ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನಾಲ್ಕನೇ ದಿನಕ್ಕೆ ₹100 ಕೋಟಿ ಗಳಿಸಿದ ಹನುಮಾನ್

ತೇಜ್‌ ಸಜ್ಜಾ ನಟನೆಯ ಹನುಮ್ಯಾನ್ ಸಿನಿಮಾ ಶುಕ್ರವಾರ(ಜ.12) ಬಿಡುಗಡೆಯಾಗಿದೆ.
06:26 PM Jan 16, 2024 IST | Ramya Bolantoor

ಹೈದರಾಬಾದ್‌: ತೇಜ್‌ ಸಜ್ಜಾ ನಟನೆಯ ಹನು‌ಮಾನ್  ಸಿನಿಮಾ ಶುಕ್ರವಾರ(ಜ.12) ಬಿಡುಗಡೆಯಾಗಿದೆ. ಈ ಸಿನಿಮಾ ನಾಲ್ಕು ದಿನದಲ್ಲಿ ಜಗತ್ತಿನಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ ₹100 ಕೋಟಿ ಗಳಿಕೆ ಮಾಡಿದೆ ಎಂದು ಚಿತ್ರತಂಡ ಮಂಗಳವಾರ ಹೇಳಿದೆ.ಪ್ರಶಾಂತ್‌ ವರ್ಮಾ ನಿರ್ದೇಶಿಸಿದ ಈ ಚಿತ್ರ ಸಿನಿಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರೊಡಕ್ಷನ್‌ ಹೌಸ್‌ ಪ್ರೈಮ್‌ ಶೋ ಎಂಟರ್‌ಟೈನ್ಮೆಂಟ್‌ ಮಾಹಿತಿ ಹಂಚಿಕೊಂಡಿದೆ.

Advertisement

ಹನುಮಾನ್‌ ಚಿತ್ರದ ಕಥೆ ಅಂಜನಾದ್ರಿ ಎನ್ನುವ ಪುಟ್ಟ ಹಳ್ಳಿಯಲ್ಲಿ ಸಾಗುತ್ತದೆ. ಹನುಮಂತದ ರಕ್ತದ ಹನಿಯೊಂದು ಮಣಿಯಾಗಿ ಪರಿವರ್ತನೆಗೊಂಡು ಸಮುದ್ರದ ಆಳದಲ್ಲಿ ಭದ್ರವಾಗಿರುತ್ತದೆ. ಅದು ನಾಯಕನಿಗೆ ಸಿಕ್ಕಾಗ, ಆತನಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ, ಸೂಪರ್‌ಮ್ಯಾನ್‌ ಆಗಬೇಕೆಂದು ಆ ಮಣಿಯನ್ನು ಕದಿಯಲು ಬಂದ ಖಳನಾಯಕನಿಂದ ಸ್ವಂತ ಊರು ಮತ್ತು ಮಣಿಯನ್ನು ನಾಯಕ ಹೇಗೆ ರಕ್ಷಿಸುತ್ತಾನೆ ಎನ್ನುವುದು ಕಥೆಯ ಸಾರಾಂಶವಾಗಿದೆ.

Advertisement

Advertisement
Tags :
filmLatestNewsNewsKannada
Advertisement
Next Article