರೋಗ್ಯವನ್ನು (ಫಲವತ್ತತೆಯನ್ನು) ಸರಿಯಾಗಿ ಕಾಪಾಡಿಕೊಳ್ಳಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಬೊಜ್ಜು ಬೆಳೆಸಿಕೊಳ್ಳಬಾರದು. ಧೂಮಪಾನ ಕೂಡ ಮಾರಕ. ಹಾಗೆಯೇ ಅತಿಯಾದ ಮದ್ಯ ಸೇವನೆಯೂ ಋತುಚಕ್ರದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಅತಿಯಾದ ಕಾಫಿ ಸೇವನೆಯೂ ಕೂಡ ತೊಂದರೆದಾಯಕ. ಇದೂ ಮಹಿಳೆಯರ ಫಲವತ್ತತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ.

ವಯಸ್ಸಾದಂತೆ ಗರ್ಭಧರಿಸಲು ಅಥವಾ ತಂದೆಯಾಗಲು ಬೇಕಾದ ಫಲವತ್ತತೆ ಕಡಿಮೆಯಾಗುತ್ತದೆ ಎಂಬುದು ಸತ್ಯ. 35 ವರ್ಷಕ್ಕಿಂತ ತಡವಾಗಿ ಮದುವೆಯಾಗುವ ಮಹಿಳೆಯರು ಕುಟುಂಬ ಯೋಜನೆಯ ಯಾವುದೇ ಕ್ರಮವನ್ನು ಅನುಸರಿಸದೇ ಇರುವುದು ಒಳ್ಳೆಯದು. ಇಂತಹ ಮಹಿಳೆಯರು ಮದುವೆಯಾದ 6 ತಿಂಗಳಲ್ಲಿ ಗರ್ಭವತಿಯರಾಗದೇ ಇದ್ದರೆ ಕೂಡಲೇ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಒಳ್ಳೆಯದು.

Advertisement
Tags :
HEALTHLatetsNewsNewsKannadaಆರೋಗ್ಯ
Advertisement
Next Article