For the best experience, open
https://m.newskannada.com
on your mobile browser.
Advertisement

ನಾಲ್ಕು ದಿನದ ವರುಣನ ಆರ್ಭಟಕ್ಕೆ 63 ಮಂದಿ ಬಲಿ, 100ಕ್ಕೂ ಹೆಚು ಮಂದಿ ನಾಪತ್ತೆ

ಇಲ್ಲಿವರೆಗೆ ಬಿಸಿಲಿನ ಶಾಪ ತಡೆದ ನಮಗೆ ಇದೀಗ ವರುಣನ ಶಾಪವನ್ನು ತಡೆಯಬೇಕಾಗಿದೆ. ಆರ್ಭಟಿಸುತ್ತ ಬರುತ್ತಿರುವ ವರುಣನಿಗೆ ಈಗಾಗಲೇ ಜನ ಆಸ್ತಿ ಕೊಚ್ಚಿ ಹೋಗಿದೆ.
03:09 PM Apr 17, 2024 IST | Nisarga K
ನಾಲ್ಕು ದಿನದ ವರುಣನ ಆರ್ಭಟಕ್ಕೆ 63 ಮಂದಿ ಬಲಿ  100ಕ್ಕೂ ಹೆಚು ಮಂದಿ ನಾಪತ್ತೆ
ನಾಲ್ಕು ದಿನದ ವರುಣನ ಆರ್ಭಟಕ್ಕೆ 63 ಮಂದಿ ಬಲಿ, 100ಕ್ಕೂ ಹೆಚು ಮಂದಿ ನಾಪತ್ತೆ

ಪಾಕಿಸ್ತಾನ : ಇಲ್ಲಿವರೆಗೆ ಬಿಸಿಲಿನ ಶಾಪ ತಡೆದ ನಮಗೆ ಇದೀಗ ವರುಣನ ಶಾಪವನ್ನು ತಡೆಯಬೇಕಾಗಿದೆ. ಆರ್ಭಟಿಸುತ್ತ ಬರುತ್ತಿರುವ ವರುಣನಿಗೆ ಈಗಾಗಲೇ ಜನ ಆಸ್ತಿ ಕೊಚ್ಚಿ ಹೋಗಿದೆ.

Advertisement

ಪಾಕಿಸ್ತಾನದಲ್ಲಿ ಕಳೆದ 4 ದಿನಗಳಿಂದ ಧಾರಕಾರವಾಗಿ ಗುಡುಗು, ಮಿಂಚು ಸಮೇತ ಮಳೆಯಾಗುತ್ತಿರುವ ಕಾರಣ 63 ಮಂದಿ ಸಾವನಪ್ಪಿದ್ದು, 100 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.ಪಾಕ್​ನಲ್ಲಿ ಭಾರೀ ಮಳೆ ಹಾಗೂ ಗುಡುಗಿನಿಂದ 14 ಜನರು ಮೃತಪಟ್ಟರೇ, ದೇಶದ ವಾಯುಭಾಗದಲ್ಲಿ ಮನೆಗಳು ನೆಲಕ್ಕೆ ಉರುಳಿ 32 ನಿವಾಸಿಗಳು ಸಾವನ್ನಪ್ಪಿದ್ದಾರೆ. ಇದರಲ್ಲಿ 15 ಮಕ್ಕಳು, 5 ಮಹಿಳೆಯರು ಕೂಡ ಸೇರಿದ್ದಾರೆ.

Advertisement

ಬಲೂಚಿಸ್ತಾನ್​​ದಲ್ಲೂ 10 ಮಂದಿ ಸಾವಿಗೀಡಾಗಿದ್ದಾರೆ. 1,370ಕ್ಕೂ ಹೆಚ್ಚು ಮನೆಗಳಿಗೆ ಮಳೆಯಿಂದ ಹಾನಿಯಾಗಿದೆ ಎಂದು ಅಲ್ಲಿನ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ. ಇದೀಗ ಕಾಣೆಯಾದವರ ಹುಡುಕಾಟದಲ್ಲಿ ರಕ್ಷಣಾ ಸಿಂಬ್ಬಂಧಿ ಕಾರ್ಯಚರಣೆ ನಡೆಸಿದ್ದಾರೆ.

ಪಾಕಿಸ್ತಾನದ ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ರಸ್ತೆಗಳು ಗುರುತು ಸಿಗದಂತಾಗಿದೆ.ಹಲವು ಕಡೆ ಮರಗಳು, ಕರೆಂಟ್ ಕಂಬಗಳು ನೆಲಕ್ಕೆ ಉರುಳಿ ಬಿದ್ದಿದ್ದರಿಂದ ವಿದ್ಯುತ್ ಇಲ್ಲದೇ ಜನರು ಪರದಾಡಿದ್ದಲ್ಲದೇ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ ಎಂದು ಹೇಳಲಾಗಿದೆ

Advertisement
Tags :
Advertisement