ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬೆಂಗಳೂರು ನಗರದಲ್ಲಿ ಭಾರಿ ಮಳೆ: ಟ್ವೀಟ್‌ ಮಾಡಿದ ಪೊಲೀಸರು ಹೇಳಿದ್ದೇನು

ಬೆಂಗಳೂರು ಮೈಸೂರು ಹೆದ್ದಾರಿ ಭಾರಿ ಮಳೆಯಿಂದಾಗಿ ಸಂಪೂರ್ಣ ಜಲಾವೃತವಾಗಿ ವಾಹನ ಸವಾರರು ಪರದಾಟ ಅನುಭವಿಸಿದ ವಿಷಯ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.
08:50 PM Nov 04, 2023 IST | Ashika S

ಬೆಂಗಳೂರು: ಬೆಂಗಳೂರು ಮೈಸೂರು ಹೆದ್ದಾರಿ ಭಾರಿ ಮಳೆಯಿಂದಾಗಿ ಸಂಪೂರ್ಣ ಜಲಾವೃತವಾಗಿ ವಾಹನ ಸವಾರರು ಪರದಾಟ ಅನುಭವಿಸಿದ ವಿಷಯ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

Advertisement

ಇದೀಗ ಬೆಂಗಳೂರು ನಗರದಲ್ಲಿಯೂ ಭಾರಿ ಮಳೆಯಾಗುತ್ತಿದೆ. ವೈಟ್ ಫೀಲ್ಡ್ ಸುತ್ತಮುತ್ತ ಮಳೆಯಿಂದ ಅವ್ಯವಸ್ಥೆಯಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದೆ. ರಸ್ತೆಯಲ್ಲಿ ನಿಂತ ನೀರಿ‌ನಿಂದ ಬೈಕ್ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ನಗರದ ವರ್ತೂರು ಕೊಡಿ, ವರ್ತೂರು, ಪಣತ್ತೂರು ಸುತ್ತಮುತ್ತ ಸವಾರರ ಪರದಾಟ ನಡೆಸಿದ್ದು, ಈ ಹಿನ್ನಲೆ ವೈಟ್ ಫೀಲ್ಡ್ ಸಂಚಾರಿ ಹಾಗೂ ಎಚ್​ಎಎಲ್ ಸಂಚಾರಿ ಪೊಲೀಸರು ‘ಬೈಕ್ ಸವಾರರು ಜಾಗೃತವಾಗಿ ತೆರಳುವಂತೆ ಟ್ವೀಟ್​ ಮಾಡಿ ಸೂಚಿಸಿದ್ದಾರೆ. ಉಳಿದಂತೆ ಪೀಣ್ಯ, ದಾಸರಹಳ್ಳಿ, ಬಾಗಲಗುಂಟೆ, ಮಲ್ಲಸಂದ್ರ ಸೇರಿದಂತೆ ಹಲವು ಏರಿಯಾಗಳಲ್ಲಿ ಮಳೆಯಾಗಿದೆ.

Advertisement

Advertisement
Tags :
LatestNewsNewsKannadaಜಲಾವೃತಪರದಾಟಭಾರಿ ಮಳೆಮಳೆವಾಹನ ಸವಾರ
Advertisement
Next Article