ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಆರೋಗ್ಯವಾಗಿರಲು ದಿನಕ್ಕೊಂದು ಬಾದಾಮಿ ಸೇವಿಸಿ

ಬಾದಾಮಿ ದುಬಾರಿಯಾದರೂ ಆರೋಗ್ಯದ ದೃಷ್ಟಿಯಿಂದ ಇದು ಹಲವು ರೀತಿಯಲ್ಲಿ ಉಪಕಾರಿಯಾಗಿದೆ. ಹೀಗಾಗಿ ದಿನಕ್ಕೊಂದು ಬಾದಾಮಿ ಸೇವಿಸಿದರೂ ಅದರಿಂದ ಹತ್ತು ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ. ಹೀಗಾಗಿ ಬಾದಾಮಿಯಿಂದ ಏನೇನು ಅನುಕೂಲಗಳಿವೆ ಎಂಬುದನ್ನು ಅರಿತರೆ ಅದರ ಸೇವನೆ ಮಾಡಬೇಕೆನಿಸುವುದು ಸಹಜವೇ.
02:33 PM Mar 24, 2024 IST | Ashika S

ಬಾದಾಮಿ ದುಬಾರಿಯಾದರೂ ಆರೋಗ್ಯದ ದೃಷ್ಟಿಯಿಂದ ಇದು ಹಲವು ರೀತಿಯಲ್ಲಿ ಉಪಕಾರಿಯಾಗಿದೆ. ಹೀಗಾಗಿ ದಿನಕ್ಕೊಂದು ಬಾದಾಮಿ ಸೇವಿಸಿದರೂ ಅದರಿಂದ ಹತ್ತು ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ. ಹೀಗಾಗಿ ಬಾದಾಮಿಯಿಂದ ಏನೇನು ಅನುಕೂಲಗಳಿವೆ ಎಂಬುದನ್ನು ಅರಿತರೆ ಅದರ ಸೇವನೆ ಮಾಡಬೇಕೆನಿಸುವುದು ಸಹಜವೇ.

Advertisement

ಇವತ್ತಿನ ಪರಿಸ್ಥಿತಿಯಲ್ಲಿ ನಮಗೆ ಆರೋಗ್ಯವೇ ಮುಖ್ಯವಾಗಿದೆ. ಹೀಗಾಗಿ ಆರೋಗ್ಯವನ್ನು ಹೊರತುಪಡಿಸಿದ ಮತ್ತೊಂದು ಭಾಗ್ಯ ಯಾವುದೂ ಇಲ್ಲ ಎನ್ನಬಹುದು. ಹೀಗಾಗಿ ನಮ್ಮ ದಿನನಿತ್ಯದ ಊಟ ತಿಂಡಿಯಲ್ಲಿ ದೇಹಕ್ಕೆ ಪೋಷಕ ಶಕ್ತಿ ನೀಡುವ ಪದಾರ್ಥಗಳನ್ನು ಸೇವಿಸುವುದರ ಜೊತೆಗೆ ಕೆಲವೊಂದು ಔಷಧೀಯ ಗುಣಹೊಂದಿರುವ ಬಾದಾಮಿ ಸೇವಿಸುವುದು ಅಷ್ಟೇ ಆರೋಗ್ಯಕಾರಿ.

ಬಾಯಿಗೆ ರುಚಿಯಾಗಿರುವ ಬಾದಾಮಿಯನ್ನು ಹಾಗೆಯೇ ಅಥವಾ ಗೋಡಂಬಿ, ದ್ರಾಕ್ಷಿಯೊಂದಿಗೆ ಬೆರೆಸಿ ತಿನ್ನಬಹುದು.  ಇತರೆ ಖಾದ್ಯಗಳಲ್ಲಿ ಬಳಸಬಹುದು. ಹೆಚ್ಚಿನವರು ಬಾದಾಮಿ ತಿಂದರೆ ಒಳ್ಳೆಯದು ಎಂದು ಮಾತ್ರ ಗೊತ್ತು ಆದರೆ ನಮ್ಮ ದೇಹಕ್ಕೆ ಯಾವ ರೀತಿಯಲ್ಲಿ ಆರೋಗ್ಯ ಎಂಬುವುದು ಗೊತ್ತಿಲ್ಲ.  ಬಾದಾಮಿ ಆರೋಗ್ಯಕ್ಕೆ ಏಕೆ ಒಳ್ಳೆಯದೆಂದರೆ ಅದರಲ್ಲಿ ವಿಟಮಿನ್ ಮತ್ತು ಖನಿಜಾಂಶಗಳು ಹಾಗೂ ಫೈಬರ್ ಹೇರಳವಾಗಿವೆ. ಅಷ್ಟೇ ಅಲ್ಲ ಇ ವಿಟಮಿನ್, ಡಿ ವಿಟಮಿನ್ ಹಾಗೂ ಪೊಟ್ಯಾಷಿಯಂ, ಮೆಗ್ನೀಷಿಯಂ, ಕ್ಯಾಲ್ಸಿಯಂನಂತಹ ಖನಿಜಾಂಶಗಳು ಹೆಚ್ಚಿನ ಪ್ರಮಾಣದಲ್ಲಿವೆ.

