For the best experience, open
https://m.newskannada.com
on your mobile browser.
Advertisement

ವಾಟರ್ ಟ್ಯಾಂಕರ್, ಬೈಕ್ ನಡುವೆ ಮುಖಾಮುಖಿ ಡಿಕ್ಕಿ : ಓರ್ವ ಸಾವು, ಮತ್ತೋರ್ವ ಗಂಭೀರ

ವಾಟರ್ ಟ್ಯಾಂಕರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಹಿಂಬದಿ ಸವಾರ ಸಾವನ್ನಪ್ಪಿದ್ದು, ಮತ್ತೊಬ್ಬ ಸವಾರ ಗಂಭೀರ ಗಾಯಗೊಂಡ ಘಟನೆ ಮಾಗಡಿ ರಸ್ತೆಯ ಕಾವೇರಿ ಫ್ಯಾಷನ್ಸ್ ಬಳಿ ನಡೆದಿದೆ.
12:21 PM Apr 17, 2024 IST | Chaitra Kulal
ವಾಟರ್ ಟ್ಯಾಂಕರ್  ಬೈಕ್ ನಡುವೆ ಮುಖಾಮುಖಿ ಡಿಕ್ಕಿ   ಓರ್ವ ಸಾವು  ಮತ್ತೋರ್ವ ಗಂಭೀರ

ಬೆಂಗಳೂರು: ವಾಟರ್ ಟ್ಯಾಂಕರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಹಿಂಬದಿ ಸವಾರ ಸಾವನ್ನಪ್ಪಿದ್ದು, ಮತ್ತೊಬ್ಬ ಸವಾರ ಗಂಭೀರ ಗಾಯಗೊಂಡ ಘಟನೆ ಮಾಗಡಿ ರಸ್ತೆಯ ಕಾವೇರಿ ಫ್ಯಾಷನ್ಸ್ ಬಳಿ ನಡೆದಿದೆ.

Advertisement

ಬೈಕ್ ಹಿಂಬದಿ ಸವಾರ ಹರೀಶ್ ಸಾವನ್ನಪ್ಪಿದ ವ್ಯಕ್ತಿ. ಘಟನೆಯಲ್ಲಿ ಮತ್ತೊಬ್ಬ ಸವಾರ ಸುಚಿತ್ ಗೆ ಗಂಭೀರ ಗಾಯವಾಗಿದೆ.

ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೈಕ್ ಹಾಗೂ ವಾಟರ್ ಟ್ಯಾಂಕರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ದೃಶ್ಯದಲ್ಲಿ ಟ್ಯಾಂಕರ್ ಡಿಕ್ಕಿ ಹೊಡೆದ ರಭಸಕ್ಕೆ ಓರ್ವ ಸವಾರ ಹಾರಿ ಬಿದ್ದಿದ್ದಾನೆ.

Advertisement

ವಾಟರ್ ಟ್ಯಾಂಕರ್ ಬೈಕ್ ಹಾಗೂ ಇನ್ನೊಬ್ಬ ಸವಾರನನ್ನ ಎಳೆದುಕೊಂಡು ಹೋಗಿದೆ. ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
Advertisement