For the best experience, open
https://m.newskannada.com
on your mobile browser.
Advertisement

ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರ ಬಂಧನ

ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್‌ ಕೊಲೆ ಪ್ರಕರಣ ಹಿನ್ನಲೆ  ಈ  ಮೂವರು ಭಾರತೀಯರನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ.ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು, ಮೂವರು ಭಾರತೀಯರಾದ ಕರಣ್ಪ್ರೀತ್ ಸಿಂಗ್, 28, ಕಮಲ್ಪ್ರೀತ್ ಸಿಂಗ್, 22 ಮತ್ತು ಕರಣ್ ಬ್ರಾರ್, 22 ಎಂಬವವರನ್ನು ಬಂಧಿಸಿದ್ದಾರೆ.
01:46 PM May 04, 2024 IST | Nisarga K
ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ   ಮೂವರು ಭಾರತೀಯರ ಬಂಧನ
ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರ ಬಂಧನ

ಕೆನಡಾ:  ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್‌ ಕೊಲೆ ಪ್ರಕರಣ ಹಿನ್ನಲೆ  ಈ  ಮೂವರು ಭಾರತೀಯರನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ.ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು, ಮೂವರು ಭಾರತೀಯರಾದ ಕರಣ್ಪ್ರೀತ್ ಸಿಂಗ್, 28, ಕಮಲ್ಪ್ರೀತ್ ಸಿಂಗ್, 22 ಮತ್ತು ಕರಣ್ ಬ್ರಾರ್, 22 ಎಂಬವವರನ್ನು ಬಂಧಿಸಿದ್ದಾರೆ.

Advertisement

ಭಾರತದ ಜತೆಗಿನ ನಮ್ಮ ಸಂಬಂಧದಲ್ಲಿ ಯಾವುದೇ ಬದಲಾವಣೆಗೊಂಡಿಲ್ಲ. ಈ ಹತ್ಯೆಯ ಬಗ್ಗೆ ತನಿಖೆ ನಡೆಸುತ್ತೇವೆ ಎಂದು RCMP ಸೂಪರಿಂಟೆಂಡೆಂಟ್ ಮಂದೀಪ್ ಮೂಕರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ತನಿಖಾಧಿಕಾರಿಗಳು ಕೆಲವು ತಿಂಗಳ ಹಿಂದೆ ಕೆನಡಾದಲ್ಲಿ ಈ ಶಂಕಿತರ ಬಗ್ಗೆ ಕಣ್ಗಾವಲು ಇರಿಸಿದ್ದರು.

ಕೆನಡಾದ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ US ಕಾನೂನು ಜಾರಿ ಸಂಸ್ಥೆಯ ಸಹಾಯವನ್ನು ಪಡೆದಿದ್ದಾರೆ. ಇನ್ನು ಈ ತನಿಖೆ ಇಲ್ಲಿಗೆ ಕೊನೆಗೊಂಡಿಲ್ಲ. ಈ ಹತ್ಯೆಯ ಹಿಂದೆ ಇನ್ನು ಅನೇಕರ ಪಾತ್ರವಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಅವನ್ನು ಕೂಡ ಪತ್ತೆ ಹಚ್ಚುವ ಕೆಲಸ ಮಾಡುತ್ತೇವೆ ಎಂದು ಸಹಾಯಕ RCMP ಕಮಿಷನರ್ ಡೇವಿಡ್ ಟೆಬೌಲ್ ಹೇಳಿದರು.

Advertisement

Advertisement
Tags :
Advertisement