ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಭರ್ಜರಿ ಮಳೆಗೆ ತತ್ತರಿಸಿದ ಮಹಾ ನಗರ: ಕಾಲೇಜುಗಳಿಗೆ 1 ವಾರಗಳ ಕಾಲ ರಜೆ ಘೋಷಣೆ

ಕಳೆದ 5 ದಿನಗಳಿಂದ ಧಾರಾಕಾರ ಮಳೆಗೆ ನೆರೆರಾಷ್ಟ್ರ ಯೂನೈಟೆಡ್​​ ಅರಬ್​​​ ಎಮಿರೇಟ್ಸ್​ ತತ್ತರಿಸಿ ಹೋಗಿದೆ. ಅದರಲ್ಲೂ ಇಡೀ ದಿನ ಸುರಿಯುತ್ತಿರೋ ಜೋರು ಮಳೆಗೆ ರಸ್ತೆ, ಮನೆಗಳು ಜಲಾವೃತ ಆಗಿವೆ. ಇದರ ಪರಿಣಾಮ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇದು ದುಬೈನಲ್ಲೇ ಸುರಿದ ಅತೀ ದೊಡ್ಡ ಮಳೆ ಎಂದು ಹೇಳಲಾಗುತ್ತಿದೆ.
08:07 PM Apr 19, 2024 IST | Ashitha S

ದುಬೈ: ಕಳೆದ 5 ದಿನಗಳಿಂದ ಧಾರಾಕಾರ ಮಳೆಗೆ ನೆರೆರಾಷ್ಟ್ರ ಯೂನೈಟೆಡ್​​ ಅರಬ್​​​ ಎಮಿರೇಟ್ಸ್​ ತತ್ತರಿಸಿ ಹೋಗಿದೆ. ಅದರಲ್ಲೂ ಇಡೀ ದಿನ ಸುರಿಯುತ್ತಿರೋ ಜೋರು ಮಳೆಗೆ ರಸ್ತೆ, ಮನೆಗಳು ಜಲಾವೃತ ಆಗಿವೆ. ಇದರ ಪರಿಣಾಮ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇದು ದುಬೈನಲ್ಲೇ ಸುರಿದ ಅತೀ ದೊಡ್ಡ ಮಳೆ ಎಂದು ಹೇಳಲಾಗುತ್ತಿದೆ.

Advertisement

ಒಂದೆಡೆ ಭಾರೀ ಮಳೆಗೆ ತತ್ತರಿಸಿದ ದುಬೈ. ಇನ್ನೊಂದೆಡೆ ಪರಿಹಾರ ಕಾರ್ಯ ಭರದಿಂದ ಸಾಗಿದ್ರೂ ಸುಧಾರಿಸದ ದುಬೈ ನಗರ. ಇಡೀ ದಿನ ಸುರಿದ ಮಳೆಗೆ ದುಬೈ ನಗರ ಅಕ್ಷರಶಃ ನಲುಗಿ ಹೋಗಿದೆ. ಹೀಗಾಗಿ ಯುನೈಟೆಡ್‌ ಅರಬ್ ಎಮಿರೇಟ್ಸ್‌ನಲ್ಲಿ ಎಲ್ಲ ಶಾಲಾ ಕಾಲೇಜುಗಳಿಗೆ 1 ವಾರಗಳ ಕಾಲ ರಜೆ ಘೋಷಿಸಲಾಗಿದೆ.

ಇನ್ನು, ಮಳೆಗೆ ನಗರಗಳಲ್ಲಿನ ರಸ್ತೆಗಳು, ಫುಟ್ ಪಾತ್​ಗಳು, ಹೈವೇಗಳು ಎಲ್ಲವೂ ಜಲಾವೃತ ಆಗಿದ್ದು ಮಾತ್ರವಲ್ಲದೆ ಕಾರುಗಳು, ಬೈಕುಗಳು ಕೊಚ್ಚಿಕೊಂಡು ಹೋಗಿವೆ. ಇಂದು ಕೂಡ ದುಬೈನಲ್ಲಿ ಮಳೆಗೆ ಇಬ್ಬರು ಬಲಿಯಾಗಿದ್ದಾರೆ. ಇದುವರೆಗೂ ದುಬೈನಲ್ಲಿ ಮಳೆಗೆ 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

Advertisement

Advertisement
Tags :
BreakingNewsDUBAIindiaKARNATAKARAIN
Advertisement
Next Article