For the best experience, open
https://m.newskannada.com
on your mobile browser.
Advertisement

ಹಮಾಸ್‌-ಇಸ್ರೇಲ್‌ ಸಂಘರ್ಷ: ಗಾಜಾಪಟ್ಟಿಯಲ್ಲಿ 39 ಪತ್ರಕರ್ತರ ಸಾವು

ಹಮಾಸ್‌ ವಿರುದ್ಧ ಇಸ್ರೇಲ್‌ ತನ್ನ ದಾಳಿ ಆರಂಭಿಸಿದ ಬಳಿಕ ಕನಿಷ್ಠ 39 ಪತ್ರಕರ್ತರು ಮತ್ತು ಮಾಧ್ಯಮದ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ವರದಿಯಲ್ಲಿ ತಿಳಿಸಿದೆ.
02:43 PM Nov 09, 2023 IST | Ramya Bolantoor
ಹಮಾಸ್‌ ಇಸ್ರೇಲ್‌ ಸಂಘರ್ಷ  ಗಾಜಾಪಟ್ಟಿಯಲ್ಲಿ 39 ಪತ್ರಕರ್ತರ ಸಾವು

ಗಾಜಾ: ಹಮಾಸ್‌ ವಿರುದ್ಧ ಇಸ್ರೇಲ್‌ ತನ್ನ ದಾಳಿ ಆರಂಭಿಸಿದ ಬಳಿಕ ಕನಿಷ್ಠ 39 ಪತ್ರಕರ್ತರು ಮತ್ತು ಮಾಧ್ಯಮದ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ವರದಿಯಲ್ಲಿ ತಿಳಿಸಿದೆ. 1992ರಿಂದ ಇದುವರೆಗೆ ನಡೆದ ಪತ್ರಕರ್ತರ ಸಾವು ಪ್ರಕರಣದಲ್ಲಿ ಕಳೆದ ಅಕ್ಟೋಬರ್‌ ತಿಂಗಳಿನಲ್ಲಿ ಅತಿ ಹೆಚ್ಚು ಸಂಖ್ಯೆ ಅಂದರೆ 39 ಪತ್ರಕರ್ತರು ಸಾವನ್ನಪ್ಪಿದ್ದಾರೆ ಎಂದು ನ್ಯೂಯಾರ್ಕ್‌ ಮೂಲದ ಲಾಭೋದ್ದೇಶವಿಲ್ಲದ ಸಂಸ್ಥೆ ಸಿಪಿಜೆ ಹೇಳಿದೆ.

Advertisement

39 ಮಂದಿಯ ಪೈಕಿ 34 ಪ್ಯಾಲೇಸ್ಟಿನಿಯನ್, ನಾಲ್ಕು ಇಸ್ರೇಲಿ ಮತ್ತು ಒಬ್ಬ ಲೆಬನಾನಿಸ್ ಪತ್ರಕರ್ತರು ಸೇರಿದ್ದಾರೆ. ಅಲ್ಲದೆ ಎಂಟು ಪತ್ರಕರ್ತರು ಗಾಯಗೊಂಡಿದ್ದು, ಮೂವರು ನಾಪತ್ತೆಯಾಗಿದ್ದಾರೆ ಎಂದು ವರದಿ ಹೇಳಿದೆ. ಹಲವು ಪತ್ರಕರ್ತರಿಗೆ ಬೆದರಿಕೆ ಹಾಕಿ ಮಾಧ್ಯಮ ಕಚೇರಿಗಳು ಮತ್ತು ಪತ್ರಕರ್ತರ ಮನೆಗಳಿಗೆ ಹಾನಿ ಎಸಗಲಾಗಿದೆ ಎಂದು ಸಿಪಿಜೆ ಹೇಳಿದೆ. ದಾಳಿಯ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಿಪಿಜೆಯ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಸಂಯೋಜಕ ಶೆರಿಫ್ ಮನ್ಸೂರ್ ಹೇಳಿದ್ದಾರೆ.

Advertisement
Advertisement
Tags :
Advertisement