Advertisement

ಇನ್ನು ಇದು ಓಮೆಗಾ 6 ಆಸಿಡ್ ಮಿಶ್ರಿತ ಕೊಬಿನಾಂಶ ಹೊಂದಿರುವುದರಿಂದ ಮೆದುಳಿನ ಸಮರ್ಪಕ ಕಾರ್ಯನಿರ್ವಹಣೆ ಮತ್ತು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ. ಜತೆಗೆ ಬುದ್ದಿಮತ್ತೆ ಹೆಚ್ಚಿಸುತ್ತದೆ ಎಂಬುದರಲ್ಲಿ  ಎರಡು ಮಾತಿಲ್ಲ. ಬಾದಾಮಿ ಎಣ್ಣೆಯನ್ನೂ ಬಳಸಬಹುದಾಗಿದೆ. ಚರ್ಮದ ಆರೋಗ್ಯಕ್ಕೆ ಉತ್ತಮವಾಗಿದ್ದು, ಅತ್ಯುತ್ತಮ ಡಯಟ್‌ಗೂ ಸಹಕಾರಿ. ಬಾದಾಮಿಯನ್ನು ಸೇವಿಸುವುದರಿಂದ ಹೃದಯ ಮೆದುಳು ಸೇರಿದಂತೆ ದೇಹದ ಕಾರ್ಯಚಟುವಟಿಕೆ ಸುಗಮವಾಗುತ್ತದೆ.

ರೈಬೋಪ್ಲೇವಿನ್ ಮತ್ತು ಎಲ್- ಕಾರ್ನಿಟೈನ್ ಎಂಬ ಪೌಷ್ಠಿಕಾಂಶಗಳು ಇದರಲ್ಲಿರುವುದರಿಂದ ಮೆದುಳಿನ ಚಟುವಟಿಕೆಯನ್ನು ಉದ್ದೀಪನಗೊಳಿಸುತ್ತದೆ. ಆಂಟಿ-ಆಕ್ಸಿಡಾಂಟ್ ಇರುವುದರಿಂದ ರಕ್ತದ ಪರಿಚಲನೆ ಸುಗಮಗೊಳಿಸುವ ಶಕ್ತಿಯನ್ನು ಹೊಂದಿದೆ. ಯುಕೃತ್ತಿನ ಸಮಸ್ಯೆಯಿಂದ ಉಂಟಾಗುವ ತೊಂದರೆಗಳನ್ನು ಪರಿಹರಿಸಿ ಶಕ್ತಿ ತುಂಬುತ್ತದೆ.  ಗ್ಲೂಕೋಸ್ ಅಂಶ ನಿಯಂತ್ರಣಕ್ಕೆ ತಂದು ಮದುಮೇಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಚರ್ಮ ಸುಕ್ಕು ಕಟ್ಟುವುದನ್ನು ತಡೆದು ಕಾಂತಿಯನ್ನು ಹೆಚ್ಚಿಸುತ್ತದೆ. ಕಬ್ಬಿಣದ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಹಿಮೋಗ್ಲೋಬಿನ್ ಹೆಚ್ಚಿ ಅನಿಮಿಯಾ (ರಕ್ತಹೀನತೆ)ವನ್ನು ತಡೆಗಟ್ಟುತ್ತದೆ. ರಾತ್ರಿ ವೇಳೆ ಮೂರ‍್ನಾಲ್ಕು ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಸಿಪ್ಪೆ ತೆಗೆದು ತಿನ್ನುವುದು ಒಳ್ಳೆಯದು.

ನಾವು ದಿನನಿತ್ಯ ಹಲವು ರೀತಿಯ ಆಹಾರ ಸೇವಿಸುತ್ತೇವೆ. ಇದರ ನಡುವೆ ದೇಹಕ್ಕೆ ಪೋಷಕಾಂಶ ಒದಗಿಸುವ  ಬಾದಾಮಿಯನ್ನು ಬಳಸುವ ಅಭ್ಯಾಸ ಮಾಡಿಕೊಂಡರೆ ಆರೋಗ್ಯದ ದೃಷ್ಟಿಯಿಂದ ಒಳಿತಾಗುತ್ತದೆ.

Advertisement
Tags :
almondHEALTHLatestNewsNewsKarnataka
Advertisement
Next Article